ಜನಪ್ರೀಯ ಸೆಂಟ್ರಲ್ ಸ್ಕೂಲ್‌ನಲ್ಲಿ ಮಕ್ಕಳ ವಾರ್ಷಿಕ ಕ್ರೀಡಾಕೂಟ ಕ್ರೀಡೆ-2022 ಉದ್ಘಾಟನೆ

0

ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಿಂದ ದೈಹಿಕ, ಮಾನಸಿಕ, ಭಾವನಾತ್ಮಕ ಬೆಳವಣಿಗೆ ಸಾಧ್ಯ: ಜ್ಞಾನೇಶ್ ಎಂ.ಪಿ.

ನೂತನ ಕಟ್ಟಡದಲ್ಲಿ ಉನ್ನತ ಶಿಕ್ಷಣ ನೀಡುವ ಕೆಲಸವಾಗಲಿದೆ: ಅಬ್ದುಲ್ ಬಶೀರ್ ವಿ.ಕೆ.

ಮಕ್ಕಳನ್ನು ಸ್ನೇಹಿತರಂತೆ ಕಂಡರೆ ಅವರನ್ನು ಸತ್ಪ್ರಜೆಗಳನ್ನಾಗಿ ಮಾಡಲು ಸಾಧ್ಯ: ರಫೀಕ್ ಮಾಸ್ಟರ್

ರಾಷ್ಟ್ರೀಯ ಶಿಕ್ಷಣ ನೀತಿಯಂತೆ ಮಕ್ಕಳಿಗೆ ಶಿಕ್ಷಣ ನೀಡಲಾಗುತ್ತಿದೆ: ಡಾ. ರವಿಕುಮಾರ್ ಎಲ್.ಪಿ.

ವಿಟ್ಲ: ಜನರಿಗೆ ಪ್ರಿಯವಾದುದು ಜನಪ್ರೀಯ. ನಮ್ಮ ನಿಜವಾದ ಸಂಪತ್ತು ಈ ದೇಹ. ದೇಹವನ್ನು ದೃಢೀಕರಣ ಮಾಡುವಂತದ್ದು ದೈಹಿಕ ಶಿಕ್ಷಣ. ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಿಂದ ದೈಹಿಕ, ಮಾನಸಿಕ, ಭಾವನಾತ್ಮಕ ಬೆಳವಣಿಗೆ ಸಾಧ್ಯ. ನೀತಿವಂತರಾಗದೆ ಸಮಾಜದಲ್ಲಿ ಬದುಕಲು ಸಾಧ್ಯವಿಲ್ಲ. ನಮ್ಮ ಭಾವನೆ ಸಂತೋಷದ ಮೂಲಕಾರಣ ಎಂದು ಬಂಟ್ವಾಳ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್ ಎಂ.ಪಿ. ರವರು ಹೇಳಿದರು. ಅವರು ಕಂಬಳಬೆಟ್ಟುವಿನಲ್ಲಿರುವ ಜನಪ್ರೀಯ ಸೆಂಟ್ರಲ್ ಸ್ಕೂಲ್ ನಲ್ಲಿ ಡಿ.10ರಂದು ನಡೆದ ಮಕ್ಕಳ ವಾರ್ಷಿಕ ಕ್ರೀಡಾಕೂಟ ಕ್ರೀಡೆ-2022ನ್ನು ಉದ್ಘಾಟಿಸಿ ಮಾತನಾಡಿದರು.

ಜನಪ್ರೀಯ ಪೌಂಡೇಶನ್ ನ ಚೇರ್ ಮ್ಯಾನ್ ಡಾ. ಅಬ್ದುಲ್ ಬಶೀರ್ ವಿ.ಕೆ.ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಬಹಳ ಸುಂದರ ಕಾರ್ಯಕ್ರಮವನ್ನು ಆಯೋಜನೆ ಮಾಡಿರುವ ತೃಪ್ತಿ ನಮಗಿದೆ. ಜನಪ್ರೀಯ ಸೆಂಟ್ರಲ್ ಸ್ಕೂಲ್ ನ ಅಭಿವೃದ್ದಿಯಲ್ಲಿ ಮಕ್ಕಳ ಪೋಷಕರ ಪಾತ್ರ ಮಹತ್ತರದ್ದಾಗಿದೆ. ನಮ್ಮ ಶಾಲೆಯ ನೂತನ ಕಟ್ಟಡವನ್ನು 6 ತಿಂಗಳಲ್ಲಿ ಪೂರ್ಣಗೊಳಿಸಲಾಗಿದೆ. ಮುಂದಿನ ಹಂತದಲ್ಲಿ ಉನ್ನತ ಶಿಕ್ಷಣವನ್ನು ನೀಡುವ ಕೆಲಸ ನಮ್ಮ ಸಂಸ್ಥೆಯಿಂದಾಗಲಿದೆ. ಶಿಕ್ಷಣದ ಜೊತೆಗೆ ಶಿಕ್ಷಕೇತರ ಚಟುವಟಿಕೆಗಳಲ್ಲಿ ಮಕ್ಕಳು ತೊಡಗಿಕೊಳ್ಳಬೇಕು ಎನ್ನುವ ನಿಟ್ಟಿನಲ್ಲಿ ಎಲ್ಲಾ ವಿಧದ ಚಟುವಟಿಕೆಗಳನ್ನು ಆಯೋಜನೆ ಮಾಡಿದ್ದೇವೆ. ನಮ್ಮ ಶಾಲೆಯ ಹುಟ್ಟು ಲಾಭದ ಉದ್ದೇಶಕ್ಕಾಗಿ ಅಲ್ಲ. ಪೇಟೆ ಪಟ್ಟಣಗಳಲ್ಲಿ ಸಿಗುವ ಶಿಕ್ಷಣ ನಮ್ಮ ಹಳ್ಳಿ ಭಾಗದ ಮಕ್ಕಳಿಗೆ ಸಿಗಬೇಕೆನ್ನುವ ನಿಟ್ಟಿನಲ್ಲಿ ಈ ಒಂದು ಶಾಲೆಯ ಹುಟ್ಟು ಆಗಿದೆ. ನಾನು ಹಾಸನದಲ್ಲಿ ವೈದ್ಯನಾಗಿದ್ದರೂ ಊರಿನ ಜನರೊಂದಿಗೆ ಬೆರೆಯಲು ಇದೊಂದು ಸದಾವಕಾಶವಾಗಿದೆ. ಸಂಸ್ಥೆಯ ಬೆಳವಣಿಗೆಯಲ್ಲಿ ಎಲ್ಲರೂ ಸಹಕಾರ ನೀಡಬೇಕಾಗಿ ವಿನಂತಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಶೆಕ್ಷಣಿಕ ತರಬೇತುದಾರ ರಫೀಕ್ ಮಾಸ್ಟರ್ ರವರು ಮಾತನಾಡಿ ಸಂಸ್ಥೆಯ ವ್ಯವಸ್ಥೆ ನೋಡಿದಾಗ ಸಂತೋಷವಾಗುತ್ತದೆ. ಮಕ್ಕಳ ಬೆಳವಣಿಗೆಯಲ್ಲಿ ತಾಯಂದಿರ ಪಾತ್ರ ಅಪಾರ. ಮಕ್ಕಳಲ್ಲಿ ಪೊಸಿಟೀವ್ ಎನರ್ಜಿಯನ್ನು ತುಂಬುವ ಕೆಲಸವಾಗಬೇಕು. ಜಗತ್ತಿಗೆ ಪ್ರತಿಯೊಂದು ಮಗುವೂ ಶ್ರೇಷ್ಟವೇ. ಪ್ರತಿಭೆಗಳ ಅನಾವರಣಕ್ಕೆ ಸ್ಪೂರ್ತಿ, ಸಹಕಾರ ಅಗತ್ಯ. ನಮ್ಮ ಮಕ್ಕಳನ್ನು ಸ್ನೇಹಿತರಂತೆ ಕಂಡರೆ ಅವರನ್ನು ಸತ್ಪ್ರಜೆಗಳನ್ನಾಗಿ ಮಾಡಲು ಸಾದ್ಯ. ಆಸ್ತಿ ಅಂತಸ್ತಿಗಿಂತ ಹೆಚ್ಚು ಬೆಲೆಬಾಳುವುದು ನಮ್ಮ ಮಕ್ಕಳು. ನಿಮ್ಮ ಮನಸ್ಥಿತಿ ನಿಮ್ಮ ಬೆಳವಣಿಗೆಗೆ ಕಾರಣ. ಜನಪ್ರೀಯ ಶಾಲೆಯ ಜನಪ್ರೀಯತೆ ಎಲ್ಲೆಡೆ ಪಸರಿಸಲಿ ಎಂದು ಶುಭಹಾರೈಸಿದರು.

ವಿಶ್ವಸಂಸ್ಥೆಯ ರಾಷ್ಟ್ರೀಯ ಕಾರ್ಯದರ್ಶಿ ಡಾ. ರವಿಕುಮಾರ್ ಎಲ್.ಪಿ. ಮಕ್ಕಳ ಏಳಿಗೆಗೆ ಪೋಷಕರ ಪಾತ್ರ ಅಪಾರವಾದುದು. ಒಳ್ಳೆಯ ಮನಸ್ಸಿನವರು ನಮ್ಮೊಂದಿಗೆ ಇದ್ದಾಗ ಕೆಲಸ ಕಾರ್ಯಗಳು ಉತ್ತಮವಾಗಿರುತ್ತದೆ. ಮಕ್ಕಳಿಗೆ ಸಮಯದ ಮೌಲ್ಯಗಳನ್ನು‌ ಕಲಿಸುವ ಕೆಲಸ ಪೋಷಕರಿಂದ ಆಗಬೇಕು. ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಹೇಳಿರುವ ರೀತಿಯಲ್ಲಿ ಮಕ್ಕಳಿಗೆ ಶಿಕ್ಷಣ ನೀಡಲಾಗಿದೆ. ಇಂದಿಲ್ಲಿ ನಡೆಯುತ್ತಿರುವ ಕ್ರೀಡೆ ಒಂದು ಕಾಂಪಿಟೇಶನ್ ಅಲ್ಲ. ಮಕ್ಕಳಿಗೆ ನೀಡುವ ಪ್ರೋತ್ಸಾಹವಾಗಿದೆ ಎಂದರು.

ಜನಪ್ರೀಯ ಫೌಂಡೇಶನ್ ನ ಅಧ್ಯಕ್ಷರಾದ ಫಾತಿಮಾ ನಸ್ರಿನಾ ಬಶೀರ್, ಶಾಲಾ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಶಾಕೀರ್ ಅಳಕೆಮಜಲು, ಆಡಳಿತಾಧಿಕಾರಿ ಸಫ್ವಾನ್ ಪಿಲಿಕಲ್ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿದ ಬಂಟ್ವಾಳ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್ ಎಂ.ಪಿ., ಮುಖ್ಯ ಅತಿಥಿಗಳಾಗಿ ಆಗಮಿಸಿದ ಶೆಕ್ಷಣಿಕ ತರಬೇತುದಾರ ರಫೀಕ್ ಮಾಸ್ಟರ್ ರವರನ್ನು‌ ಸನ್ಮಾನಿಸಲಾಯಿತು.

ಕರಾಟೆಯಲ್ಲಿ ಸಾಧನೆ ಮಾಡಿದ ಶಾಲಾ ವಿದ್ಯಾರ್ಥಿಗಳಾದ ಮಹಮ್ಮದ್ ಮುನಾಫ್, ಮಹಮ್ಮದ್ ರಾಇಪ್ ರವರನ್ನು ಗೌರವಿಸಲಾಯಿತು.

ಶಾಲಾ ಪ್ರಾಂಶುಪಾಲರಾದ ಪ್ರೀಯ ದುರೈರಾಜ್ ಸ್ವಾಗತಿಸಿದರು. ಉಷಾಕಿರಣ, ರಶ್ಮಿ ಕಾರ್ಯಕ್ರಮ ನಿರೂಪಿಸಿದರು. ಮಹಮ್ಮದ್ ಶಹಾನ್ ವಂದಿಸಿದರು.

LEAVE A REPLY

Please enter your comment!
Please enter your name here