ವಿದ್ಯಾಮಾತ ಅಕಾಡೆಮಿಯಲ್ಲಿ ಕಂಪ್ಯೂಟರ್ ತರಬೇತಿಯೊಂದಿಗೆ ಉಚಿತ ಬ್ಯಾಂಕಿಂಗ್ ಪರೀಕ್ಷೆ, ಉಚಿತ ಸ್ಪೋಕನ್ ಇಂಗ್ಲೀಷ್ ತರಬೇತಿ

0

ಪುತ್ತೂರು:ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರವಾಗಿರುವ ‘ವಿದ್ಯಾಮಾತಾ ಅಕಾಡೆಮಿ’ಯಲ್ಲಿ ವಿದ್ಯಾರ್ಥಿಗಳಿಗೆ ನೆರವಾಗುವ ದೃಷ್ಟಿಯಿಂದ ಕಂಪ್ಯೂಟರ್ ತರಬೇತಿಯೊಂದಿಗೆ ಐ.ಬಿ.ಪಿ.ಎಸ್, ಎಸ್.ಬಿ.ಐ, ಕರ್ನಾಟಕ ಬ್ಯಾಂಕ್, ಕೊ-ಆಪರೇಟಿವ್ ಸಂಸ್ಥೆಗಳು, ಕೆ.ಎಂ.ಎಫ್, ಆರ್.ಆರ್.ಬಿ ಸೇರಿದಂತೆ ಬ್ಯಾಂಕಿಂಗ್ ತರಬೇತಿ ಮತ್ತು ಸ್ಪೋಕನ್ ಇಂಗ್ಲಿಷ್ ತರಬೇತಿಯನ್ನು ಉಚಿತವಾಗಿ ಪಡೆಯಬಹುದಾಗಿದೆ.

ತರಬೇತಿಯ ವಿಶೇಷತೆ :

ಯಾವುದೇ ತರಬೇತಿಯಲ್ಲಿ ಪಡೆದ ಸರ್ಟಿಫಿಕೇಟ್‌ಗಳು ಉದ್ಯೋಗವನ್ನು ಪಡೆಯಲು ನೆರವಾಗುವುದಿಲ್ಲ ಬದಲಾಗಿ ಸರ್ಟಿಫಿಕೇಟ್ ಜೊತೆ ಉದ್ಯೋಗ ಕೌಶಲ್ಯತೆಯು ಸೇರಿಕೊಂಡಾಗ ಮಾತ್ರ ಉತ್ತಮ ಉದ್ಯೋಗವನ್ನು ಪಡೆಯಲು ಸಾಧ್ಯ . ಈ ನಿಟ್ಟಿನಲ್ಲಿ ಪ್ರಸಿದ್ಧ ಲೆಕ್ಕ ಪರಿಶೋಧಕರು ಸಿದ್ಧ ಪಡಿಸಿದ ಉದ್ಯೋಗ ಕೌಶಲ್ಯತೆಯನ್ನು ಒಳಗೊಂಡ ಬೇಸಿಕ್ ಕಂಪ್ಯೂಟರ್ ಜ್ಞಾನದ ಜೊತೆ ಡಿಪ್ಲೋಮಾ ಇನ್ ಪ್ರಾಕ್ಟಿಕಲ್ ಅಕೌಂಟಿಂಗ್ ಟ್ಯಾಕ್ಸೇಷನ್ ಸರ್ಟಿಫೈಡ್, ಜಿ.ಎಸ್.ಟಿ ಇತ್ಯಾದಿ ಕಂಪ್ಯೂಟರ್ ಕೋರ್ಸ್ ಜೊತೆ ಬ್ಯಾಂಕಿಂಗ್ ಪ್ರವೇಶ ಪರೀಕ್ಷೆಗಳು ಹಾಗೂ ಸ್ಪೋಕನ್ ಇಂಗ್ಲೀಷ್ ತರಬೇತಿಯನ್ನು ಉಚಿತವಾಗಿ ಪಡೆಯಬಹುದಾಗಿದೆ. ಈ ಎಲ್ಲಾ ತರಬೇತಿಯನ್ನು ಪಡೆಯುವ ವಿದ್ಯಾರ್ಥಿಗಳಿಗೆ ವಿವಿಧ ಕಂಪನಿಗಳಲ್ಲಿ ಉದ್ಯೋಗ ಕೊಡಿಸುವ ಬಗ್ಗೆ ವಿದ್ಯಾಮಾತಾ ಅಕಾಡೆಮಿಯು ಮಹತ್ತರ ಪಾತ್ರ ವಹಿಸಿದೆ.

ಅರ್ಹತೆ :
ಪಿ.ಯು.ಸಿ / ಪದವಿ / ಸ್ನಾತಕೋತ್ತರ ಪದವಿ ಓದುತ್ತಿರುವ ವಿದ್ಯಾರ್ಥಿಗಳು ಅಥವಾ ಓದು ಮುಗಿಸಿರುವವರು ಮತ್ತು ಉದ್ಯೋಗಸ್ಥರು / ಉದ್ಯಮಿಗಳು ಇದರ ಪ್ರಯೋಜನ ಪಡೆದುಕೊಳ್ಳಬಹುದು.

ಹೆಚ್ಚಿನ ಮಾಹಿತಿಗಾಗಿ :
ವಿದ್ಯಾಮಾತಾ ಅಕಾಡೆಮಿ , ಹಿಂದೂಸ್ತಾನ್ ಕಾಂಪ್ಲೆಕ್ಸ್ ,ಎಪಿಯಂಸಿ ರೋಡ್, ಸಿಟಿ ಆಸ್ಪತ್ರೆ ಹತ್ತಿರ , ಪುತ್ತೂರು ದ.ಕ. 574201  ಫೋನ್ ನಂ. : 9620468869 / 8590773486. ಸಂಪರ್ಕಿಸಬಹುದಾಗಿ ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here