ಬೆಂಗಳೂರು ಪೂರ್ವ ತಹಸಿಲ್ದಾರ್ ಅಜಿತ್ ಕುಮಾರ್ ರೈ ಅಮಾನತು ಆದೇಶಕ್ಕೆ ಕೆಎಟಿ ತಡೆ : ಹೈಕೋರ್ಟ್ ನಿರ್ದೇಶನದಂತೆ ಹುದ್ದೆಯಲ್ಲಿ ಮುಂದುವರಿಸಿ ಸರಕಾರ ಆದೇಶ

0

  • ರಾಜಕಾಲುವೆ ಒತ್ತುವರಿದಾರರಿಗೆ ಸಹಕಾರ, ಬಿಬಿಎಂಪಿಯಿಂದ ನಡೆದ ತೆರವು ಕಾರ್ಯಾಚರಣೆಗೆ ಸಹಕರಿಸದೆ ಕರ್ತವ್ಯಲೋಪ ಆರೋಪ
  • ನ.23ರಂದು ಅಮಾನತು ಮಾಡಿದ್ದ ಸರಕಾರ
  • ನ.30ಕ್ಕೆ ಕೆಎಟಿಯಿಂದ ಅಮಾನತು ಆದೇಶಕ್ಕೆ ತಡೆ
  • ಕೆಎಟಿ ತಡೆ ನೀಡಿದ್ದರೂ ಹುದ್ದೆಯಲ್ಲಿ ಮುಂದುವರಿಸದ ಸರಕಾರ
  • ಅನಿಲ್ ಎಂ.ಅವರನ್ನು ಕೆ.ಆರ್.ಪುರಂ ತಹಸಿಲ್ದಾರ್ ಆಗಿ ಸ್ಥಳ ನಿಯುಕ್ತಿ
  • ಅಜಿತ್ ಕುಮಾರ್ ರೈಯವರಿಂದ ರಾಜ್ಯ ಹೈಕೋರ್ಟ್ನಲ್ಲಿ ರಿಟ್ ಅರ್ಜಿ
  • ಹೈಕೋರ್ಟ್ ನಿರ್ದೇಶನದಂತೆ ಕೆ.ಆರ್.ಪುರಂ ತಹಸಿಲ್ದಾರ್-ಗ್ರೇಡ್ 1 ಹುದ್ದೆಯಲ್ಲಿ ಮುಂದುವರಿಸಿ ಆದೇಶ

ಬೆಂಗಳೂರು: ರಾಜಕಾಲುವೆ ಮೇಲಿರುವ ಅಕ್ರಮ ಒತ್ತುವರಿ ತೆರವುಗೊಳಿಸಲು ಆದೇಶ ನೀಡಿದ್ದರೂ ಸರಿಯಾಗಿ ವಿಚಾರಣೆ ಮಾಡದೆ ಕರ್ತವ್ಯ ಲೋಪವೆಸಗಿರುವ ಆರೋಪದಲ್ಲಿ ಅಮಾನತುಗೊಂಡಿದ್ದ ಬೆಂಗಳೂರು ಪೂರ್ವ ತಾಲ್ಲೂಕು(ಕೆ.ಆರ್.ಪುರಂ)ಗ್ರೇಡ್-1 ತಹಸಿಲ್ದಾರ್ ಪುತ್ತೂರಿನ ಎಸ್.ಅಜಿತ್ ಕುಮಾರ್ ರೈ ಅವರ ಅಮಾನತು ಆದೇಶಕ್ಕೆ ಕರ್ನಾಟಕ ಆಡಳಿತಾತ್ಮಕ ನ್ಯಾಯಾಲಯ ತಡೆಯಾಜ್ಞೆ ನೀಡಿದ್ದು ರಾಜ್ಯ ಹೈಕೋರ್ಟ್ ನಿರ್ದೇಶನದಂತೆ ಅಜಿತ್ ಕುಮಾರ್ ರೈಯವರನ್ನು ಕೆ.ಆರ್.ಪುರಂ ತಾಲೂಕು ಗ್ರೇಡ್-1 ತಹಸಿಲ್ದಾರ್ ಹುದ್ದೆಯಲ್ಲಿ ಮುಂದುವರಿಸಿ ಸರಕಾರ ಆದೇಶ ಮಾಡಿದೆ.ಅಜಿತ್ ಕುಮಾರ್ ರೈಯವರು ಫೆ.16ರಂದು ಮರು ಅಽಕಾರ ವಹಿಸಿಕೊಂಡಿದ್ದಾರೆ.
ಬೆಂಗಳೂರು ಮಹದೇವಪುರದಲ್ಲಿನ ರಾಜಕಾಲುವೆ ಮೇಲಿರುವ ಅಕ್ರಮ ಒತ್ತುವರಿ ಕಟ್ಟಡ ಅಥವಾ ಇತರೆ ನಿರ್ಮಾಣಗಳನ್ನು ತೆಗೆಯಬೇಕಾದರೆ ಕರ್ನಾಟಕ ಭೂಕಂದಾಯ ಕಾಯ್ದೆ-104ರ ಅಡಿಯಲ್ಲಿ ಸರಿಯಾದ ರೀತಿಯಲ್ಲಿ ನೊಟೀಸ್ ನೀಡಿ ತುರ್ತಾಗಿ ಆದೇಶ ನೀಡಿದ್ದಲ್ಲಿ ಒತ್ತುವರಿ ತೆರವುಗೊಳಿಸಲು ಬಿಬಿಎಂಪಿಯಿಂದ ಕ್ರಮಕೈಗೊಳ್ಳಲು ಸಾಧ್ಯವಾಗುತ್ತದೆ.ಆದರೆ ಬೆಂಗಳೂರು ಪೂರ್ವ ತಾಲೂಕು ತಹಸಿಲ್ದಾರ್ ಎಸ್.ಅಜಿತ್ ಕುಮಾರ್ ರೈ ಅವರು ಸರಿಯಾದ ರೀತಿಯಲ್ಲಿ ವಿಚಾರಣೆ ಮಾಡದೆ, ಆದೇಶ ನೀಡಿದ್ದರೂ ತಡವಾಗಿ ಬಿಬಿಎಂಪಿಗೆ ಕಳುಹಿಸಿರುವುದು ಕಂಡು ಬಂದಿರುತ್ತದೆ.ಈ ಎಲ್ಲಾ ನ್ಯೂನ್ಯತೆಗಳಿಂದ ನ್ಯಾಯಾಲಯವು ಒತ್ತುವರಿ ತೆರವು ಕಾರ್ಯಾಚರಣೆಗೆ ತಡೆಯಾಜ್ಞೆ ನೀಡಿರುವುದು ಗಮನಕ್ಕೆ ಬಂದಿರುವುದರಿಂದ ತಹಸಿಲ್ದಾರ್ ಎಸ್.ಅಜಿತ್ ಕುಮಾರ್ ರೈಯವರನ್ನು ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ಜಾಗದಲ್ಲಿ ಮುಂದುವರೆಸಬಾರದು ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮುಖ್ಯ ಆಯುಕ್ತರು ಸರಕಾರಕ್ಕೆ ಪತ್ರ ಬರೆದು ಕೋರಿದ್ದರು.ಇದನ್ನು ಪರಿಶೀಲಿಸಿ, ಓರ್ವ ಜವಾಬ್ದಾರಿಯುತ ಅಽಕಾರಿಯಾಗಿ ಸರ್ಕಾರಿ ನೌಕರರಿಗೆ ತಕ್ಕುದಲ್ಲದ ರೀತಿಯಲ್ಲಿ ವರ್ತಿಸಿ ಕರ್ತವ್ಯಲೋಪವೆಸಗಿ ಕರ್ನಾಟಕ ನಾಗರಿಕ ಸೇವಾ(ನಡತೆ) ನಿಯಮಗಳು 2021ರ ನಿಯಮ 3(!)(!!)(!!!)ಅನ್ನು ಉಲ್ಲಂಸಿರುವುದು ಮೇಲ್ನೋಟಕ್ಕೆ ಕಂಡು ಬಂದಿರುವುದರಿಂದ ಬೆಂಗಳೂರು ಪೂರ್ವ ತಹಸಿಲ್ದಾರ್-ಗ್ರೇಡ್ 1 ಎಸ್.ಅಜಿತ್ ಕುಮಾರ್ ರೈಯವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲು ತೀರ್ಮಾನಿಸಿ, ಇವರ ವಿರುದ್ಧದ ದುರ್ನಡತೆ ಹಾಗೂ ಕರ್ತವ್ಯ ಲೋಪಗಳಿಗಾಗಿ ಕರ್ನಾಟಕ ನಾಗರಿಕ ಸೇವಾ(ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ)ನಿಯಮಾವಳಿಗಳು, 1957ರ ನಿಯಮ 10(1)ರನ್ವಯ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಇಲಾಖಾ ವಿಚಾರಣೆ ಬಾಕಿಯಿರಿಸಿ ಅವರನ್ನು ಸರ್ಕಾರಿ ಸೇವೆಯಿಂದ ಅಮಾನತುಗೊಳಿಸಿ ನ.23ರಂದು ಆದೇಶಿಸಲಾಗಿತ್ತು.ಅವರ ಹುದ್ದೆಯ ಮೇಲಿನ ಲೀನ್‌ಅನ್ನು ಸಹಾಯಕ ನಿರ್ದೇಶಕರು, ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನಾಲಯ, ಜಿಲ್ಲಾಧಿಕಾರಿ ಕಚೇರಿ ಬೆಂಗಳೂರು ಗ್ರಾಮಾಂತರ ತಹಸಿಲ್ದಾರ್ ಗ್ರೇಡ್-2 ಹುದ್ದೆಗೆ ವರ್ಗಾಯಿಸಿ ಸರ್ಕಾರದ ಅಂದಿನ ಕಾರ್ಯದರ್ಶಿ ಕಂದಾಯ ಇಲಾಖೆ ಸೇವೆಗಳು-3)ಜಿ.ಎನ್.ಸುಶೀಲ ಅವರು ನ.23ರಂದು ಆದೇಶ ಹೊರಡಿಸಿದ್ದರು.

ಕೆಎಟಿಯಿಂದ ತಡೆಯಾಜ್ಞೆ:

ತನ್ನನ್ನು ಅಮಾನತುಗೊಳಿಸಿದ್ದ ಸರಕಾರದ ಆದೇಶವನ್ನು ತಹಸಿಲ್ದಾರ್ ಎಸ್.ಅಜಿತ್ ಕುಮಾರ್ ರೈಯವರು ಕರ್ನಾಟಕ ಆಡಳಿತಾತ್ಮಕ ನ್ಯಾಯಾಲಯ(ಕೆಎಟಿ)ದಲ್ಲಿ ಪ್ರಶ್ನಿಸಿದ್ದರು.ಇದರ ವಿಚಾರಣೆ ನಡೆಸಿದ್ದ ಕೆಎಟಿ ಅಮಾನತು ಆದೇಶಕ್ಕೆ ನ.30ಕ್ಕೆ ನೀಡಿತ್ತು.

ಹೈಕೋರ್ಟ್‌ ನ ಲ್ಲಿ ರಿಟ್:

ಅಮಾನತು ಆದೇಶಕ್ಕೆ ಕೆಎಟಿ ನ.30ರಂದು ತಡೆಯಾಜ್ಞೆ ನೀಡಿದ್ದರೂ ತಹಸಿಲ್ದಾರ್ ಅಜಿತ್ ಕುಮಾರ್ ರೈಯವರನ್ನು ಬೆಂಗಳೂರು ನಗರ ಜಿಲ್ಲೆಯ ಬೆಂಗಳೂರು ಪೂರ್ವ ತಾಲೂಕು(ಕೆ.ಆರ್.ಪುರಂ)ತಹಸಿಲ್ದಾರ್-ಗ್ರೇಡ್ 1ರಲ್ಲಿ ಮುಂದುವರಿಸದೆ ಗ್ರೇಡ್-2 ತಹಸಿಲ್ದಾರ್ ಆಗಿರುವ ಅನಿಲ್ ಎಂ.ಅವರನ್ನು ಕೆ.ಆರ್.ಪುರಂ ತಾಲೂಕು ತಹಸಿಲ್ದಾರ್-ಗ್ರೇಡ್ 1 ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿ ಸರಕಾರ ದ.21ರಂದು ಆದೇಶ ಹೊರಡಿಸಿತ್ತು.ಇದರ ವಿರುದ್ಧ ಅಜಿತ್ ಕುಮಾರ್ ರೈಯವರು ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು.ರಿಟ್ ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಿದ್ದ ನ್ಯಾಯಮೂರ್ತಿಗಳಾದ ಜಿ.ನರೇಂದ್ರ ಹಾಗೂ ವೆಂಕಟೇಶ್ ನಾಯ್ಕ್ ಟಿ.ಅವರಿದ್ದ ಹೈಕೋರ್ಟ್ ವಿಭಾಗೀಯ ಪೀಠ ನೀಡಿರುವ ನಿರ್ದೇಶನದ ಹಿನ್ನೆಲೆಯಲ್ಲಿ ಅಜಿತ್ ಕುಮಾರ್ ರೈಯವರನ್ನು ಬೆಂಗಳೂರು ಕೆ.ಆರ್.ಪುರಂ ತಾಲೂಕು ತಹಸಿಲ್ದಾರ್ ಗ್ರೇಡ್-1 ಹುದ್ದೆಯಲ್ಲಿ ಮುಂದುವರಿಸಿ ಕರ್ನಾಟಕ ಸರಕಾರದ ಕಂದಾಯ ಇಲಾಖೆ(ಸೇವೆಗಳು-3)ಉಪಕಾರ್ಯದರ್ಶಿ ಜಯಲಕ್ಷ್ಮೀ ಅವರು ಫೆ.16ರಂದು ಆದೇಶ ಹೊರಡಿಸಿದ್ದು ಅಜಿತ್ ಕುಮಾರ್ ರೈಯವರು ಬೆಂಗಳೂರು ಕೆ.ಆರ್.ಪುರಂ ತಾಲೂಕು ತಹಸಿಲ್ದಾರ್-ಗ್ರೇಡ್ 1 ಆಗಿ ಫೆ.16ರಂದೇ ಅಧಿಕಾರ ವಹಿಸಿಕೊಂಡಿದ್ದಾರೆ.ಕೆ.ಆರ್.ಪುರಂ ತಾಲೂಕು ತಹಸಿಲ್ದಾರ್-ಗ್ರೇಡ್ 1 ಆಗಿ ಕರ್ತವ್ಯದಲ್ಲಿದ್ದ ಅನಿಲ್ ಎಂ.ಅವರನ್ನು ನಿಯುಕ್ತಿಗೊಳಿಸಿ ಹೊರಡಿಸಿದ್ದ ಆದೇಶವನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಹಿಂಪಡೆದಿರುವ ಸರಕಾರ ಅವರನ್ನು ಬಿಬಿಎಂಪಿಯಲ್ಲಿ ಖಾಲಿಯಿರುವ ತಹಸಿಲ್ದಾರ್ ಹುದ್ದೆಗೆ ವರ್ಗಾಯಿಸಿ ಆದೇಶಿಸಿದೆ.ತಹಸಿಲ್ದಾರ್ ಎಸ್.ಅಜಿತ್ ಕುಮಾರ್ ರೈಯವರು ಕೆಯ್ಯೂರು ಗ್ರಾಮದ ಸೊರಕೆ ನಿವಾಸಿ.

LEAVE A REPLY

Please enter your comment!
Please enter your name here