




ಉಪ್ಪಿನಂಗಡಿ: ಪುಟ್ಟ ಬಾಲಕಿಯೋರ್ವಳ ಚಿಕಿತ್ಸೆಗೆ ನೆರವಾಗಲೆಂದು ಕಬಡ್ಡಿ ಪಂದ್ಯಾಟ ಆಯೋಜಿಸಿ ಅಲ್ಲಿ ಸಂಗ್ರಹವಾಗಿರುವ ಹಣವನ್ನು ಮಗುವಿನ ಚಿಕಿತ್ಸೆಗೆ ನೀಡುವ ಮೂಲಕ ಪೆರಿಯಡ್ಕದ ನೆಡ್ಚಿಲ್‌ನ ಶ್ರೀ ದುರ್ಗಾ ಫ್ರೆಂಡ್ಸ್ ತಂಡದ ಸದಸ್ಯರು ಮಾದರಿ ಕಾರ್ಯ ನಡೆಸಿದ್ದಾರೆ.




ಬೆಳ್ತಂಗಡಿ ತಾಲೂಕಿನ ನಾಳದ ನಾಗೇಶ್ ಪೂಜಾರಿ ಅವರ ಮೂರುವರೆ ವರ್ಷದ ಪುತ್ರಿ ವಿಷಿಕಾ ನರಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದಳು. ಇವರ ಕುಟುಂಬದ ಆರ್ಥಿಕ ಸಂಕಷ್ಟವನ್ನು ಮನಗಂಡ ನೆಡ್ಚಿಲ್‌ನ ಶ್ರೀ ದುರ್ಗಾ ಫ್ರೆಂಡ್ಸ್ ತಂಡದ ಸದಸ್ಯರು ಹೊನಲು ಬೆಳಕಿನ ಅಮೆಚೂರು ಕಬಡ್ಡಿ ಪಂದ್ಯಾಟವನ್ನು ಆಯೋಜಿಸಿದ್ದು, ಅಲ್ಲಿ ಸಂಗ್ರಹವಾದ 71,850 ರೂ. ಮೊತ್ತವನ್ನು ಮಗುವಿನ ಚಿಕಿತ್ಸೆಗಾಗಿ ಅದರ ಪೋಷಕರಿಗೆ ಹಸ್ತಾಂತರಿಸಿದರು. ಈ ಸಂದರ್ಭ ಶ್ರೀ ದುರ್ಗಾ ಫ್ರೆಂಡ್ಸ್‌ನ ಚಂದ್ರಶೇಖರ ನೆಡ್ಚಿಲ್, ವಿಶ್ವನಾಥ ನೆಡ್ಚಿಲ್, ಪ್ರವೀಣ್ ನೆಡ್ಚಿಲ್, ಸತೀಶ್ ನೆಡ್ಚಿಲ್, ನಿಶಾಂತ್ ನೆಡ್ಚಿಲ್, ಗುರು ನೆಡ್ಚಿಲ್, ಕೃಷ್ಣಪ್ರಸಾದ್ ನೆಡ್ಚಿಲ್, ಪ್ರದೀಪ್ ನೆಡ್ಚಿಲ್ ಮತ್ತಿತರರು ಉಪಸ್ಥಿತರಿದ್ದರು.













