ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನ ಬ್ರಹ್ಮಕಲಶೋತ್ವವ ಪೂರ್ವಭಾವಿ ಸಭೆ

0

ಬಡಗನ್ನೂರು: ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನ ಬ್ರಹ್ಮಕಲಶೋತ್ವವ ಕಾರ್ಯಕ್ರಮದ ಪೂರ್ವಭಾವಿ ಸಭೆಯು ಜ.20 ರಂದು ದೇವಸ್ಥಾನ ವಠಾರದಲ್ಲಿ ನಡೆಯಿತು.

ದೇವಸ್ಥಾನದ ಬ್ರಹ್ಮಕಲಶೋತ್ವವ ಕಾರ್ಯಕ್ರಮಕ್ಕೆ ಕೇವಲ 20 ದಿವಸಗಳು ಬಾಕಿ ಉಳಿದಿದ್ದು    ಆಮಂತ್ರಣ ಪತ್ರಿಕೆ ಗ್ರಾಮದ ಪ್ರತಿ ಮನೆಗೆ ತಲುಪಿಸುವ ಕಾರ್ಯಕ್ರಮ ಅಭಿಯಾನದ   ಮೂಲಕ ನಡೆದು ಎರಡು ದಿವಸಗಳಲ್ಲಿ ಮುಗಿಸಬೇಕು ಕೆಲಸ ಅಗಬೇಕು.  ಹಿಂದಿನ ಕಾಲದ ಪಡುಮಲೆ ಸಂಬಂಧಿಸಿದಂತೆ 8 ಗ್ರಾಮ ಇತ್ತು ಈ ನಿಟ್ಟಿನಲ್ಲಿ ಅರಿಯಡ್ಕ ,ಮಾಡ್ನೂರು, ಒಳಮೊಗ್ರು, ಪಾಣಾಜೆ,ನಿಡ್ಪಳ್ಳಿ. ನೆಟ್ಟಣಿಗೆ ಮೂಡ್ನೂರು, ಇರ್ದೆಬೆಟ್ಡಪ್ಪಾಡಿ,ಗ್ರಾಮಗಳಲ್ಲಿ ಆಮಂತ್ರಣ ಪತ್ತಿಕೆ ತಲುಪಿಸುವ ಕೆಲಸ ಮಾಡಬೇಕು ಎಂದು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶ್ರೀನಿವಾಸ ಭಟ್ ಸಿ.ಯಾಚ್ ಹೇಳಿದರು.
ಅದ್ದೂರಿ ಹೊರೆಕಾಣಿಕೆ  ಮೆರವಣಿಗೆ
 ಪುತ್ತೂರು ಸೀಮೆ ದೇವರರಾದ ಮಹಾಲಿಂಗೇಶ್ವರ ಸನ್ನಿದಿಯಿಂದ ಮೆರವಣಿಗೆ ಆರಂಭಗೊಂಡು ಪುತ್ತೂರು ಪೇಟೆ, ಮೂಲಕ ದರ್ಭೆ, ಸಂಟ್ಯಾರು, ಕುಂಬ್ರ, ಕೌಡಿಚ್ಚಾರು, ಮಾರ್ಗವಾಗಿ ಪಡುಮಲೆ ದೇವಸ್ಥಾನಕ್ಕೆ ಸ್ಪಬ್ದ ಚಿತ್ರ, , ಬೊಂಬೆ ಸಿಂಗರಿ ಮೇಳದೊಂದಿಗೆ ಅದ್ದೂರಿ ಮೆರವಣಿಗೆ ಮೂಲಕ ಶ್ರೀ ಕ್ಷೇತ್ರಕ್ಕೆ ಆಗಮಿಸಲ್ಲಿದೆ. 
ದೇವಸ್ಥಾನದ ಗರ್ಭಗುಡಿಯ  ಸಂಪೂರ್ಣ ಕೆಲಸ ಮುಗಿದಿದೆ, ಸುತ್ತು ಪಾವಳಿ ಮಾಡಿನ ಕೆಲಸ ಪ್ರಗತಿಯಲ್ಲಿದೆ ಎರಡು ದಿವಸಗಳಲ್ಲಿ ರೀಪು ಹೊಡೆದು ಹಂಚು ಹೊದಿಸುವ ಕಾರ್ಯ ನಡೆಸಬೇಕು ಆ ದಿನ 50೦ಕ್ಕೂ ಹೆಚ್ಚು ಕರಸೇವಕರು ಅಗತ್ಯತೆ ಇದೆ. ಸುತ್ತುಪಾವಳಿಯಲ್ಲಿ ಗಣಪತಿ ಗುಡಿ, ದೇವಸ್ಥಾನದ ಆವರಣದಲ್ಲಿ ನಾಗ ದೇವರ ಕಟ್ಟೆ, ಗುಳಿಗ ಕಟ್ಟೆ ಬೇಡಿ ಕಟ್ಟೆ ಕೆಲಸ ಪ್ರಗತಿಯಲ್ಲಿದೆ ಹಾಗೂ ಮದಕ ಭಾಗದಲ್ಲಿ ರಾಜರಾಜೇಶ್ವರಿ ಗುಡಿ ನಿರ್ಮಾಣ ಪ್ರಗತಿಯಲ್ಲಿದೆ.ಎಂದು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶ್ರೀನಿವಾಸ ಭಟ್ ಸಿ.ಯಾಚ್.ಹೇಳಿದರು.

ಸಭೆಯಲ್ಲಿ  ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮನೋಜ್ ರೈ ಪೇರಾಲು,  ಜೀರ್ಣೋದ್ಧಾರ ಸಮಿತಿ  ಉಪಾಧ್ಯಕ್ಷ ನಾರಾಯಣ ಭಟ್ ಬಿ, ವ್ಯವಸ್ಥಾಪನಾ ಸದಸ್ಯ ಚಂದ್ರಶೇಖರ ಆಳ್ವ ಗಿರಿಮನೆ, ಉಪಸ್ಥಿತರಿದ್ದರು.

 

ಸಭೆಯಲ್ಲಿ ಜೀರ್ಣೋದ್ಧಾರ ಸಮಿತಿ ಸದಸ್ಯರು, ವ್ಯವಸ್ಥಾಪನಾ ಸಮಿತಿ ಸದಸ್ಯರು ಹಾಗೂ ಊರ ಭಕ್ತಾಧಿಗಳು ಭಾಗವಹಿಸಿದ್ದರು. ಹಸಿರುವಾಣಿ ಹೊರೆಕಾಣಿಕೆ ಸಮಿತಿ ಸಂಚಾಲಕ ಸುಬ್ಬಯ್ಯ ರೈ ಹಲಸಿನಡಿ ಸ್ವಾಗತಿಸಿ ವಂದಿಸಿದರು

LEAVE A REPLY

Please enter your comment!
Please enter your name here