ಸವಣೂರು ಶಾಲಾ ಮಕ್ಕಳಿಗೆ ಸ್ಥಳೀಯ ಸರಕಾರದ ಮಾಹಿತಿ 

0

ಸವಣೂರು : ಇಲ್ಲಿನ ಸ.ಉ ಹಿ ಪ್ರಾ ಶಾಲೆಯ ಆರನೇ ಮತ್ತು ಎ೦ಟನೇ ತರಗತಿಯ ಮಕ್ಕಳು, ಸಾಮಾಜಿಕ ಅಧ್ಯಯನ ಪಾಠ, ಸ್ಥಳೀಯ ಸರಕಾರದ ಮಾಹಿತಿ ಎಂಬ ವಿಚಾರದ ಪ್ರಶ್ನಾವಳಿಯ ಬಗ್ಗೆ ಉತ್ತರ ಪಡೆಯಲು ಸವಣೂರು ಗ್ರಾಮ ಪಂಚಾಯತಿಗೆ ಭೇಟಿ ನೀಡಿದರು.

ವಿದ್ಯಾರ್ಥಿಗಳು  ಗ್ರಾ.ಪಂ. ಅಧ್ಯಕ್ಷೆ ರಾಜೀವಿ ಶೆಟ್ಟಿ ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಎ.ಮನ್ಮಥ ಅವರಿಂದ ಉತ್ತರ ಪಡೆದುಕೊಂಡರು. ಗ್ರಾಮ ಸಭೆ, ವಾರ್ಡ್ ಸಭೆ, ಅಧ್ಯಕ್ಷರ ಅಧಿಕಾರಗಳು, ಬೇಡಿಕೆಗಳು ಮತ್ತು ಅನುದಾನ ಮತ್ತು ವ್ಯಾಪ್ತಿಯ ಬಗ್ಗೆ ತಿಳಿದುಕೊಳ್ಳಲಾಯಿತು.

ಸಭೆಯಲ್ಲಿ  ಗ್ರಾ.ಪಂ. ಸದಸ್ಯರಾದ ಚಂದ್ರಾವತಿ ಸುಣ್ಣಾಜೆ, ಬಾಬು, ಇಂದಿರಾ, ತೀರ್ಥರಾಮ ಕೆಡೆಂಜಿ, ಶಾಲಾ ಮುಖ್ಯಗುರು ಬಾಲಕೃಷ್ಣ ಕೆ. ಮತ್ತು ಸಹ ಶಿಕ್ಷಕಿ ಆಶಾ ಎಮ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here