ಪುತ್ತೂರಿನ ಎಸ್.ಆರ್.ಕೆ. ಲ್ಯಾಡರ‍್ಸ್‌ನ ಕೇಶವ ಎರವರಿಗೆ ಡಾ.ಎಚ್.ಎನ್ ಪ್ರಶಸ್ತಿ

0

ರಾಜ್ಯ ಮಟ್ಟದ 2ನೇ ವೈಜ್ಞಾನಿಕ ಸಮ್ಮೇಳನದಲ್ಲಿ ಪ್ರದಾನ

ಪುತ್ತೂರು: ಕೃಷಿಕರ ಸಮಸ್ಯೆಗಳನ್ನು, ಕೃಷಿ ಚಟುವಟಿಕೆಗಳ ನಿರ್ವಹಣೆಯಲ್ಲಿರುವ ಕುಂದುಕೊರತೆಗಳನ್ನು ಅರಿತುಕೊಂಡು ಅವುಗಳಿಗೆ ಪರಿಹಾರಗಳನ್ನು ಒದಗಿಸುವ ನಿಟ್ಟಿನಲ್ಲಿ ತಮ್ಮದೇ ಆದ ಮಾರ್ಗೋಪಾಯಗಳನ್ನು ಕಂಡು ಕೊಂಡು ಹೊಸ ಹೊಸ ಅವಿಷ್ಕಾರಗಳನ್ನು ಮಾಡುವ ಮೂಲಕ ಕೃಷಿಕರ ಮಿತ್ರರಾದ ಪುತ್ತೂರಿನ ಎಸ್.ಆರ್.ಕೆ.ಲ್ಯಾಡರ‍್ಸ್‌ನ ಮಾಲಕ ಕೇಶವ ಎ ಅವರು ರಾಜ್ಯ ಮಟ್ಟದ ಜಿಲ್ಲಾವಾರು ಡಾ. ಎಚ್.ಎನ್. (ಡಾ. ಎಚ್. ನರಸಿಂಹಯ್ಯ) ಪ್ರಶಸ್ತಿಗೆ ಪುರಸ್ಕೃತಗೊಂಡಿದ್ದಾರೆ.


ಬೆಂಗಳೂರು ಸಮೀಪದ ತುಮಕೂರಿನ ಬಿ.ಎಚ್. ರಸ್ತೆಯ ಅಗಳಕೋಟೆಯ ಶಿಕ್ಷಣ ಭೀಷ್ಮ ಡಾ. ಎಚ್.ಎಂ. ಗಂಗಾಧರಯ್ಯ ಮೆಮೋರಿಯಲ್ ಹಾಲ್‌ನಲ್ಲಿ ಡಿ.29ರಂದು ನಡೆದ ರಾಜ್ಯ ಮಟ್ಟದ 2ನೇ ವೈಜ್ಞಾನಿಕ ಸಮ್ಮೇಳನದಲ್ಲಿ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಜಸ್ಟಿಸ್ ನಾಗಮೋಹನದಾಸ್ ಅವರು ಪ್ರಶಸ್ತಿ ಪ್ರದಾನ ಮಾಡಿದ್ದಾರೆ. ಎರಡು ದಿನಗಳ ಕಾಲ ನಡೆದ ರಾಜ್ಯ ಮಟ್ಟದ 2ನೇ ವೈಜ್ಞಾನಿಕ ಸಮ್ಮೇಳನದಲ್ಲಿ ವಿವಿಧ ಕ್ಷೇತ್ರಗಳಲ್ಲಿನ ಸಾಧನೆಗೆ ಸಂಬಂಧಿಸಿ ವೈಜ್ಞಾನಿಕ ಲೇಖಕ ಡಾ. ಹೆಚ್.ಎಸ್ ನಿರಂಜನಾರಾಧ್ಯ ಅವರಿಗೆ ರಾಜ್ಯಮಟ್ಟದ ಮತ್ತು ಇತರ 37 ಮಂದಿಗೆ ರಾಜ್ಯಮಟ್ಟದ ಜಿಲ್ಲಾವಾರು ಪ್ರಶಸ್ತಿ ಪ್ರದಾನ ಮಾಡಲಾಯಿತು.

ಈ ಸಂದರ್ಭದಲ್ಲಿ ಸಿದ್ಧಗಂಗಾ ಮಠದ ಸಿದ್ಧಲಿಂಗ ಮಹಾಸ್ವಾಮಿಗಳು, ಪರಿಷತ್ ಜಿಲ್ಲಾಧ್ಯಕ್ಷ ರವೀಂದ್ರ ಶಾಬಾದಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ. ಶಿವರಂಜನ ಸತ್ಯಂಪೇಟೆ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಪರಮೇಶ್ವರ ಶೆಟಕಾರ, ಜಿಲ್ಲಾ ಉಪಾಧ್ಯಕ್ಷ ನೀಲಕಂಠರಾಯ ಆವಂಟಿ, ಸಂಚಾಲಕರಾದ ಅಯ್ಯಣ್ಣ ನಂದಿ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here