ಕಾಣಿಯೂರು: ಚಾರ್ವಾಕ ಗ್ರಾಮದ ಕಂರ್ದ್ಲಾಜೆ ಮನೆಯಲ್ಲಿ ನೂತನವಾಗಿ ನಿರ್ಮಿಸಿರುವ ದೈವಸ್ಥಾನದಲ್ಲಿ ಕುಟುಂಬದ ಧರ್ಮದೈವ ಮತ್ತು ಪರಿವಾರ ದೈವಗಳ ಪ್ರತಿಷ್ಠೆ ಹಾಗೂ ನೇಮೋತ್ಸವವು ಡಿ 24ರಿಂದ ಡಿ 26ರವರೆಗೆ ನಡೆಯಿತು. ಕೆಮ್ಮಿಂಜೆ ಶ್ರೀ ಸುಬ್ರಹ್ಮಣ್ಯ ಬಳ್ಳಕ್ಕುರಾಯ ತಂತ್ರಿಯವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯುತು. ಡಿ 24ರಂದು ಸಂಜೆ ತಂತ್ರಿಗಳ ಆಗಮನ, ಸ್ಥಳ ಶುದ್ಧಿ ಮತ್ತು ವಾಸ್ತು ಹೋಮ ನಡೆದು, ಡಿ 25ರಂದು ಬೆಳಿಗ್ಗೆ ಗಣಹೋಮ, ದೈವಗಳ ಪ್ರತಿಷ್ಠೆ ಮತ್ತು ತಂಬಿಲ ಸೇವೆ, ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ ರುದ್ರಾಚಾಮುಂಡಿ ಪರಿವಾರ ದೈವಗಳ ಕಿರುವಾಲು ಭಂಡಾರ ತೆಗೆದು ನೇಮೋತ್ಸವ, ರಾತ್ರಿ ಅನ್ನಸಂತರ್ಪಣೆ ನಡೆದು, ಡಿ 26ರಂದು ಬೆಳಿಗ್ಗೆ ಧರ್ಮದೈವ, ರುದ್ರಾಚಾಮುಂಡಿ ನೇಮೋತ್ಸವ, ಪ್ರಸಾದ ವಿತರಣೆ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್ ರಾಂ ಸುಳ್ಳಿ, ಚಾರ್ವಾಕ ಶ್ರೀ ಕಪಿಲೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೊರಗಪ್ಪ ಗೌಡ ಕುಕ್ಕುನಡ್ಕ, ಕುಂಬ್ಲಾಡಿ ಶ್ರೀ ಕುಕ್ಕೇನಾಥ ಬಾಲಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನೇಮಣ್ಣ ಗೌಡ ಅಂಬುಲ, ಬಂಟ್ವಾಳ ತಾಲೂಕು ಅರೋಗ್ಯಾಧಿಕಾರಿ ಡಾ. ಅಶೋಕ್ ಕುಮಾರ್ ರೈ, ಕಾಣಿಯೂರು ಬ್ಯಾಂಕ್ ಅಫ್ ಬರೋಡಾ ಬ್ಯಾಂಕ್‌ನ ಪ್ರಬಂಧಕ ಅತಿಥ್ ರೈ, ನ್ಯಾಯಾಧೀಶರಾದ ಹರೀಶ್ ಆಗತ್ತಬೈಲು, ಸವಣೂರು ಡಿಸಿಸಿ ಬ್ಯಾಂಕ್‌ನ ಪ್ರಬಂಧಕರಾದ ವಿಶ್ವನಾಥ ಗೌಡ, ವಸಂತ ಅಭಿಕಾರ್, ಲಕ್ಷ್ಮಣ ಗೌಡ ಬೀರೊಳಿಗೆ ಸೇರಿದಂತೆ ಹಲವಾರು ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕುಟುಂಬದ ಹಿರಿಯರಾದ ಬಾಬು ಗೌಡ ಕಜೆ ನೆಲ್ಯಾಡಿ, ಪದ್ಮಯ್ಯ ಗೌಡ ಕಂರ್ದ್ಲಾಜೆ, ಡಾ.ಧರ್ಮಪಾಲ ಗೌಡ ಕಂರ್ದ್ಲಾಜೆ ಹಾಗೂ ಕುಟುಂಬದ ಸದಸ್ಯರು ಬಂದಂತಹ ಅತಿಥಿಗಳನ್ನು ಸ್ವಾಗತಿಸಿದರು. ಚಾರ್ವಾಕ ಶ್ರೀ ಕಪಿಲೇಶ್ವರ ಸಿಂಗಾರಿ ಮೇಳದವರಂದ ಆಕರ್ಷಕ ಚೆಂಡೆ ವಾದನ ನಡೆಯಿತು.