ಚಿತ್ರ- ಜೀತ್ ಪುತ್ತೂರು
ಪುತ್ತೂರು: ಕಾವು- ಈಶ್ವರಮಂಗಲ ಕ್ರಾಸ್‌ನಲ್ಲಿರುವ ಕೆ.ಬಿ.ರೈ ಕಾಂಪ್ಲೆಕ್ಸ್ ಮತ್ತು ಕೆ.ಬಿ.ಸ್ಟೋರ್( ಹಾರ್ಡ್‌ವೇರ್ ಮತ್ತು ಇನ್ನಿತರ ಕೃಷಿ ಸಲಕರಣೆಗಳ ಮಾರಾಟ) ಇದರ ಉದ್ಘಾಟನೆಯು ದ. 9 ರಂದು ನಡೆಯಿತು.
ಪುತ್ತೂರು ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕ ಕಾವು ಹೇಮನಾಥ ಶೆಟ್ಟಿರವರು ಕೆ.ಬಿ.ರೈ ಕಾಂಪ್ಲೆಕ್ಸ್ ಮತ್ತು ಕೆ.ಬಿ.ಸ್ಟೋರ್ ಇದರ ಉದ್ಘಾಟನೆಯನ್ನು ನೇರವೇರಿಸಿದರು. ಮುಖ್ಯ ಅತಿಥಿಗಳಾಗಿ ಸಾಮಾಜಿಕ ಮುಂದಾಳು ನನ್ಯ ಅಚ್ಚುತ ಮೂಡಿತ್ತಾಯ, ಕಾವು ಬುಶ್ರಾ ವಿದ್ಯಾ ಸಂಸ್ಥೆಯ ಸಂಚಾಲಕ ಅಬ್ದುಲ್ ಅಜೀಜ್ ಬುಶ್ರಾ, ಡಾ.ನವೀನ್‌ಶಂಕರ್ ಕಾವು, ಬಾಲಕೃಷ್ಣ ಆಳ್ವ ಅಲೆಪ್ಪಾಡಿರವರುಗಳು ಶುಭಹಾರೈಸಿದರು.
ಅತಿಥಿಗಳಾಗಿ ಉದ್ಯಮಿ ಹೀರಾ ಖಾದರ್ ಈಶ್ವರಮಂಗಲ, ಗ್ರಾ.ಪಂ ಸದಸ್ಯರುಗಳಾದ ಮೋನಪ್ಪ ಪೂಜಾರಿ ಕೆರೆಮಾರು, ದಿವ್ಯನಾಥ್ ಶೆಟ್ಟಿ ಕಾವು, ಜಯಂತಿ ಪಟ್ಟುಮೂಲೆರವರುಗಳು ಉಪಸ್ಥಿತರಿದ್ದರು. ಸಮಾರಂಭದಲ್ಲಿ ಆನಂದ ರೈ ಡಿಂಬ್ರಿ, ಉಮಾನಾಥ ಆಳ್ವ ಅಲೆಪ್ಪಾಡಿ, ದಯಾನಂದ ರೈ ಡಿಂಬ್ರಿ, ಪ್ರವೀಣ್ ರೈ ಕಾವು, ಕಾರ್ತಿಕ್ ಆಳ್ವ, ಅಲೆಪ್ಪಾಡಿ, ಶರತ್ ರೈ ನೆಲ್ಲಿತಡ್ಕ, ನಳಿನಿ ರೈ ನೆಲ್ಲಿತಡ್ಕ, ಪ್ರವೀಣ್ ರೈ ಕಾವು, ಸಲೀಂ ಕಾಕ ಕಾವು, ಸುಮಲತಾ ಆಳ್ವ ಅಲೆಪ್ಪಾಡಿ, ಸಂಧ್ಯಾ ವಿ.ರೈ ಸಹಿತ ಅನೇಕ ಮಂದಿ ಭಾಗವಹಿಸಿದರು.
ಕೆ.ಬಿ.ರೈ ಕಾಂಪ್ಲೆಕ್ಸ್ ಮಾಲಕ ಬಾಲಕೃಷ್ಣ ರೈ ಮುಳ್ಳೇರಿಯರವರು ಸಾರ್ವಜನಿಕರ ಸಹಕಾರವನ್ನು ಕೋರಿದರು.
ಕುರಿಯ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ವಿಜಯಹರಿ ರೈ ಬಳ್ಳಮಜಲು, ಕೆ.ಬಿ.ಸ್ಟೋರ್ ಮಾಲಕರಾದ ದಿವಾಕರ ರೈ ಕೆದಿಕಂಡೆ, ವಿಜಯ ರೈರವರುಗಳು ಅತಿಥಿಗಳನ್ನು ಗೌರವಿಸಿದರು.
ದೀಪಿಕಾ ಪುರುಷೋತ್ತಮ ಪ್ರಾರ್ಥಿಸಿದರು. ಯುವರಾಜ ಪೂಂಜ ಸ್ವಾಗತಿಸಿ, ಕಾರ‍್ಯಕ್ರಮ ನಿರೂಪಿಸಿದರು.