ಪುತ್ತೂರು: ತಾಲೂಕಿನ ಕುರಿಯ ಗ್ರಾಮದ ಶಿಬರಾಡಿ ಬಾರಿಕೆ ಕುಂದರ್ ಕುಟುಂಬದಲ್ಲಿ ಗ್ರಾಮದ ಉಳ್ಳಾಕುಲು, ಮಹಿಷಂತಾಯ ಮತ್ತು ಪಿಲಿಚಾಮುಂಡಿ ದೈವಗಳಿಗೆ ತಂಬಿಲ ಸೇವೆ ಹಾಗೂ ತರವಾಡು ಮನೆಯ ದೈವಗಳ ವಾರ್ಷಿಕ ನೇಮೋತ್ಸವವು ಜ.16 ಮತ್ತು 17ರಂದು ಶಿಬರಾಡಿ ಬಾರಿಕೆ ತರವಾಡು ಮನೆಯಲ್ಲಿ ಜರಗಲಿದ್ದು, ಇದರ ಆಮಂತ್ರಣ ಪತ್ರಿಕೆಯ ಬಿಡುಗಡೆಯು ಶ್ರೀ ಕ್ಷೇತ್ರದಲ್ಲಿ ಜರಗಿತು.
ಶ್ರೀ ಕ್ಷೇತ್ರದ ಅಧ್ಯಕ್ಷರಾದ ಶಶಿಧರ್ ಕಿನ್ನಿಮಜಲುರವರು ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿ, ಶ್ರೀ ಕ್ಷೇತ್ರದಲ್ಲಿ ಎರಡು ದಿನಗಳ ಕಾಲ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದು, ತನು-ಮನ-ಧನಗಳ ಸಹಕಾರವನ್ನಿತ್ತು ಶ್ರೀ ದೈವಗಳ ಸಿರಿಮುಡಿ ಗಂಧ ಪ್ರಸಾದವನ್ನು ಸ್ವೀಕರಿಸಿ ದೈವಗಳ ಕೃಪೆಗೆ ಪಾತ್ರರಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಹೇಳಿದರು. ಈ ಸಂದರ್ಭದಲ್ಲಿ ನಾರಾಯಣ ಪೂಜಾರಿ ಮಡ್ಯಂಗಳ, ರಮೇಶ್ ದರ್ಬೆತ್ತಡ್ಕ, ಸುರೇಂದ್ರ ಮೊಟ್ಟೆತ್ತಡ್ಕ, ಸತೀಶ್ ಕಿನ್ನಿಮಜಲು, ಶಿವರಾಮ ಶಿಬರಾಡಿ, ಅಮ್ಮು ಶಿಬರಾಡಿ, ಜಯರಾಮ ಶಿಬರಾಡಿ, ಪುರಂದರ ಶಿಬರಾಡಿ, ಕೃಷ್ಣಪ್ಪ ಪೂಜಾರಿ ಪಂಜಳ, ಸರೋಜಿನಿ ಶಿಬರಾಡಿ, ವೀಣಾ ಶಿಬರಾಡಿ, ಸುನೀತಾ ಶಿಬರಾಡಿ, ಪುಷ್ಪಾ ಶಿಬರಾಡಿ, ಚಿತ್ರಾ ಹಿಂದಾರುರವರು ಉಪಸ್ಥಿತರಿದ್ದರು.