ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಕನ್ನಡ ಕಂಠಪಾಠ ಸ್ಪರ್ಧೆ: ಪುಚ್ಚೇರಿ ಶಾಲೆಯ ಅಭಿಜ್ಞಾ ಪ್ರಥಮ

0

ನೆಲ್ಯಾಡಿ: ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ದ.ಕ.ಜಿಲ್ಲಾ ಮಟ್ಟದ ’ಪ್ರತಿಭಾ ಕಾರಂಜಿ-2022’ರ ಪ್ರಾಥಮಿಕ ಶಾಲಾ ವಿಭಾಗದ ಕನ್ನಡ ಕಂಠಪಾಠ ಸ್ಪರ್ಧೆಯಲ್ಲಿ ನೆಲ್ಯಾಡಿ ಗ್ರಾಮದ ಪುಚ್ಚೇರಿ ಸರಕಾರಿ ಹಿ.ಪ್ರಾ.ಶಾಲೆಯ 7ನೇ ತರಗತಿ ವಿದ್ಯಾರ್ಥಿನಿ ಅಭಿಜ್ಞಾ ಪಿ.,ರವರು ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಈಕೆ ಪುಚ್ಚೇರಿ ಸರಕಾರಿ ಹಿ.ಪ್ರಾ.ಶಾಲೆಯ ಮುಖ್ಯಗುರು ಪದ್ಮನಾಭ ಪಿ.,ಹಾಗೂ ನೂಜಿಬಾಳ್ತಿಲ ಉನ್ನತ ಹಿ.ಪ್ರಾ.ಶಾಲೆಯ ಮುಖ್ಯಶಿಕ್ಷಕಿ ಸುಂದರಿಯವರ ಪುತ್ರಿ.

LEAVE A REPLY

Please enter your comment!
Please enter your name here