ನವೋದಯ ಪ್ರೌಢಶಾಲೆ ಬೆಟ್ಟಂಪಾಡಿ – ವಾರ್ಷಿಕ ಕ್ರೀಡಾಕೂಟ

0

ಬೆಟ್ಟಂಪಾಡಿ: ನವೋದಯ ಪ್ರೌಢಶಾಲೆ ಬೆಟ್ಟಂಪಾಡಿಯ 2022-2023 ನೇ ಶೈಕ್ಷಣಿಕ ವರ್ಷದ ವಾರ್ಷಿಕ ಕ್ರೀಡಾಕೂಟವು ಬಿಲ್ವಗಿರಿ ಕ್ರೀಡಾಂಗಣದಲ್ಲಿ ದ. 6 ರಂದು ಜರಗಿತು.

ನವೋದಯ ಪ್ರೌಢಶಾಲೆಯ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ದಯಾನಂದ ರೈ ಕೋರ್ಮ‌ಂಡ ಧ್ವಜಾರೋಹಣ ಮಾಡುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಬೆಟ್ಟಂಪಾಡಿ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಸೀತಾರಾಮ ಗೌಡ ಮಿತ್ತಡ್ಕ, ಸುಬೋಧ ಪ್ರೌಢಶಾಲೆ ಪಾಣಾಜೆಯ ದೈಹಿಕ ಶಿಕ್ಷಣ ಶಿಕ್ಷಕ ಸುಧೀರ್ ರೈ ಹಾಗೂ ಕಾಟುಕುಕ್ಕೆ ಹೈಯರ್ ಸೆಕೆಂಡರಿ ಶಾಲೆಯ ಹಿಂದಿ ಅಧ್ಯಾಪಕ ಮನೋಹರ ಭಟ್ ಉಪಸ್ಥಿತರಿದ್ದರು.

ನವೋದಯ ವಿದ್ಯಾ ಸಮಿತಿಯ‌ ಕಾರ್ಯದರ್ಶಿ ನಾರಾಯಣ ಭಟ್ ಸಹಕಾರವನ ಉಪಸ್ಥಿತರಿದ್ದು ಅತಿಥಿಗಳನ್ನು ಶಾಲು ಹಾಕಿ ಗೌರವಿಸಿದರು. ನವೋದಯ ವಿದ್ಯಾ ಸಮಿತಿಯ ಅಧ್ಯಕ್ಷ ಬಾಲಕೃಷ್ಣ ಭಟ್ ಘಾಟೆ ದೀಪ ಪ್ರಜ್ವಲನದ ಮೂಲಕ ಕಾರ್ಯಕ್ರಮ ಉದ್ಘಾಟಿಸಿ , ಶುಭ ಹಾರೈಸಿದರು. ಮುಖ್ಯಗುರು ಪುಷ್ಪಾವತಿ ಎಸ್. ಸ್ವಾಗತಿಸಿದರು. ಶಿಕ್ಷಕ ರಾಧಾಕೃಷ್ಣ ಕೆ. ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಸುಮಂಗಲಾ ಕೆ. ವಂದಿಸಿದರು. ಹಿಂದಿ ಭಾಷಾ ಶಿಕ್ಷಕಿ ಪ್ರವೀಣ ಕುಮಾರಿ, ಶೋಭಾ ಬಿ. ಭುವನೇಶ್ವರಿ ಎಂ., ಕುಮಾರಿ ರೇವತಿ, ಯಸ್ತಿತಾ, ಕಚೇರಿ ಸಹಾಯಕ ನಾರಾಯಣ ಬನ್ನಿಂತಾಯ, ವಿದ್ಯಾರ್ಥಿ ಶಿಕ್ಷಕರಾದ ರೋಹಿತ್ ಹಾಗೂ ಕುಮಾರಿ ಹರ್ಷಿತಾ ಮತ್ತು ಶಿಕ್ಷಕೇತರ ಸಿಬ್ಬಂದಿಗಳು ಸಹಕರಿಸಿದರು.

LEAVE A REPLY

Please enter your comment!
Please enter your name here