ಇಂದ್ರಪ್ರಸ್ಥ ವಿದ್ಯಾಲಯದ ವಿದ್ಯಾರ್ಥಿಗಳ ನಾಲ್ಕು ತಂಡ ರಾಷ್ಟ್ರಮಟ್ಟದ ತ್ರೋಬಾಲ್ ಪಂದ್ಯಾಟಕ್ಕೆ ಆಯ್ಕೆ

0

ಉಪ್ಪಿನಂಗಡಿ : ವಿದ್ಯಾಭಾರತಿ ವತಿಯಿಂದ ಡಿಸೆಂಬರ್ 24 ರಿಂದ 27 ರ ವರೆಗೆ ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕ ಇಲ್ಲಿ ನಡೆದ ವಿದ್ಯಾಭಾರತಿ ರಾಷ್ಟ್ರಮಟ್ಟದ ತ್ರೋಬಾಲ್ ಪಂದ್ಯಾಟದಲ್ಲಿ 14  ಮತ್ತು 17 ರ ವಯೋಮಾನದ ಬಾಲಕ ಮತ್ತು ಬಾಲಕಿಯರ ವಿಭಾಗದಲ್ಲಿ ಇಲ್ಲಿನ ಇಂದ್ರಪ್ರಸ್ಥ ವಿದ್ಯಾಲಯದ ವಿದ್ಯಾರ್ಥಿಗಳ ನಾಲ್ಕು ತಂಡಗಳು ಚಿನ್ನದ ಪದಕದೊಂದಿಗೆ ಪ್ರಥಮ ಸ್ಥಾನ ಪಡೆದು ಸ್ಕೂಲ್ ಗೇಮ್ಸ್ ಫೆಡರೇಷನ್ ಆಫ್ ಇಂಡಿಯಾ ನಡೆಸುವ ರಾಷ್ಟ್ರ ಮಟ್ಟದ ಪಂದ್ಯಾಟಕ್ಕೆ ಆಯ್ಕೆಯಾಗಿರುತ್ತಾರೆ.

ತಂಡದಲ್ಲಿ 14 ರ ವಯೋಮಾನದ ಬಾಲಕರ ತ್ರೋಬಾಲ್ ವಿಭಾಗದಲ್ಲಿ 7 ನೇ ತರಗತಿಯ ಕವೀಶ್ ಬಿ.ಕೆ, ಸಮೃದ್ಧ್ ರೈ, ಇಮಾಮ್ ಅಹಮದ್, ಚಿಂತನ್ ಕೆ.ಸಿ, ಕೌಶಲ್, 6 ನೇ ತರಗತಿಯ ಸಮೃದ್ಧ ಜೈನ್, ಆಯತ್ತುಲ್ಲಾ ಸಲೀಂ, 8 ನೇ ತರಗತಿಯ ಮೊಹಿತ್ ಡಿ. ಗೌಡ, , ಜಿತೇಶ್. ಪಿ, ಅನೂಪ್ ಸಿಂಗ್, ಅಕ್ಷಜ್ ಶೆಟ್ಟಿ, ಪುನೀತ್ ಕುಮಾರ್.ಬಿ ಭಾಗವಹಿಸಿರುತ್ತಾರೆ.

17 ರ ವಯೋಮಾನದ ಬಾಲಕರ ತ್ರೋಬಾಲ್ ವಿಭಾಗದಲ್ಲಿ 10 ನೇ ತರಗತಿಯ ಐಮನ್ ಶಾಫಿ, ಅನೂಪ್ ಶೆಣೈ, ಭುವನ್ ಬೆದ್ರಾ, ಯಕ್ಷಿತ್, ರಚನ್ ಆರ್. ಕೆ, ಐಮನ್ ಕೆ. ಎ, ಮೊಹಮ್ಮದ್ ಅಬ್ದುಲ್ ಫತ್ಹಾ, ಎಂ.ಕೆ ಮಹಮ್ಮದ್ ಅಜ್ವದ್, ಶಮಿತ್ ಪ್ರಸಾದ್. ಪಿ, ನಿದೀಶ್ ಐ. ಬಿ, 9 ನೇ ತರಗತಿಯ ಮೊಹಮ್ಮದ ರೈಫ್ ಭಾಗವಹಿಸಿರುತ್ತಾರೆ. 14  ರ ವಯೋಮಾನದ ಬಾಲಕಿಯರ ತ್ರೋಬಾಲ್ ವಿಭಾಗದಲ್ಲಿ 7 ನೇ ತರಗತಿಯ ಪೂರ್ವಿ ಬಿ.ಕೆ, ರಿದಾ ಮರಿಯಮ್, ಸವ್ಯ ಎಂ, ಅನ್ವಿ ಬಿ ಆಚಾರ್ಯ, ಪೂಜಾ ಹೆಚ್, ಎಂ, ಸೃಷ್ಠಿ, ತನ್ವಿ, 6 ನೇ ತರಗತಿಯ ಅನುಶ್ರೀ, ೮ನೇ ತರಗತಿಯ ಹನಾನ್ ಹಾರೂನ್, 17 ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ 10 ನೇ ತರಗತಿಯ ನಿಧಿ ಬಂಗೇರಾ, ಮೇಘನಾ, ತೇಜಸ್ವಿನಿ, ಸಾತ್ವಿ ಬಿ.ಕೆ, ಕ್ಷಿತಿ, 9 ನೇ ತರಗತಿಯ ಅಮತ್ತೂನೂರ್ ಸಲೀಂ, ಹಂಸೀನಾ ಹಾರೂನ್, ಪ್ರಥಮ ಪಿ.ಯು.ಸಿ ಯ ಶಿವಾನಿ, ಹಂಸಿನಿ ಮತ್ತು ತೃಷಾ ಭಾಗವಹಿಸಿರುತ್ತಾರೆ.

ಇವರಿಗೆ ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕರು, ರಾಷ್ಟ್ರಮಟ್ಟದ ತ್ರೋಬಾಲ್ ಆಟಗಾರಗೋಪಿನಾಥ್ ಹಾಗೂ ದೈಹಿಕ ಶಿಕ್ಷಣ ಶಿಕ್ಷಕಿ ಕುಮಾರಿ ಶ್ರೀರಂಜಿನಿ ತರಬೇತಿ ನೀಡಿದ್ದಾರೆ ಎಂದು ಸಂಸ್ಥೆಯ ಮುಖ್ಯ ಶಿಕ್ಷಕಿ  ವೀಣಾ ಆರ್ ಪ್ರಸಾದ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here