ಕಳ್ಳತನ ಪ್ರಕರಣ: ಗೋಳಿತ್ತೊಟ್ಟು ನಿವಾಸಿ ಸೆರೆ

0

ಬಂಟ್ವಾಳ: ತಾಲೂಕಿನ ನಗರ ಠಾಣಾ ವ್ಯಾಪ್ತಿ ಸೇರಿದಂತೆ ವಿವಿಧೆಡೆ ನಡೆದ ಕಳ್ಳತನ ಪ್ರಕರಣದ ಆರೋಪಿಯನ್ನು ಬಂಧಿಸುವಲ್ಲಿ ಬಂಟ್ವಾಳ ನಗರ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ. ಕಡಬ ತಾಲೂಕಿನ ಗೋಳಿತೊಟ್ಟು ಗ್ರಾಮದ ದಿ.ಮನ್ಸೂರು ಅವರ ಪುತ್ರ ಮೊಹಮ್ಮದ್ ಇರ್ಪಾನ್ (24) ಬಂಧಿತ ಆರೋಪಿ.

ಬಂಟ್ವಾಳ ತಾಲೂಕು ಬಿ ಮೂಡ ಗ್ರಾಮದ ಗಾಣದಪಡ್ಪು ಎಂಬಲ್ಲಿರುವ ಗುರುಕೃಪಾ ಕಾಂಪ್ಲೆಕ್ಸ್ ಕಟ್ಟಡದಲ್ಲಿರುವ ರಾಜಾರಾಮ್ ಎಂಬವರಿಗೆ ಸೇರಿದ ಹೋಲ್ ಸೇಲ್ ಅಂಗಡಿಯ ಶಟರಿನ ಬಾಗಿಲ ಬೀಗವನ್ನು ಮರಿದು ಒಳ ಪ್ರವೇಶಿಸಿ ಅಂಗಡಿಯೊಳಗಿದ್ದ 20,000ರೂಪಾಯಿ ಮೌಲ್ಯದ Red me ಮತ್ತುOppo ಕಂಪನಿಯ ಎರಡು ಮೊಬೈಲ್ ಫೋನ್ ಗಳನ್ನು ಹಾಗೂ ನಗದು 10,೦೦೦ ಕಳ್ಳತನ ಮಾಡಿದ್ದಾನೆ. ಕಳವು ಮಾಡಿದ ಮೊಬೈಲ್ ಪೋನ್ ಗಳನ್ನು ಸ್ವಾಧೀನಪಡಿಕೊಂಡಿದ್ದಾರೆ.

2021ನೇ ನವೆಂಬರ್ ತಿಂಗಳಲ್ಲಿ ಬಿ ಮೂಡ ಗ್ರಾಮದ ಬಿ.ಸಿ.ರೋಡ್ ಶ್ರೀನಿವಾಸ ಕಾಂಪ್ಲೆಕ್ಸ್ ಕಟ್ಟಡದಲ್ಲಿರುವ ವಕೀಲರಾದ ಸುದರ್ಶನ್ ರವರ ಕಛೇರಿಯಲ್ಲಿದ್ದ ರೂಪಾಯಿ 3,000 ಕಳವು ಮಾಡಿದ್ದ. ಆರೋಪಿಯು 2022 ನೇ ಡಿಸೆಂಬರ್ 6 ರಂದು ಉಪ್ಪಿನಂಗಡಿ ಠಾಣಾ ವ್ಯಾಪ್ತಿಯ ಗೋಳಿತೊಟ್ಟು ಎಂಬಲ್ಲಿರುವ ಮನೆಯ ಬಾಗಿಲಿನ ಬೀಗವನ್ನು ಮುರಿದು ನಗದು ಕಳ್ಳತನ ಮಾಡಿದ್ದ, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದ್ದು ಸದ್ಯ ಆರೋಪಿಯನ್ನು ಮಂಗಳೂರು ಜೈಲಿಗಟ್ಟಲಾಗಿದೆ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here