ಪುತ್ತೂರು: ಬೆಳಂದೂರು ಈಡನ್ ಗ್ಲೋಬಲ್ ಸ್ಕೂಲ್‌ನಲ್ಲಿ ಪೋಷಕರ ಸಭೆ ಡಿ.೨೨ರಂದು ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ರಫೀಕ್ ಮಾಸ್ಟರ್ ಅವರು ಪರಿಣಾಮಕಾರಿ ಪೋಷಕತನವನ್ನು ರೂಪಿಸಿಕೊಳ್ಳುವುದು ಹೇಗೆ ಎಂಬ ವಿಷಯವನ್ನು ಸವಿಸ್ತಾರವಾಗಿ ಹೇಳಿದರು.
ಶಾಲೆಯ ಪ್ರಾಂಶುಪಾಲ ಮೊಹಮ್ಮದ್ ರಂಝಿ ಕೆ.ಪಿ ರವರು ಒಳ್ಳೆಯ ಭವಿಷ್ಯ ರೂಪಿಸಿಕೊಳ್ಳಲು ಪರಿಣಾಮಕಾರಿ ಕಲಿಕೆ ಹೇಗೆ ಪಾತ್ರವಹಿಸುತ್ತದೆ ಎಂಬ ವಿಷಯದಲ್ಲಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಟ್ರಸ್ಟ್‌ನ ಅಧ್ಯಕ್ಷ ಅಶ್ರಫ್ ಶಾ ಮಾಂತೂರು ವಹಿಸಿ ಪೋಷಕರನ್ನುದ್ದೇಶಿಸಿ ಮಾತನಾಡಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಶಾಲಾ ಟ್ರಸ್ಟ್‌ನ ಕಾರ್ಯದರ್ಶಿ ಬಶೀರ್ ಹಾಜಿ ಸವಣೂರು, ಕೋಶಾಧಿಕಾರಿ ನಿಝಾರ್ ದರ್ಬೆ, ಸದಸ್ಯ ಪುತ್ತುಬಾವ ಹಾಜಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಸೆಕ್ಷನ್ ಕೋ ಆರ್ಡಿನೇಟರ್‌ಗಳಾದ ಕು.ಆಯಿಷಾ ಎಂ.ಐ, ಸೋಫಿಯಾ ರೋಚೆ, ಕು.ಪ್ರಜ್ವಾಲ, ಅಬ್ದುಲ್ ಸಮೀರ್, ದಿವ್ಯ ಮೊದಲಾದವರು ತಮ್ಮತರಗತಿಗಳ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯ ಬಗ್ಗೆ ಪೋಷಕರಿಗೆ ಮಾಹಿತಿ ನೀಡಿದರು. ಅಬ್ದುಲ್ ರಶೀದ್ ಸಖಾಫಿ (ಸದರ್ ಮುಹಲ್ಲಿಮ್) ಪ್ರಾರ್ಥಿಸಿದರು. ಖಲೀಲ್ ಝುಹ್‌ರಿ ಉಸ್ತಾದ್ಸ್ವಾ ಗತಿಸಿದರು. ಇಮ್ತಿಯಾಝ್ ವಂದಿಸಿದರು. ಕು.ಫಾತಿಮ ಸನಾ ಕಾರ್ಯಕ್ರಮ ನಿರೂಪಿಸಿದರು.