ಎರಕ್ಕಳ ತರವಾಡು ಮನೆಯ ಯಜಮಾನ ಎಲ್ಯಣ್ಣ ಗೌಡರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ

0

ಪುತ್ತೂರು: ಕೆಯ್ಯೂರು ಗ್ರಾಮದ ಎರಕ್ಕಳ ತರವಾಡು ಮನೆಯ ಯಜಮಾನ, ಪ್ರಗತಿಪರ ಕೃಷಿಕ ಎಲ್ಯಣ್ಣ ಗೌಡರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ ದ.14 ರಂದು ಎರಕ್ಕಳ ತರವಾಡು ಮನೆಯಲ್ಲಿ ಜರಗಿತು.

ಮಂಗಳೂರು ಸೈಂಟ್ ಅಲೋಶಿಯಸ್ ಕಾಲೇಜಿನ ಕನ್ನಡ ವಿಭಾಗದ ಉಪನ್ಯಾಸಕ ಡಾ. ವಿಶ್ವನಾಥ ಬದಿಕಾನರವರು ನುಡಿ ನಮನ ಸಲ್ಲಿಸುತ್ತಾ, ಎರಕ್ಕಳ ತರವಾಡು ಮನೆಯ ಯಜಮಾನರಾಗಿದ್ದ ಎಲ್ಯಣ್ಣ ಗೌಡರವರು ಓರ್ವ ಸರಳ ಸಜ್ಜನಿಕಯ ವ್ಯಕ್ತಿಯಾಗಿದ್ದರು. ತಮ್ಮ ಆಜಾನಬಾಹು ದೇಹ, ಎಲ್ಲರೊಂದಿಗೆ ನಗುಮೊಗದಿಂದ ಬೆರೆಯುವ ಇವರು ಪ್ರಗತಿಪರ ಕೃಷಿಕರಾಗಿ, ಕಂಬಳ ಪ್ರೇಮಿಯಾಗಿಯೂ ಗುರುತಿಸಿಕೊಂಡವರು.

ತ್ಯಾಂಪಣ್ಣ ಗೌಡರ ನಾಲ್ಕನೇ ಮಗನಾಗಿ ಎಲ್ಯಣ್ಣ ಗೌಡರವರು 23.12.1932 ರಲ್ಲಿ ಜನಿಸಿದ್ದಾರೆ. ತಂದೆಯ ನೆಚ್ಚಿನ ಮಗನಾಗಿದ್ದ ಇವರು ತಂದೆಯನ್ನು ಉತ್ತಮವಾಗಿ ನೋಡಿಕೊಂಡವರು ಅದೇ ಗುಣ ಎಲ್ಯಣ್ಣ ಗೌಡರವರ ಮಕ್ಕಳಿಗೆ ಬಂದಿದೆ ಎಂದು ಹೇಳಲು ಹೆಮ್ಮೆಯಾಗುತ್ತದೆ. ಎಲ್ಯಣ್ಣ ಗೌಡರವರು ಕೃಷಿ ಬದುಕನ್ನು ನೆಚ್ಚಿಕೊಂಡು ಬಂದವರು, ಚಿಕ್ಕಂದಿನಲ್ಲಿಯೇ ಕೃಷಿಯನ್ನು ಪ್ರೀತಿಸುತ್ತಿದ್ದ ಇವರು 2 ಮುಡಿ ಗದ್ದೆ ಬೇಸಾಯವನ್ನು ಕೂಡ ಮಾಡಿಕೊಂಡಿದ್ದರು. ಕಂಬಳದ ಅಭಿಮಾನಿಯಾಗಿಯೂ ಎತ್ತುಗಳನ್ನು ಓಡಿಸುವಂತಹ ಕಾರ್ಯದಲ್ಲೂ ಗುರುತಿಸಿಕೊಂಡವರು.

ಭತ್ತ, ಅಡಿಕೆ ಮತ್ತು ವೀಲ್ಯದೆಳೆಯ ಕೃಷಿಯಲ್ಲಿ ಎಲ್ಯಣ್ಣ ಗೌಡರವರು ನಿಫುಣರಾಗಿದ್ದರು. ತನ್ನ ಜಾಗದಲ್ಲಿ ವೀಳ್ಯದೆಳೆ ಬೆಳೆಸಿ ಅದನ್ನು ನಡೆದುಕೊಂಡೇ ಪುತ್ತೂರಿಗೆ ತಂದು ಮಾರಾಟ ಮಾಡಿ ಆ ರೀತಿಯಲ್ಲಿ ಮನೆಯನ್ನು ಬೆಳೆಸಿದವರು ಆಗಿದ್ದಾರೆ. ಬಹಳ ಕಷ್ಟದಿಂದ ಮೇಲೆ ಬಂದ ಈ ಕುಟುಂಬ ಇವರದ್ದಾಗಿತ್ತು. ಅಪಾರ ದೈವ ದೇವರ ಭಕ್ತರಾಗಿ, ಶಿಕ್ಷಣ ಪ್ರೇಮಿಯಾಗಿ, ಊರಿಗೆ ಉಪಕಾರಿಯಾಗಿ ಎಲ್ಲರೊಂದಿಗೆ ಪ್ರೀತಿ, ವಿಶ್ವಾಸ, ನಗುಮೊಗದಿಂದ ವ್ಯವಹರಿಸುವ ವ್ಯಕ್ತಿತ್ವ ಇವರದ್ದಾಗಿತ್ತು. ತನ್ನ ಆಜಾನುಬಾಗಿ ದೇಹ ಹಾಗೂ ನಗುಮೊಗದ ಮಾತುಗಳಿಂದ ಎಲ್ಯಣ್ಣ ಗೌಡರೆಂದರೆ ಯಾರು ಎಂಬುದು ಇಡೀ ಗ್ರಾಮಕ್ಕೆ ತಿಳಿದಿತ್ತು. ಇಂತಹ ವ್ಯಕ್ತಿತ್ವವನ್ನು ಹೊಂದಿದ ಎಲ್ಯಣ್ಣ ಗೌಡರವರು 29.11.2022 ರಂದು ನಿಧನರಾಗುತ್ತಾರೆ. ಅವರ ಆತ್ಮಕ್ಕೆ ಭಗವಂತ ಚಿರಶಾಂತಿ ಕರುಣಿಸಲಿ ಎಂಬುದೇ ನಮ್ಮೆಲ್ಲರ ಪ್ರಾರ್ಥನೆಯಾಗಿದೆ ಎಂದು ವಿಶ್ವನಾಥ ಬದಿನಾರುರವರು ನುಡಿನಮನ ಸಲ್ಲಿಸಿದರು.


ಎಲ್ಯಣ್ಣ ಗೌಡರ ಹಿರಿಯ ಪುತ್ರ ಜಗನ್ನಾಥ ಗೌಡ ಎರಕ್ಕಳರವರು ದೀಪ ಬೆಳಗಿಸಿ ನುಡಿ ನಮನ ಸಲ್ಲಿಸಿದರು. ಎಲ್ಯಣ್ಣ ಗೌಡರವರ ಪತ್ನಿ ಕಮಲ ಎರಕ್ಕಳ ಹಾಗೂ ಪುತ್ರರು, ಪುತ್ರಿಯರು, ಸೊಸೆಯಂದಿರು, ಅಳಿಯಂದಿರು, ಕುಟುಂಬಸ್ಥರು ಹಾಗೂ ಸೇರಿದದವರು ಎಲ್ಯಣ್ಣ ಗೌಡರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ನಮನ ಸಲ್ಲಿಸಿದರು. ಒಂದು ನಿಮಿಷಗಳ ಮೌನ ಪ್ರಾರ್ಥನೆಯ ಮೂಲಕ ಚಿರಶಾಂತಿ ಕೋರಲಾಯಿತು.

ಈ ಸಂದರ್ಭದಲ್ಲಿ ಪುತ್ರರಾದ ಜಗನ್ನಾಥ ಗೌಡ ಎರಕ್ಕಳ, ಜಯಚಂದ್ರ ಗೌಡ ಎರಕ್ಕಳ, ತಾರಾನಾಥ ಗೌಡ ಎರಕ್ಕಳ, ಬಾಲಕೃಷ್ಣ ಗೌಡ ಎರಕ್ಕಳ, ಪುತ್ರಿಯರಾದ ಲೀಲಾವತಿ ಎರಕ್ಕಳ, ದೇವಕಿ ಎರಕ್ಕಳ, ಸೊಸೆಯಂದಿರಾದ ವೇದಾವತಿ, ಭವಾನಿ, ಮೋಹನಾಂಗಿ, ಶಶಿಕಲಾ, ಅಳಿಯಂದಿರಾದ ಗುಮ್ಮಣ್ಣ ಗೌಡ ಆನೆಗುಂಡಿ, ಆನಂದ ಗೌಡ ಕುಡ್ಚಿಲ, ಎರಕ್ಕಳ ತರವಾಡು ಮನೆ ಕುಟುಂಬಸ್ಥರು, ಎಲ್ಯಣ್ಣ ಗೌಡರ ಮೊಮ್ಮಕ್ಕಳು, ಮರಿಮಕ್ಕಳು ಅಲ್ಲದೆ ಪುತ್ತೂರು ತಾಲೂಕು ಒಕ್ಕಲಿಗ ಗೌಡ ಸಂಘದ ಅಧ್ಯಕ್ಷ ವಿಶ್ವನಾಥ ಗೌಡ, ಒಕ್ಕಲಿಗ ಗೌಡ ಸಂಘ ಕೆದಂಬಾಡಿ ಗ್ರಾಮ ಸಮಿತಿ ಅಧ್ಯಕ್ಷ ಶಿವರಾಮ ಗೌಡ ಇದ್ಯಪೆ, ಎಲಿಯ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಕರುಣಾಕರ ಗೌಡ ಎಲಿಯ, ಕೆಯ್ಯೂರು ಶ್ರೀ ಕ್ಷೇತ್ರದ ಮಾಜಿ ಆಡಳಿತ ಮೊಕ್ತೇಸರ ಓಲೆಮುಂಡೋವು ಮೋಹನ್ ರೈ, ಜಿಪಂ ಮಾಜಿ ಸದಸ್ಯೆ ಪುಷ್ಪಾವತಿ ಕಳುವಾಜೆ, ಭಾಸ್ಕರ ಗೌಡ ಕಳುವಾಜೆ, ಕುಶಾಲಪ್ಪ ಗೌಡ ಕಳುವಾಜೆ, ವೇಣುಗೋಪಾಲ ಕಳುವಾಜೆ, ಶುಭಪ್ರಕಾಶ್ ಎರಬೈಲು, ಮೋಹನ್ ಗೌಡ ಎರಕ್ಕಳ, ಕುಂಞಣ್ಣ ಗೌಡ ಪಳಂಬೆ, ಹರೀಶ್ ಗೌಡ ಪಳಂಬೆ ಸೇರಿದಂತೆ ನೂರಾರು ಮಂದಿ ಎಲ್ಯಣ್ಣ ಗೌಡರ ಹಿತೈಷಿಗಳು, ಬಂಧುಗಳು ,ಗಣ್ಯರು ,ಹಿರಿಯರು ಭಾಗವಹಿಸಿದ್ದರು. ಶ್ರದ್ಧಾಂಜಲಿ ಕಾರ್ಯಕ್ರಮಕ್ಕೆ ಮೊದಲು ಶ್ರೀರಾಮ ಭಜನಾ ಮಂಡಳಿ ಚಿಕ್ಮೂಳಿ (ಟ್ಯಾಲೆಂಟ್ ಹಂಟರ್‍ಸ್) ಇವರಿಂದ ಭಜನಾ ಕಾರ್ಯಕ್ರಮ ನಡೆಯಿತು.

ಉಜಿತ್ ಶ್ಯಾಮ್ ಸ್ವಾಗತಿಸಿ, ವಂದಿಸಿದರು. ಉತ್ತರ ಕ್ರಿಯಾಧಿ ಸದ್ಗಿತಿ ಕಾರ್ಯಕ್ರಮದ ಬಗ್ಗೆ ಸೇರಿದವರಿಗೆ ಮಧ್ಯಾಹ್ನ ಸಮಾರಾಧನೆ ನಡೆಯಿತು.

LEAVE A REPLY

Please enter your comment!
Please enter your name here