





ಪುತ್ತೂರು:ಲಯನ್ಸ್ ಜಿಲ್ಲೆ 317 ಡಿ, ರೀಜನ್ 7, ವಲಯ ಒಂದರ ಲಯನ್ಸ್ ಕ್ಲಬ್ ಪುತ್ತೂರು, ಲಯನ್ಸ್ ಕ್ಲಬ್ ಪುತ್ತೂರ್ದ ಮುತ್ತು, ಲಿಯೋ ಪುತ್ತೂರ್ದ ಮುತ್ತುಗೆ ಜಿಲ್ಲಾ ರಾಜ್ಯಪಾಲ ಸಂಜಿತ್ ಶೆಟ್ಟಿ ಪಿಎಂಜೆಫ್ ರವರ ಅಧಿಕೃತ ಭೇಟಿ ಫೆ.17 ರಂದು ಲಯನ್ಸ್ ಸೇವಾ ಮಂದಿರದಲ್ಲಿ ಸಂಜೆ ಜರಗಲಿದೆ ಎಂದು ಲಯನ್ಸ್ ಕ್ಲಬ್ ಅಧ್ಯಕ್ಷ ಕೆ.ಕೇಶವ ನಾಯ್ಕ್, ಕಾರ್ಯದರ್ಶಿ ಗಣೇಶ್ ಶೆಟ್ಟಿ ಕೆ, ಕೋಶಾಧಿಕಾರಿ ಗಣೇಶ್ ಶೆಟ್ಟಿ ಪಿ, ಲಯನ್ಸ್ ಕ್ಲಬ್ ಪುತ್ತೂರ್ದ ಮುತ್ತು ಅಧ್ಯಕ್ಷ ಕೇಶವ ಪೂಜಾರಿ ಬೆದ್ರಾಳ, ಕಾರ್ಯದರ್ಶಿ ಎಸ್.ಮೋಹನ್ ನಾಯಕ್, ಕೋಶಾಧಿಕಾರಿ ರವಿಚಂದ್ರ ಆಚಾರ್ಯ, ಲಿಯೋ ಕ್ಲಬ್ ಪುತ್ತೂರ್ದ ಮುತ್ತು ಅಧ್ಯಕ್ಷ ರಂಜಿತಾ ಶೆಟ್ಟಿ, ಕಾರ್ಯದರ್ಶಿ ಲೆರಿಸ್ಸ ಪ್ರಿಯಾ ಮಸ್ಕರೇನ್ಹಸ್, ಕೋಶಾಧಿಕಾರಿ ಶ್ರೀಕರ್ ಶೆಣೈಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.










