ಪ.ಪೂರ್ವ ಕಾಲೇಜುಗಳ ಜಿಲ್ಲಾ ಮಟ್ಟದ ಅಥ್ಲೆಟಿಕ್ ಕ್ರೀಡಾಕೂಟ- ಹುಡುಗಿಯರ ವಿಭಾಗದಲ್ಲಿ ಫಿಲೋಮಿನಾ ಪಿಯು ಕಾಲೇಜು ರನ್ನರ್ಸ್

0

ಪುತ್ತೂರು: ಪದವಿ ಪೂರ್ವ ಶಿಕ್ಷಣ ಇಲಾಖೆ ದ.ಕ ಜಿಲ್ಲೆ, ಮಂಗಳೂರು ಇದರ ಆಶ್ರಯದಲ್ಲಿ ಮೂಡಬಿದ್ರೆ ಆಳ್ವಾಸ್ ಪಿಯು ಕಾಲೇಜಿನ ಸ್ವರಾಜ್ ಮೈದಾನದಲ್ಲಿ ನಡೆದ ಪದವಿ ಪೂರ್ವ ಶಿಕ್ಷಣ ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಮಾಯಿದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಹುಡುಗಿಯರ ವಿಭಾಗವು ರನ್ನರ್ಸ್ ಪ್ರಶಸ್ತಿಯನ್ನು ಪಡೆದಿರುತ್ತದೆ.

ಹುಡುಗಿಯರ ವಿಭಾಗದಲ್ಲಿ ದ್ವಿತೀಯ ವಿಜ್ಞಾನ ವಿಭಾಗದ ಎಂ.ಎಸ್ ಚೈತನ್ಯರವರು 100ಮೀ ಹರ್ಡಲ್ಸ್‌ನಲ್ಲಿ ಬೆಳ್ಳಿ, 4*100ಮೀ ರಿಲೇಯಲ್ಲಿ ಚಿನ್ನದ ಪದಕ, ಡಿಂಪಲ್ ಎಸ್.ಬಂಗೇರರವರು 100ಮೀ ಓಟದಲ್ಲಿ ಬೆಳ್ಳಿ, 4*100ಮೀ ರಿಲೇಯಲ್ಲಿ ಚಿನ್ನದ ಪದಕ, ಚೈತ್ರಿಕಾ ಎಂರವರು 400ಮೀ ಓಟದಲ್ಲಿ ಕಂಚು, 4*100ಮೀ ರಿಲೇಯಲ್ಲಿ ಚಿನ್ನದ ಪದಕ, ಚೈತ್ರಾ ಶೆಟ್ಟಿರವರು 4*400ಮೀ ರಿಲೇಯಲ್ಲಿ ಕಂಚು, ದ್ವಿತೀಯ ವಾಣಿಜ್ಯ ವಿಭಾಗದ ವರ್ಷಾರವರು ಹ್ಯಾಮರ್ ತ್ರೋನಲ್ಲಿ ಬೆಳ್ಳಿ, ದ್ವಿತೀಯ ಕಲಾ ವಿಭಾಗದ ನವ್ಯಶ್ರೀ ಜಿ.ರವರು 5000ಮೀ ಓಟದಲ್ಲಿ ಬೆಳ್ಳಿ, 3000ಮೀ ಓಟ ಹಾಗೂ 4*400ಮೀ ರಿಲೇಯಲ್ಲಿ ಕಂಚು, ಪ್ರಥಮ ವಿಜ್ಞಾನ ವಿಭಾಗದ ಕೆ.ಎಸ್ ಶ್ರೀವರ್ಧನರವರು 3ಕಿ.ಮೀ ನಡಿಗೆಯಲ್ಲಿ ಚಿನ್ನ, ಅನಘ ಕೆ.ಎನ್‌ರವರು 200ಮೀ ಓಟದಲ್ಲಿ ಬೆಳ್ಳಿ, 4*100ಮೀ ರಿಲೇಯಲ್ಲಿ ಚಿನ್ನ, ಇಶಿಕಾ ಕೆರವರು ಹೈಜಂಪ್‌ನಲ್ಲಿ ಕಂಚು, ದೃಶ್ಯ ಕೆ.ವಿರವರು ಜಾವೆಲಿನ್ ತ್ರೋನಲ್ಲಿ ಕಂಚು, ಪ್ರಥಮ ವಾಣಿಜ್ಯ ವಿಭಾಗದ ಅಮೃತಾ ಕೆ.ರವರು 4*400ಮೀ ರಿಲೇಯಲ್ಲಿ ಕಂಚಿನ ಪದಕ ಪಡೆದುಕೊಂಡಿದ್ದಾರೆ.

ಹುಡುಗರ ವಿಭಾಗದಲ್ಲಿ ಪ್ರಥಮ ವಾಣಿಜ್ಯ ವಿಭಾಗದ ಆದರ್ಶ್ ಶೆಟ್ಟಿರವರು ಹೈಜಂಪ್‌ನಲ್ಲಿ ಚಿನ್ನ, ಕೆ.ಆರ್ ಯಶ್ವಿನ್‌ರವರು ಹೈಜಂಪ್‌ನಲ್ಲಿ ಕಂಚು, ದ್ವಿತೀಯ ವಾಣಿಜ್ಯ ವಿಭಾಗದ ಮಹೇಶ್ ಬಿ.ರವರು 1500ಮೀ ಓಟದಲ್ಲಿ ಬೆಳ್ಳಿ, 3000ಮೀ ಓಟ ಹಾಗೂ 5000ಮೀ ಓಟದಲ್ಲಿ ಕಂಚು, ಕೀರ್ತನ್ ಸಿ. ಹಾಗೂ ಪ್ರಥಮ ವಿಜ್ಞಾನ ವಿಭಾಗದ ಆದಿತ್ಯ ಡಿ.ಡಿರವರು 4*400ಮೀ ರಿಲೇಯಲ್ಲಿ ಕಂಚಿನ ಪದಕ ಪಡೆದುಕೊಂಡಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲ ವಂ|ಅಶೋಕ್ ರಾಯನ್ ಕ್ರಾಸ್ತಾ, ದೈಹಿಕ ಶಿಕ್ಷಣ ನಿರ್ದೇಶಕರಾದ ಎಲ್ಯಾಸ್ ಪಿಂಟೋ, ರಾಜೇಶ್ ಮೂಲ್ಯರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

10 ಮಂದಿ ರಾಜ್ಯ ಮಟ್ಟಕ್ಕೆ…

ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಉತ್ತಮ ಸಾಧನೆಗೈದ ದ್ವಿತೀಯ ವಿಜ್ಞಾನ ವಿಭಾಗದ ಎಂ.ಎಸ್ ಚೈತನ್ಯ, ಡಿಂಪಲ್ ಎಸ್.ಬಂಗೇರ, ಚೈತ್ರಿಕಾ ಎಂ, ದ್ವಿತೀಯ ವಾಣಿಜ್ಯ ವಿಭಾಗದ ವರ್ಷಾ, ಮಹೇಶ್ ಬಿ, ದ್ವಿತೀಯ ಕಲಾ ವಿಭಾಗದ ನವ್ಯಶ್ರೀ ಜಿ, ಪ್ರಥಮ ವಿಜ್ಞಾನ ವಿಭಾಗದ ಕೆ.ಎಸ್ ಶ್ರೀವರ್ಧನ, ಅನಘಾ ಕೆ.ಎನ್, ಪ್ರಥಮ ವಾಣಿಜ್ಯ ವಿಭಾಗದ ಆದರ್ಶ್ ಶೆಟ್ಟಿ, ಕೆ.ಆರ್ ಯಶ್ವಿನ್‌ರವರು ರಾಜ್ಯ ಮಟ್ಟದ ಕ್ರೀಡಾಲಕೂಟಕ್ಕೆ ಆಯ್ಕೆಯಾಗಿದ್ದಾರೆ. ರಾಜ್ಯ ಮಟ್ಟದ ಕ್ರೀಡಾಕೂಟವು ಡಿಸೆಂಬರ್ 16 ರಿಂದ 19ರ ವರೆಗೆ ಮಂಗಳೂರಿನಲ್ಲಿ ಜರಗಲಿದೆ.

24 ಪದಕಗಳು..
ಕಾಲೇಜಿನ ಹುಡುಗರ ಹಾಗೂ ಹುಡುಗಿಯರ ವಿಭಾಗದಲ್ಲಿ 6 ಚಿನ್ನ, 6 ಬೆಳ್ಳಿ ಮತ್ತು 12 ಕಂಚಿನ ಪದಕಗಳನ್ನು ಗಳಿಸಿಕೊಂಡಿದೆ.

LEAVE A REPLY

Please enter your comment!
Please enter your name here