ವಿಟ್ಲ : ಪುನರ್ ನಿರ್ಮಾಣಗೊಂಡ ವಿಟ್ಲ ಜೋಗಿಬೆಟ್ಟು ಶ್ರೀ ಜುಮಾದಿ ಕಲ್ಲಾಲ್ದ ಗುಳಿಗ ದೈವಸ್ಥಾನ ಮತ್ತು ಪರಿವಾರ ದೈವಗಳ ಧರ್ಮಚಾವಡಿಯ ಪ್ರವೇಶೋತ್ಸವ, ದೈವಗಳ ಪುನಃಪ್ರತಿಷ್ಠೆ ಕಲಶಾಭಿಷೇಕ ಮತ್ತು ನೇಮೋತ್ಸವವು ಜ.27ರಂದು ನಡೆಯಿತು.
ದೈವಸ್ಥಾನದಲ್ಲಿ ಜುಮಾದಿ ಕಲ್ಲಾಲ್ದ ಗುಳಿಗ ಮತ್ತು ಚಾವಡಿಯಲ್ಲಿ ವರ್ಣರ ಪಂಜುರ್ಲಿ, ಕುಪ್ಪೆ ಪಂಜುರ್ಲಿ, ಕಲ್ಲುರ್ಟಿ ಕಲ್ಕುಡ ದೈವಗಳ ಪ್ರತಿಷ್ಠೆ ಕಲಶಾಭಿಷೇಕವು ವೇ.ಮೂ.ನಡಿಬೈಲು ಶಂಕರನಾರಾಯಣ ಭಟ್ ರವರ ನೇತೃತ್ವದಲ್ಲಿ ವಿವಿಧ ವೈದಿಕ ವಿಧಿವಿಧಾನಗಳೊಂದಿಗೆ ನಡೆಯಿತು. ಜ.27ರಂದು ಆಲಯ ಪರಿಗ್ರಹ, ಸಪ್ತಶುದ್ಧಿ, ಪುಣ್ಯಾಹ, ವಾಸ್ತು ರಾಕ್ಷೋಘ್ನ ಹೋಮ, ವಾಸ್ತು ಬಲಿ, ಅಧಿವಾಸ ಹೋಮಗಳು ನಡೆಯಿತು.
ಜ.27ರಂದು ಬೆಳಗ್ಗೆ ಗಣಪತಿ ಹೋಮ, ಕಲಶ ಪ್ರಧಾನ ಹೋಮ, ಬೆಳಗ್ಗೆ ಗಂಟೆ 9.46ರ ಮೀನ ಲಗ್ನ ಸುಮುಹೂರ್ತದಲ್ಲಿ ದೈವಗಳ ಪ್ರತಿಷ್ಠೆ ಕಲಶಾಭಿಷೇಕ, ಸತ್ಯನಾರಾಯಣ ಪೂಜೆ, ಮುಡಿಪು ಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.
ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಪಕೀರ ಪೂಜಾರಿ ಜೋಗಿಬೆಟ್ಟು, ಅಧ್ಯಕ್ಷ ಬಾಬು ಕೊಪ್ಪಳ, ಕಾರ್ಯದರ್ಶಿ ಪ್ರಭಾಕರ ಜೆ., ಕೋಶಾಧಿಕಾರಿ ಜಯ ಪೂಜಾರಿ, ಉತ್ಸವ ಸಮಿತಿ ಸಂಚಾಲಕ ಲೋಕಾನಂದ ಎಳ್ತಿಮಾರು ಕಲ್ಲಡ್ಕ, ಸಹಸಂಚಾಲಕ ವಿಟ್ಠಲ ಪೂಜಾರಿ, ನೋಣಯ್ಯ ಪೂಜಾರಿ ಕಲ್ಲಕಟ್ಟ, ಮಂಜುನಾಥ ಕಲ್ಲಕಟ್ಟ, ಆನಂದ ಪೂಜಾರಿ ಜೋಗಿಬೆಟ್ಟು, ಜಯ ಪೂಜಾರಿ ಜೋಗಿಬೆಟ್ಟು, ಭಾರತಿ ಜೋಗಿಬೆಟ್ಟು, ಕೃಷ್ಣಪ್ಪ ಪೂಜಾರಿ, ಯಶ್ವಿತ್ ಜೋಗಿಬೆಟ್ಟು, ಕೃಷ್ಣಪ್ಪ ಪೂಜಾರಿ, ಪ್ರಭಾಕರ, ಸೀತಾ, ಭರತ ಜೋಗಿಬೆಟ್ಟು, ಜಗದೀಶ ಜೋಗಿಬೆಟ್ಟು, ಚಂದಪ್ಪ ಪೂಜಾರಿ, ಅಣ್ಣು ಪೂಜಾರಿ, ರತ್ನಾಕರ ಕೆ., ಆನಂದ ಪೂಜಾರಿ ಜೋಗಿಬೆಟ್ಟು, ಹರೀಶ್ ಪೂಜಾರಿ ಕಾಶಿಮಠ, ಕೇಶವ ವಿ.ಕೆ., ಲೋಹಿತ್ ಜೋಗಿಬೆಟ್ಟು, ನಾರಾಯಣ ಪೂಜಾರಿ ಜೋಗಿಬೆಟ್ಟು ಮೊದಲಾದವರು ಉಪಸ್ಥಿತರಿದ್ದರು.