ಪಾಣಾಜೆ: ಇಲ್ಲಿನ ಭರಣ್ಯ ಓಂ ಫ್ರೆಂಡ್ಸ್ ವತಿಯಿಂದ 11 ನೇ ವರ್ಷದ ಹೊನಲು ಬೆಳಕಿನ ಮುಕ್ತ ಮ್ಯಾಟ್ ಕಬಡ್ಡಿ ಪಂದ್ಯಾಟ ದ. 24 ರಂದು ನಡೆಯಿತು.
ಪುತ್ತೂರು ಅಮೆಚೂರ್ ಕಬಡ್ಡಿ ಅಸೋಸಿಯೆಷನ್ ಪ್ರಧಾನ ಕಾರ್ಯದರ್ಶಿ, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ದಯಾನಂದ ರೈ ಕೋರ್ಮಂಡ ತೆಂಗಿನಕಾಯಿ ಒಡೆದು ಉದ್ಘಾಟಿಸಿ ಶುಭ ಹಾರೈಸಿದರು.
ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಸಭಾಧ್ಯಕ್ಷತೆ ವಹಿದ್ದರು.
ಮುಖ್ಯ ಅತಿಥಿಗಳಾಗಿ ಉದ್ಯಮಿ ಅಶೋಕ್ ಕುಮಾರ್ ರೈ ಕೆ.ಎಸ್., ನ್ಯಾಯವಾದಿ ಕೃಪಾಶಂಕರ ಅರ್ಧಮೂಲೆ, ಕಾಟುಕುಕ್ಕೆ ಸೇವಾ ಸಹಕಾರಿ ಬ್ಯಾಂಕ್ ನಿರ್ದೇಶಕ ಪ್ರಸಾದ್ ರೈ ಮುಂಗ್ಲಿಕಾನ, ಸೂರಂಬೈಲು ಶಾಲಾ ಸಹಶಿಕ್ಷಕ ನಾಗೇಶ್ ಪಾಟಾಳಿ, ಬ್ಲಾಕ್ ಕಾಂಗ್ರೆಸ್ ಪುತ್ತೂರು ಎಸ್‌ಟಿ ಘಟಕ ಅಧ್ಯಕ್ಷ ಮಹಾಲಿಂಗ ನಾಯ್ಕ ನರಿಮೊಗರು, ಸೂರಂಬೈಲು ಶಾಲಾ ಎಸ್‌ಡಿಎಂಸಿ ಅಧ್ಯಕ್ಷೆ ಸುನೀತಾ ತಾರನಾಥ ತೂಂಬಡ್ಕ, ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀಪ್ರಸಾದ್ ಪಾಣಾಜೆ ಭಾಗವಹಿಸಿ ಶುಭ ಹಾರೈಸಿದರು.
ಸನ್ಮಾನ
ಇದೇ ವೇಳೆ ಉದ್ಯಮಿ ಅಶೋಕ್ ಕುಮಾರ್ ರೈ ಕೆ.ಎಸ್., ಪಾಣಾಜೆ ಸುಬೋಧ ಪ್ರೌಢಶಾಲಾ ನಿವೃತ್ತ ಮುಖ್ಯಗುರು ನಾರಾಯಣ ಎಸ್.ಕೆ., ಪಾರಂಪರಿಕ ನಾಟಿ ವೈದ್ಯರಾದ ಸುಬ್ರಾಯ ಬಲ್ಯಾಯ, ಚಿತ್ರಕಲಾ ಪ್ರತಿಭೆ ಸುನೀತಾ ಭರಣ್ಯ, ಯಕ್ಷಗಾನ ಯುವ ಪ್ರತಿಭೆ ಪ್ರಮೋದ್ ಎಂ.ಎಸ್. ಪಾಣಾಜೆ ಹಾಗು ಸೂರಂಬೈಲು ಶಾಲಾ 7 ನೇ ತರಗತಿ ವಿದ್ಯಾರ್ಥಿ ಮುಕೇಶ್ ಎಸ್.ಕೆ. ಯವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಓಂ ಫ್ರೆಂಡ್ಸ್ ಭರಣ್ಯ ಇದರ ಅಧ್ಯಕ್ಷ ಉದಯ ಕುಮಾರ್ ಸುಡುಕುಳಿ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಗುರುರಾಜ್ ಭರಣ್ಯ ಸ್ವಾಗತಿಸಿ, ಸಾಗರ್ ಬೆಳ್ಳಾರೆ ನಿರೂಪಿಸಿದರು. ಪಂದ್ಯಾಟಕ್ಕೆ ಮೊದಲು ಸೂರಂಬೈಲು ಸ.ಹಿ.ಪ್ರಾ.ಶಾಲೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈವಿಧ್ಯ ನಡೆಯಿತು.
ತುಳುನಾಡ ಫ್ರೆಂಡ್ಸ್ ತೂಂಬಡ್ಕ ಪ್ರಥಮ ಬಹುಮಾನ ಪಡೆಯಿತು. ಸೆವೆನ್ ಸ್ಟಾರ್ ಕಲ್ಪಣೆ ದ್ವಿತೀಯ ಬಹುಮಾನ, ಕಡಬ ತೃತೀಯ ಸ್ಥಾನವನ್ನು ಹಾಗು ಮುತ್ತುಶ್ರೀ ಕಂದಡ್ಕ ಚತುರ್ಥ ಬಹುಮಾನ ಪಡೆದವು. ಕಿರಣ್ ತೂಂಬಡ್ಕ ಉತ್ತಮ ದಾಳಿಗಾರ, ಕಿಶನ್ ತೂಂಬಡ್ಕ ಉತ್ತಮ ಹಿಡಿತಗಾರ, ಸೋನು ಸೆವೆನ್ ಸ್ಟಾರ್ ಸರ್ವಾಂಗೀಣ ಆಟಗಾರ ಪ್ರಶಸ್ತಿ ಪಡೆದರು. ಬಿಜೆಪಿ ಶಕ್ತಿ ಕೇಂದ್ರ ಅಧ್ಯಕ್ಷ ಸದಾಶಿವ ರೈ ಸೂರಂಬೈಲು, ತುಳುನಾಡ ಫ್ರೆಂಡ್ಸ್ ಅಧ್ಯಕ್ಷ ಸುರೇಶ್ ನಾಯ್ಕ್ ತೂಂಬಡ್ಕ, ಪಾಣಾಜೆ ಗ್ರಾ.ಪಂ. ಸದಸ್ಯ ಮೋಹನ ನಾಯ್ಕ್ ತೂಂಬಡ್ಕ ಬಹುಮಾನ ವಿತರಿಸಿದರು.
‘ಸುದ್ದಿ ನ್ಯೂಸ್ ಲೈವ್’ ನಲ್ಲಿ ನೇರ ಪ್ರಸಾರ
ಸಾಂಸ್ಕೃತಿಕ ಕಾರ್ಯಕ್ರಮ ಹಾಗು ಕಬಡ್ಡಿ ಪಂಬಾಕ್ಸ್
‘ಸುದ್ದಿ ನ್ಯೂಸ್ ಲೈವ್’ ನಲ್ಲಿ ನೇರ ಪ್ರಸಾರ
ಸಾಂಸ್ಕೃತಿಕ ಕಾರ್ಯಕ್ರಮ ಹಾಗು ಕಬಡ್ಡಿ ಪಂದ್ಯಾಟದ ಪೂರ್ತಿ ಕಾರ್ಯಕ್ರಮಗಳು ಸುದ್ದಿ ನ್ಯೂಸ್ ಲೈವ್ ಯುಟ್ಯೂಬ್ ಚಾನೆಲ್‌ನಲ್ಲಿ ನೇರ ಪ್ರಸಾರಗೊಂಡಿತು.ದ್ಯಾಟದ ಪೂರ್ತಿ ಕಾರ್ಯಕ್ರಮಗಳು ಸುದ್ದಿ ನ್ಯೂಸ್ ಲೈವ್ ಯುಟ್ಯೂಬ್ ಚಾನೆಲ್‌ನಲ್ಲಿ ನೇರ ಪ್ರಸಾರಗೊಂಡಿತು.