









ಪುತ್ತೂರು : ಕಡಬ ಶ್ರೀಶ್ರೀಕಂಠಸ್ವಾಮಿ, ಶ್ರೀಮಹಾಗಣಪತಿ ದೇವಸ್ಥಾನದ ಪ್ರತಿಷ್ಠಾ ಮಹೋತ್ಸವದ ಅಂಗವಾಗಿ ಯಕ್ಷಶ್ರೀ ಹವ್ಯಾಸಿ ಬಳಗದಿಂದ ಹರಿದರ್ಶನ ಪ್ರಸಂಗದ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಗಣೇಶ್ ಪುಂಜಾಲಕಟ್ಟೆ ಮತ್ತು ದಿವ್ಯಾ ಮೂಡಬಿದ್ರೆ, ಚೆಂಡೆಯಲ್ಲಿ ಕೇಶವ ಬೈಪಡಿತ್ತಾಯ, ಮದ್ದಳೆಯಲ್ಲಿ ಅನಂತ ಬೈಪಡಿತ್ತಾಯ ಭಾಗವಹಿಸಿದ್ದಾರೆ. ಮುಮ್ಮೇಳದಲ್ಲಿ ವೀಣಾ ನಾಗೇಶ್ ತಂತ್ರಿ, ಗೀತಾ ಕುದ್ದಣ್ಣಾಯ, ಆಶಾಲತ ವಿ.ಕೆ, ಜ್ಯೋತಿ ಶೈಲೇಶ್, ಅತಿಥಿ ಕಲಾವಿದರಾಗಿ ಪ್ರೊ. ಮಧೂರು ಮೋಹನ ಕಲ್ಲೂರಾಯ ಭಾಗವಹಿಸಿದರು.













