ಸವಣೂರಿನ ವಿದ್ಯಾರಶ್ಮಿ ವಿದ್ಯಾಲಯದಲ್ಲಿ ವಿದ್ಯಾರ್ಥಿ ಸಂಘದ ವತಿಯಿಂದ ಗ್ರಾಮೀಣ ವಿಜ್ಞಾನ ಮೇಳ ” ವಿಜ್ಞಾನ ರಶ್ಮಿ” ಕಾರ್ಯಕ್ರಮದ ಸಮಾರೋಪ ಸಮಾರಂಭವು ಸಂಸ್ಥೆಯ ಆಡಳಿತಾಧಿಕಾರಿ ಅಶ್ವಿನ್ ಎಲ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಬಹುಮಾನ ವಿತರಣೆ ಮಾಡಿ ಮಾತನಾಡಿದ ಸಂಚಾಲಕ ಸವಣೂರು ಸೀತಾರಾಮ ರೈ ಅವರು, ವಿಜ್ಞಾನ ನಮ್ಮ ಜೀವನದ ಪ್ರತಿ ಹಂತದಲ್ಲೂ ಬೇಕಿದೆ. ಅದಕ್ಕಾಗಿಯೇ ನಾವು ಮಕ್ಕಳಿಗೆ ಅರಿವು ನೀಡಲು ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುತ್ತೇವೆ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ವಿದ್ಯಾಬೋಧಿನೀ ಪ್ರೌಢಶಾಲೆಯ ಮುಖ್ಯ ಗುರುಗಳಾದ ಯಶೋಧರ ಅವರು ಮಾತನಾಡಿ ವಿಜ್ಞಾನದ ಮಹತ್ವವನ್ನು ಸಾರುವ ಈ ಕಾರ್ಯಕ್ರಮ ಅತ್ಯಂತ ಮಹತ್ವದ್ದು ಹಾಗೂ ಇದನ್ನು ಆಯೋಜಿಸಿದ ವಿದ್ಯಾರಶ್ಮಿ ಸಂಸ್ಥೆ ಅಭಿನಂದನಾರ್ಹ ಎಂದರು.
ಆಯಿಷತ್ ವಫಾ ನಿರೂಪಿಸಿದ ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಸೀತಾರಾಮ ಕೇವಳ, ಉಪ ಪ್ರಾಂಶುಪಾಲೆ ಶಶಿಕಲಾ ಎಸ್ ಆಳ್ವ, ಸಂಯೋಜಕಿ ಕಸ್ತೂರಿ ಕೆ. ಜಿ., ವಿಧ್ಯಾರ್ಥಿ ನಾಯಕ ಪ್ರಣವ್ ಕೆ.ಯು. ಉಪಸ್ಥಿತರಿದ್ದರು. ಉಪನ್ಯಾಸಕ ಮುರಳೀಧರ ಬಹುಮಾನಿತರ ಪಟ್ಟಿ ವಾಚಿಸಿದರು. ತೇಜಸ್ ಸ್ವಾಗತ, ಮೋಕ್ಷಿತ್ ಧನ್ಯವಾದ ಸಮರ್ಪಣೆ ನಿರ್ವಹಿಸಿದರು.