ಕಬಕ ಸರಕಾರಿ ಪ್ರೌಢ ಶಾಲೆಯಲ್ಲಿ ಕಾನೂನು ಮಾಹಿತಿ

0

ಪುತ್ತೂರು: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾಯ ಮಂಗಳೂರು, ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಪುತ್ತೂರು ಇವುಗಳ ಸಹಯೋಗದಲ್ಲಿ ದ.ಕ ಜಿಲ್ಲಾ ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟ, ಶಿಕ್ಷಣ ಸಂಪನ್ಮೂಲ ಕೇಂದ್ರ ಪುತ್ತೂರು ಇದರ ಸಹಕಾದರೊಂದಿಗೆ ರಾಷ್ಟ್ರೀಯ ಗ್ರಾಹಕ ದಿನಾಚರಣೆಯ ಅಂಗವಾಗಿ ಕಾನೂನು ಮಾಹಿತಿ ಕಾರ್ಯಕ್ರಮವು ಡಿ.24ರಂದು ಕಬಕ ಸ.ಪ. ಪೂ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ನಡೆಯಿತು.


ಕಾರ್ಯಕ್ರಮವನ್ನು ದೀಪ ಬೆಳಗಿಸಿದ 2ನೇ ಹೆಚ್ಚುವರಿ ವ್ಯವಹಾರಿಕ ನ್ಯಾಯಾಧೀಶ ಯೋಗೇಂದ್ರ ಶೆಟ್ಟಿ ಮಾತನಾಡಿ, ಗ್ರಾಹಕರು ಮೋಸ ಹೋಗುವ ‌ಮುನ್ನ ಕಾನೂನಿನ ಜ್ಞಾನವನ್ನು ಪಡೆದುಕೊಳ್ಳಬೇಕು. ಮೋಸ ಹೋದ ಮೇಲೆ ಏನು ಮಾಡಲು ಸಾಧ್ಯವಿಲ್ಲ. ದೈನಂದಿನ ವ್ಯವಹಾರದಲ್ಲಿ ಗ್ರಾಹಕರಿಗೆ ಎದುರಾಗುವ ತೊಂದರೆಗಳನ್ನು ಎದುರಿಸಲು ಗ್ರಾಹಕ ರಕ್ಷಣಾ ಕಾಯಿದೆ ಜಾರಿಗೊಳಿಸಲಾಗಿದೆ. ಕಾಯಿದೆಯಲ್ಲಿ ಕೆಲವೊಂದು ಹಕ್ಕು ಮತ್ತು ಕರ್ತವ್ಯ ಗಳನ್ನು ನೀಡಿದೆ. ಗ್ರಾಹಕರ ಸುರಕ್ಷತೆಯೇ ಪ್ರಮುಖವಾಗಿದೆ. ಯಾವುದೇ ಉತ್ಪನ್ನಗಳ ಎಲ್ಲ ಮಾಹಿತಿಯನ್ನು ಪಡೆದುಕೊಳ್ಳುವ ಅವಕಾಶ ಕಾಯಿದೆಯಲ್ಲಿದೆ. ಖರೀದಿಸಿದ ವಸ್ತು ತೃಪ್ತಿದಾಯಕವಾಗದಿದ್ದರೆ ಖರೀದಿಸಿದ ಎರಡು ವರ್ಷಗಳ ಅವಧಿಯೊಳಗಡೆ ಪ್ರಕಣ ದಾಖಲಿಸಬೇಕು. ಇದಕ್ಕೆ ವಕೀಲರನ್ನೇ ಅವಲಂಬಿಸದೇ ನೇರವಾಗಿ ಪ್ರಕರಣ ದಾಖಲಿಸಬಹುದು ಎಂದು ಹೇಳಿದರು.

ಸಂಪನ್ಮೂಲ ವ್ಯಕ್ತಿಯಾಗಿದ್ದ ನ್ಯಾಯವಾದಿ ಹೀರಾ ಉದಯ್ ಮಾತನಾಡಿ,. ಗ್ರಾಹಕರಿಗೆ ತೊಂದರೆ‌ ಆದಾಗ, ತೃಪ್ತಿ ದಾಯಕ ಸೇವೆ ದೊರೆಯದೆ ಇದ್ದಾಗ, ವಂಚನೆಗಗಳಾದಾಗ ಈ ಕಾಯಿದೆ ಮೂಲಕ ಪರಿಹಾರ ಪಡೆದುಕೊಳ್ಳಬಹುದು. ಜಿಲ್ಲಾ ಮಟ್ಟದಲ್ಲಿ ಸೂಕ್ತ ಪರಿಹಾರ ದೊರೆಯದೇ ಇದ್ದಾಗ ಹೈಕೋರ್ಟ್, ಸುಪ್ರೀಂ ಕೋರ್ಟಿಗೂ ಹೋಗಬಹದಾದ ಅವಕಾಶವಿದೆ. ಯಾವುದೇ ವಸ್ತು ಖರೀದಿಸಿದವರು, ಅವರ ಒಪ್ಪಿಗೆಯಂತೆ ಬಳಸಿಕೊಂಡವರೂ ಪರಿಹಾರ ಪಡೆಯಲು ಅರ್ಹರು. ಈ ಕಾಯಿದೆಯಂತೆ ಶೀಘ್ರದಲ್ಲಿ ಪ್ರಕರಣ ಮುಕ್ತಾಯ ಗೊಳ್ಳಲಿದೆ ಎಂದರು.

ಅಧಕ್ಷತೆ ವಹಿಸಿದ್ದ ವಕೀಲರ ಸಂಘದ ಅಧ್ಯಕ್ಷ ಮನೋಹರ್ ಕೆ.ವಿ ಮಾತನಾಡಿ, ಮೋಸ ಹೋಗುವವರು ಇರುವ ತನಕ ಮೋಸ ಮಾಡುವವರು ಇರುತ್ತಾರೆ. ಹೀಗಾಗಿ ನಾವು ಜಾಗ್ರತರಾಗಬೇಕು. ಖರೀದಿಸುವ ಮುನ್ನ ಯೋಚಿಸಬೇಕು. ಕಾನೂನಿನ ಜ್ಞಾನವನ್ನು ಪಡೆದುಕೊಳ್ಳಬೇಕು. ತೊಂದರೆ ಆದಾಗ ಕಾನೂನಿನ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.
ನ್ಯಾಯವಾದಿ ಅಶ್ವಿನಿ ಎಸ್ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪ್ರೌಢಶಾಲಾ ಮುಖ್ಯ ಶಿಕ್ಷಕ ಸತ್ಯಶಂಕರ ಸ್ವಾಗತಿಸಿದರು. ನ್ಯಾಯವಾದಿ ಹರಿಣಾಕ್ಷಿ ಜೆ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟದ ಅಧ್ಯಕ್ಷೆ ನಯನಾ ರೈ ವಂದಿಸಿದರು. ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಮಾಹಿತಿ ಪಡೆದುಕೊಂಡರು.

LEAVE A REPLY

Please enter your comment!
Please enter your name here