ಪುತ್ತೂರು: ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿ ಕೊಳಿ ತ್ಯಾಜ್ಯ ಸುರಿದಾತನಿಂದಲೇ ಬೀಸಾಡಿದ ತ್ಯಾಜ್ಯವನ್ನು ಹೆಕ್ಕಿಸಿದ ಘಟನೆ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕಬಕ ಸಮೀಪದಲ್ಲಿ ಮಾ.4 ರ ತಡ ರಾತ್ರಿ ನಡೆದಿದೆ. ರಸ್ತೆ ಬದಿ ತ್ಯಾಜ್ಯ ಎಸೆದು ಮಾರತಿ ಓಮ್ನಿಯಲ್ಲಿ ಪರಾರಿಯಾಗುತ್ತಿದ್ದಾತನನ್ನು ಹಿಂಬಾಲಿಸಿ ಹಿಡಿದ ಖಾಸಗಿ ಚಾನೆಲ್ ವೊಂದರ ಮಾಲಕ ನಗರಸಭೆ ಸದಸ್ಯ ಪಿ.ಜಿ ಜಗನ್ನಿವಾಸ ರಾವ್ ಅವರಿಗೆ ಮಾಹಿತಿ ನೀಡಿದ್ದರು.
ಪುತ್ತೂರು ಪಡೀಲ್ ನಿಂದ ಮಾರುತಿ ವ್ಯಾನ್ ನಲ್ಲಿ ಮಾಣಿ ಕಡೆ ಹೋಗುತ್ತಿದ್ದ ವ್ಯಕ್ತಿಯೊಬ್ಬರು ಕಬಕ ಕೂವೆತ್ತಿಲ ಸಮೀಪ ಹೊಟೇಲ್ ನ ಕೋಳಿ ತ್ಯಾಜ್ಯವನ್ನು ರಸ್ತೆ ಬದಿ ಬೀಸಾಡಿದ್ದರು. ಇದನ್ನು ಗಮನಿಸಿದ ಖಾಸಗಿ ಚಾನೆಲ್ ವೊಂದರ ಮಾಲಕರು ನಗರಸಭಾ ಸದಸ್ಯ ಪಿ.ಜಿ.ಜಗನ್ನಿವಾಸ ರಾವ್ ಅವರಿಗೆ ಮಾಹಿತಿ ನೀಡಿದರು. ನಗರಸಭಾ ಸದಸ್ಯ ಜಗನ್ನಿವಾಸ ರಾವ್ ಅವರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಬಳಿಕ ತ್ಯಾಜ್ಯ ಎಸೆದ ಮಾರತಿ ವ್ಯಾನ್ ಮಾಲಕ ತನ್ನ ತಪ್ಪನ್ನು ಒಪ್ಪಿಕೊಂಡು ತಾನೆಸೆದ ತ್ಯಾಜ್ಯವನ್ನು ಪುನಃ ವ್ಯಾನ್ ಗೆ ತುಂಬಿಸಿ ಅಲ್ಲಿಂದ ಕೊಂಡೊಯ್ದಿದ್ದಾರೆ. ಘಟನಾ ಸ್ಥಳದಲ್ಲಿ ನಗರಸಭಾ ಸದಸ್ಯ ಪಿ.ಜಿ.ಜಗನ್ನಿವಾಸ ರಾವ್ ಅವರು ರಸ್ತೆ ಬದಿ ತ್ಯಾಜ್ಯ ಸುರಿದ ವ್ಯಕ್ತಿಗೆ ಎಚ್ಚರಿಕೆ ನೀಡಿದ್ದಾರೆ. ತಡರಾತ್ರಿಯಾದರೂ ನಗರಸಭಾ ಸದಸ್ಯರ ಸ್ವಚ್ಚತಾ ಕಾಳಜಿಗೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗಿದೆ.