ಭಯ ಬೇಡ -ಶೀಘ್ರ ಬಿ ಎಫ್‌ -7‌ ಗೆ ಮಾರ್ಗಸೂಚಿ

0

ಬೆಂಗಳೂರು : ಚೀನಾದಲ್ಲಿ ಒಂದೇ ದಿನ 37 ದಶಲಕ್ಷ ಜನರಿಗೆ ಕೋರೋನ ಹೊಸ ಪ್ರಭೇಧ ಬಿ ಎಫ್‌ -7 ಸೋಂಕು ತಗುಲಿದೆ ಎಂದು ವರದಿಯಾಗಿದೆ.ರಾಜ್ಯದಲ್ಲಿ ಶೀಘ್ರದಲ್ಲಿಯೇ ಹೊಸ ಮಾರ್ಗಸೂಚಿ ಪ್ರಕಟಿಸುವುದಾಗಿ ಆರೋಗ್ಯ ಸಚಿವ ಡಾ. ಸುಧಾಕರ್‌ ತಿಳಿಸಿದ್ದಾರೆ.

ಈ ನಡುವೆ ಡಾಡಾ ಇನ್ಸುಟುಟ್‌  ಫಾರ್‌ ಜಿನೆಟಿಕ್ಸ್‌ ಸೊಸೈಟಿ  ನಿರ್ದೇಶಕ ರಾಕೇಶ್‌ ಮಿಶ್ರ ಬಿ ಎಫ್‌ -7 ಬಗ್ಗೆ ಹೆಚ್ಚು ಭಯ ಪಡುವ ಅಗತ್ಯವಿಲ್ಲ ಅದಾಗ್ಯೂ ಮಾಸ್ಕ್‌ ಧರಿಸುವುದು ಮತ್ತು ಅನಗತ್ಯ ಜನಸಂದಣಿಯಿಂದ ದೂರವಿರುವುದು ಉತ್ತಮ ಎಂದು ಸಲಹೆ ನೀಡಿದ್ದಾರೆ.

ಇನ್ನೊಂದೆಡೆ ಖಾಸಗಿ ಶಾಲೆಗಳ ಒಕ್ಕೂಟ ರುಪ್ಸಾ ಗೆ ಒಳಪಡುವ  ಖಾಸಗಿ ಶಾಲೆಗಳಿಗೆ ಮಾರ್ಗಸೂಚಿ ಪ್ರಕಟಿಸಿದ್ದು ನೆಗಡಿ , ಕೆಮ್ಮು ,ಜ್ವರ ಇರುವ ಮಕ್ಕಳಿಗೆ ರಜೆ ನೀಡುವಂತೆ ಸೂಚಿಸಿದೆ.

ಇತ್ತ ಇಂದು ಹುಬ್ಬಳ್ಳಿಯಲ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡಿದ ಮುಖ್ಯಮಂತ್ರಿ ಬೊಮ್ಮಾಯಿ ನಾಳೆ ಕಂದಾಯ ಸಚಿವರು ಮತ್ತು ಆರೋಗ್ಯ ಸಚಿವರು ಸಭೆ ನಡೆಸಲಿದ್ದು ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಬೂಸ್ಟರ್‌ ಡೋಸ್‌ ನೀಡಲು ಶಿಬಿರ ಏರ್ಪಡಿಸುವ ಬಗ್ಗೆ ಪರೀಕ್ಷೆ ನಡೆಸುವ ಬಗ್ಗೆ ಮಾಸ್ಕ್‌ ಮತ್ತು ಅಂತರ ಕುರಿತಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಯಾವುದೇ ಕೊರತೆಯಾಗದಂತೆ ಔಷಧಿ, ಲಸಿಕೆ ಆಮ್ಲಜನಕವನ್ನು ಇಟ್ಟುಕೊಳ್ಳಲು ಆರೋಗ್ಯ ಸಚಿವರಿಗೆ ಸೂಚನೆ ನೀಡಲಾಗಿದೆ. ಹೊಸ ವರ್ಷಾಚರಣೆಗೆ ಮಾರ್ಗಸೂಚಿ ಹೊರಡಿಸಲಾಗುವುದು ಎಂದು ಅವರು ಹೇಳಿದರು.

LEAVE A REPLY

Please enter your comment!
Please enter your name here