ಪುತ್ತೂರು:ಇಲ್ಲಿನ ನೆಲ್ಲಿಕಟ್ಟೆಯಲ್ಲಿರುವ ಈಶ ಎಜ್ಯುಕೇಶನಲ್ ಆಂಡ್ ಸೋಶಿಯಲ್ ಸರ್ವೀಸ್ ಟ್ರಸ್ಟ್ ಆಡಳಿದಲ್ಲಿ ನಡೆಸಲ್ಪಡುವ ಈಶ ಸಮೂಹ ಶಿಕ್ಷಣ ಸಂಸ್ಥೆಗಳ ೨೩ನೇ ವಾರ್ಷಿಕೋತ್ಸವವು ಫೆ.೧೨ರಂದು ಬಪ್ಪಳಿಗೆ ಜೈನ ಭವನದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉಪಪ್ರಾಂಶುಪಾಲೆ ಶಾರದಾ ಕೃಷ್ಣ ರವರ ತಂದೆ ಸುಬ್ಬ ಪಾಟಾಳಿ ಹಾಗೂ ತಾಯಿ ಸೀತಾ ದೀಪ ಬೆಳಗಿಸಿ ಉದ್ಘಾಟಿಸಿ, ಶುಭಹಾರೈಸಿದರು.
ಮುಖ್ಯ ಅತಿಥಿಯಾಗಿದ್ದ ವಿವೇಕಾನಂದ ಮಹಾವಿದ್ಯಾಲಯದ ವಿಶ್ರಾಂತ ಪ್ರಾಂಶುಪಾಲ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ದೇವರ ಪ್ರಾರ್ಥನೆಯ ಜೊತೆಗೆ ನಮ್ಮ ಪರಿಶ್ರಮವೂ ಬಹುಮುಖ್ಯ. ಪರಿಶ್ರಮವಿದ್ದರೆ ಜೀವನದ ಎಲ್ಲಾ ಹಂತದಲ್ಲಿಯೂ ಕಷ್ಟ ಆದರೂ ಮುಂದೆ ಯಶಸ್ಸು ಲಭಿಸುತ್ತದೆ. ನಮ್ಮ ಸಾಧನೆ, ಯಶಸ್ಸಿಗೆ ಯಾವುದೇ ರಾಜಮಾರ್ಗವಿಲ್ಲ. ಸಾಧಿಸಿ, ಯಶಸ್ಸುಗಳಿಸಿದಾಗ ಎಲ್ಲಾ ಕಡೆ ರಾಜಮಾರ್ಗಗಳು ಲಭಿಸುತ್ತದೆ. ಬರುವ ಅವಕಾಶವನ್ನು ಬಳಸಿಕೊಂಡು ಜೀವನಕ್ಕೆ ಮೌಲ್ಯ ಪಡೆಯಬೇಕು. ಗುರಿತಲುಪುವುದೇ ನಮ್ಮ ಉದ್ದೇಶವಾಗಿರಬೇಕು. ಶೈಕ್ಷಣಿಕ ಜೀವನದಲ್ಲಿ ಕಷ್ಟಗಳು ಸಾಮಾನ್ಯ. ಪ್ರಯತ್ನ ಮಾಡಿದಾಗ ಯಶಸ್ಸು ಖಂಡಿದಾ ಸಾಧ್ಯ ಎಂದ ಅವರು ಶಿಕ್ಷಣಕ್ಕಿಂತ ದೊಡ್ಡ ಸಂಪತ್ತು ಬೇರೋದಿಲ್ಲ. ಇದು ಜೀವನದ ಕೊನೆ ತನಕ ಇರುತ್ತದೆ ಎಂದರು.
ನಗರ ಠಾಣಾ ಉಪ ನಿರೀಕ್ಷಕ ಎಸ್.ಐ ಶ್ರೀಕಾಂತ್ ರಾಥೋಡ್ ಮಾತನಾಡಿ, ಆಸ್ತಿ, ಅಂತಸ್ತುಗಳಿಗೆ ಸಮಾಜದಲ್ಲಿ ಗೌರವವಿಲ್ಲ. ಉತ್ತಮ ವ್ಯಕ್ತಿತ್ವಕ್ಕೆ ಜಗತ್ತಿನಲ್ಲಿ ಉತ್ತಮಬಗೌರವವಿದೆ. ಉತ್ತಮ ವ್ಯಕ್ತಿತ್ವ ರೂಡಿಸಿಕೊಂಡಾಗ ಸಮಾಜದಲ್ಲಿ ಉತ್ತಮ ಗೌರವವಿದರ. ಕೌಶಲ್ಯವೇ ಜಗತ್ತನ್ನು ಆಳುತ್ತಿದ್ದು ಈಶ ವಿದ್ಯಾಲಯವು ತನ್ನದೇ ಆದ ಶೈಲಿಯಲ್ಲಿ ಸೇವೆ ನೀಡುತ್ತಿದ್ದು ಇನ್ನಷ್ಟು ಸಾವಿರಾರು ವಿದ್ಯಾರ್ಥಿಗಳ ಬಾಳಿನ ಬೆಳಕಾಗಿ ಮೂಡಿಬರಲಿ ಎಂದು ಹಾರೈಸಿದರು.
ಪ್ರಾಧ್ಯಾಪಕರು ಹಾಗೂ ತರಬೇತುದಾರರಾಗಿರುವ ಡಾ| ರಾಜೇಶ್ ಬೆಜ್ಜಂಗಳ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ವಿಫಲತೆಯನ್ನು ಕಂಡವರ ಬಾಳಿನ ಬೆಳಕಾಗಿ ಈಶ ವಿದ್ಯಾಲಯವು ಬೆಳೆದಿದೆ. ಶೈಕ್ಷಣಿಕವಾಗಿ ಹಿಂದುಳಿದವರನ್ನು ಬೆಳೆಸುವಂತ ಈಶದ ದೊಡ್ಡ ಸಾಧನೆ ಶ್ಲಾಘನೀಯ. ಅವಕಾಶಗಳು ಸಾಕಷ್ಟಿದೆ. ಬಳಸಿಕೊಂಡು ಮುನ್ನಡೆಯಬೇಕು. ಕಳೆದ ವಿಫಲತೆಗಳನ್ನುಬಿಟ್ಟು ಸಾಧನೆಯ ಹಾದಿಯಲ್ಲಿ ಮುನ್ನಡೆದಾಗ ಯಶಸ್ಸು ಸಾಧ್ಯ. ನಿಮ್ಮ ಬಾಳಿಗೆ ಬೆಳಕಾದ ಸಂಸ್ಥೆಯನ್ನು ಮರೆಯಬಾರದು. ಬಾಳಿಗೆ ಬೆಳಕಾದವರೇ ನಮ್ಮ ಜೀವನದ ಆದರ್ಶರಾಗಬೇಕು ಎಂದರು.
ವೇದ ಚಾರಿಟೇಬಲ್ ಟ್ರಸ್ಟ್‌ನ ಟ್ರೈನಿಂಗ್ ಮ್ಯಾನೇಜರ್ ಯಶಸ್ ಕಿಶನ್ ಎಚ್.ಆರ್ ಮಾತನಾಡಿ, ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಈಶ ಶಿಕ್ಷಣ ಸಮಾಜದಲ್ಲಿ ಉತ್ತಮ ಸೇವೆ ನೀಡುತ್ತದೆ. ಇಲ್ಲಿ ಶಿಕ್ಷಣ ಪಡೆದ ಸಾವಿರಾರು ವಿದ್ಯಾರ್ಥಿಗಳು ಉದ್ಯೋಗದಲ್ಲಿದ್ದಾರೆ. ಕಳೆದ ೨೩ ವರ್ಷಗಳಿಂದ ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ತಮ ಸೇವೆ ನೀಡುತ್ತಿದ್ದು ಇಲ್ಲಿ ತರಬೇತಿ ಪಡೆದರೆ ಜೀವನದಲ್ಲಿ ಯಶಸ್ಸು ಸಾಧಿಸಬಹುದು ಎಂದರು.
ಆಲಂಕಾರು ಜ್ಞಾನಸುಧಾ ವಿದ್ಯಾ ಬೋಧನಾ ಸಂಸ್ಥೆಯ ಸಂಚಾಲಕ ಬಿ.ಎಲ್ ಜನಾರ್ದನ ಮಾತನಾಡಿ, ಶೈಕ್ಷಣಿಕ, ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಿ ಬೆಳೆಸುವುದು ದೊಡ್ಡ ಸಾಧನೆಯಾಗಿದೆ. ಶಿಕ್ಷಕರು ಸದಾ ವಿದ್ಯಾರ್ಥಿಗಳ ಹಿತ ಬಯಸುತ್ತಿದ್ದು ಅವರಿಗೆ ವಿರುದ್ಧವಾಗಿ ನಡೆದುಕೊಳ್ಳಬಾರದು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುವ ಮೂಲಕ ಈಶ ಶಿಕ್ಷಣ ಸಂಸ್ಥೆಗೆ ಜಿಲ್ಲಾ, ರಾಜ್ಯ ಪ್ರಶಸ್ತಿ ಲಭಿಸಲಿ ಎಂದು ಹಾರೈಸಿದರು.
ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಪಿ.ಎಮ್ ಅಶ್ರಫ್ ಮಾತನಾಡಿ, ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ತೊಡಗಿಸಿಕೊಳ್ಳಬೇಕು. ಉತ್ತಮ ಶಿಕ್ಷಣ ಪಡೆದು ಜೀವನದಲ್ಲಿ ಸಾಧಕರಾಗಿ ಹೊರಹೊಮ್ಮಬೇಕು ಎಂದರು.
ಸನ್ಮಾನ ಸ್ವೀಕರಿಸಿದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹರೇಕಳ ಹಾಜಬ್ಬ ಮಾತನಾಡಿ, ಹರೇಕಳದಲ್ಲಿ ನಾನು ಪ್ರಾರಂಭಿಸಿದ ಶಿಕ್ಷಣ ಸಂಸ್ಥೆ ಹಾಗೂ ನನ್ನನ್ನು ಎರಡನೇ ಬಾರಿಗೆ ಸನ್ಮಾನಿಸದ ಈಶ ಶಿಕ್ಷಣ ಸಂಸ್ಥೆಗಳೆರಡೂ ೨೩ನೇ ವರ್ಷದ ಸಂಭ್ರಮದಲ್ಲಿದೆ. ಒಬ್ಬ ಬಡವನಾದ ನನ್ನನ್ನು ಗುರುತಿಸಿ ಗೌರವಿಸಿದ ತಮಗೆ ಅಭಿನಂದನೆಗಳು, ಈಶ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಣ ಪಡೆದ ಜಿಲ್ಲೆಯ ವಿದ್ಯಾರ್ಥಿಗಳು ಮುಂದೆ ಐಎಎಸ್, ಐಪಿಎಸ್ ಅಧಿಕಾರಿಗಳಾಗಿ ಬರಲಿ ಎಂದು ಆಶಿಸಿದರು. ಡಾ.ಪ್ರಮೋದ್ ಎಂ.ಜಿ ಹಾಗೂ ಕಾರ್ತಿಕ್ ಅನಿಸಿಕೆ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಪ್ರಾಂಶುಪಾಲ ಗೋಪಾಲಕೃಷ್ಣ ಯಂ.ಎ. ಮಾತನಾಡಿ, ಪ್ರಾರ್ಥಿಸು, ಪರಿಶ್ರಮಿಸು, ಪ್ರಕಾಶಿಸು ಎಂಬ ಧ್ಯೇಯ ವಾಕ್ಯದಲ್ಲಿ ಮುನ್ನಡೆಯುತ್ತಿರುವ ನಮ್ಮ ಸಂಸ್ಥೆಯಲ್ಲಿ ಜೀವನದಲ್ಲಿ ಸೋತು ಬಂದವರು ಭವಿಷ್ಯಕ್ಕೆ ಪೂರಕವಾದ ಶಿಕ್ಷಣ ಹಾಗೂ ತರಬೇತಿಗಳನ್ನು ನೀಡಲಾಗುತ್ತಿದೆ. ಎಸ್‌ಎಸ್‌ಎಲ್‌ಸಿ, ಪಿಯುಸಿ ಹಾಗೂ ಡಿಎಂಇಡಿ ಕೋರ್ಸ್‌ಗಳನ್ನು ನೀಡಲಾಗುತ್ತಿದ್ದು ಉತ್ತಮ ಫಲಿತಾಂಶಗಳನ್ನು ಸಂಸ್ಥೆಯ ಪಡೆದುಕೊಂಡಿದೆ. ಸರಕಾರ ಯೋಜನೆಯಲ್ಲಿ ಸೀಮಿತ ಜನರಿಗೆ ಉಚಿತ ಕಂಪ್ಯೂಟರ್, ಟೈಲರಿಂಗ್, ಬ್ಯೂಟಿಷಿಯನ್ ತರಬೇತಿಗಳನ್ನು ನೀಡುತ್ತಿದೆ. ಶಿಕ್ಷಣದ ಜೊತೆಗೆ ಕಲೆ, ಸಾಹಿತ್ಯ, ಸಾಮಾಜಿಕವಾಗಿಯೂ ಸಂಸ್ಥೆ ತೊಡಗಿಸಿಕೊಂಡಿದೆ. ವಿದ್ಯಾರ್ಥಿ ವೇತನ ವಿತರಣೆ ಹಾಗೂ ಉದ್ಯೋಗ ಮೇಳದ ಮೂಲಕ ಉದ್ಯೋಗ ದೊರಕಿಸಿಕೊಡಲಾಗಿದೆ. ಸಂಸ್ಥೆಯ ವಿದ್ಯಾರ್ಥಿಗಳು ದಾನಿಗಳ ಮೂಲಕ ಸಂಗ್ರಹಿಸಿದ ದೇಣಿಗೆಯಿಂದ ಅಶಕ್ತರಿಗೆ ಧನ ಸಹಾಯ ನೀಡುತ್ತಿರುವ ಸಂಸ್ಥೆಯು ಮುಂದಿನ ಎರಡು ವರ್ಷದಲ್ಲಿ ಬೆಳ್ಳಿ ಹಬ್ಬವನ್ನು ಸಂಭ್ರಮಿಸಲಿದೆ ಎಂದರು.
ಈಶಶ್ರೀ ಪ್ರಶಸ್ತಿ ಪ್ರದಾನ, ಸನ್ಮಾನ:
ಸಮಾಜ ಸೇವಕ, ಮಹಾಲಿಂಗೇಶ್ವರ ದೇವಸ್ಥಾನದ ಸಿಬಂದಿ ಪದ್ಮನಾಭರವರಿಗೆ ಸಂಸ್ಥೆಯ ೨೦೨೩ನೇ ಸಾಲಿನ ಈಶಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಶಿಕ್ಷಣ ಸಂತ ಹರೇಕಳ ಹಾಜಬ್ಬ, ೨೦೦೬ ಸಾಲಿನ ಸಂಸ್ಥೆಯ ವಿದ್ಯಾರ್ಥಿ, ವಿವೇಕಾನಂದ ಕಾಲೇಜಿನ ಇತಿಹಾಸ ಉಪನ್ಯಾಸಕ ಡಾ.ಪ್ರಮೋದ್ ಎಂ.ಜಿ, ಯುವ ಕ್ರೀಡಾಪಟು, ಸಂಸ್ಥೆಯ ಹಿರಿಯ ವಿದ್ಯಾರ್ಥಿ ಕಾರ್ತಿಕ್ ರವರನ್ನು ಸನ್ಮಾನಿಸಲಾಯಿತು. ವಾರ್ಷಿಕೋತ್ಸವದ ಅಂಗವಾಗಿ ನಡೆಸಲಾದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ವಿದ್ಯಾರ್ಥಿಗಳಾದ ಕಾವ್ಯ, ಕಾವ್ಯಶ್ರೀ, ಪೂರ್ಣಿಮಾ, ಧನ್ಯಶ್ರೀ ಪ್ರಾರ್ಥಿಸಿದರು. ಕಂಪ್ಯೂಟರ್ ಶಿಕ್ಷಕಿ …..ಸ್ವಾಗತಿಸಿದರು. ಉಪಪ್ರಾಂಶುಪಾಲೆ ಶಾರದಾ ಕೃಷ್ಣಾ ಹಾಗೂ ಧನುಷಾ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕರಾದ ಪೂರ್ಣಿಮಾ, ಉಷಾ ಜೆ., ರಶೀದಾ, ವಿನಯ, ರಕ್ಷಾ, ಉಷಾ ಡಿ., ಪೂರ್ಣಿಮಾ, ಯಶಸ್ವಿನಿ, ಭಾಗ್ಯಲಕ್ಷ್ಮೀ, ನಿಧಿ ಆರ್.ಪಿ., ಉಷಾ, ಪ್ರತೀಕ್ಷಾ ವಿವಿಧ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಸಹಭೋಜನ ನಡೆಯಿತು. ಬಳಿಕ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಟ್ಟಾಭಿರಾಮ ಸುಳ್ಯ ಇವರಿಂದ ಶ್ಯಾಡೋ ಪ್ಲೇ., ಸಂಸ್ಥೆಯ ವಿದ್ಯಾರ್ಥಿನಿಯರು, ಉಪನ್ಯಾಸಕರಿಂದ ಭರತನಾಟ್, ಹಾಡು, ಜಾನಪದ ನೃತ್ಯ, ಕರೋಕೆ ಹಾಡು ಸೇರಿದಂತೆ ಸುಮಾರು ೫೦ಕ್ಕೂ ಅಧಿಕ ವಿವಿಧ ಸಾಂಸ್ಕೃತಿಕ ಮನೋರಂಜನಾ ಕಾರ್ಯಕ್ರಮಗಳು ನಡೆದು ಪ್ರೇಕ್ಷಕರ ಮನಸೋರೆಗೊಳಿಸಿತು.