ಉಪ್ಪಿನಂಗಡಿ: ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಾಲಯದ ಕಾಲಾವಧಿ ಜಾತ್ರೆ, ಮಖೆ ಜಾತ್ರೆ ಉತ್ಸವಾದಿಗಳ ಪ್ರಕಾರ ಮಹಾಶಿವರಾತ್ರಿ 1ನೇ ಮಖೆಕೂಟ ಫೆ. 18ರಂದು ಆರಂಭಗೊಂಡು 19ರಂದು ಮಧ್ಯಾಹ್ನ ಸಂಪನ್ನಗೊಂಡಿತು. ಈ ಸಂದರ್ಭ ವೇದಮೂರ್ತಿ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು.
ಫೆ. 18ರಂದು ರಾತ್ರಿ ಉದ್ಭವ ಲಿಂಗದ ಬಳಿ ಅರ್ಘ್ಯ, ಶಿವಪೂಜೆ, ಸೇವೆಗಳು. “ರುದ್ರ ಪಾರಾಯಣ” ನಡೆಯಿತು. ಈ ಮಧ್ಯೆ ದೇವಸ್ಥಾನದಲ್ಲಿ ಬಲಿ ಹೊರಟು ಉತ್ಸವ, ಮಹಾಪೂಜೆ ನಡೆಯಿತು.
ಫೆ. 19ರಂದು ಪ್ರಾತಃಕಾಲ ತೀರ್ಥ ಸ್ನಾನ. ಬೆಳಗ್ಗೆ ಬಲಿ ಹೊರಟು ರಥೋತ್ಸವ, ಉತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ, ಮಹಾಪೂಜೆ, ಅನ್ನಸಂತರ್ಪಣೆ ನಡೆಯಿತು. ಈ ಬಾರಿಯ ವಿಶೇಷವಾಗಿ ಎಸ್ಪಿವೈಎಸ್ಎಸ್ ಕರ್ನಾಟಕ ಇದರ ಯೋಗ ಸಮಿತಿಯ ವತಿಯಿಂದ ಶಿವಾಷ್ಟೋತ್ತರಶತನಾಮಾನಿ ಪಠಣ, ಪುಷ್ಪಾರ್ಚನೆ, ಶಿವರಾತ್ರಿ ಜಾಗರಣೆ, ಭಜನೆ, ಶಿವ ಪಂಚಾಕ್ಷರಿ ಜಪ, ಬಿಲ್ವಾರ್ಚನೆ, ಸಾಮೂಹಿಕ ಯೋಗ- ಶಿವ ನಮಸ್ಕಾರ' ಕಾರ್ಯಕ್ರಮಗಳೂ ನಡೆದವು. ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಶನಿವಾರ ರಾತ್ರಿ ಯಕ್ಷಶ್ರೀ ಹವ್ಯಾಸಿ ಬಳಗ ಪುತ್ತೂರು ಇವರಿಂದ ಯಕ್ಷಗಾನ ತಾಳಮದ್ದಳೆ, ಆಕರ್ಷಕ ಸುಡುಮದ್ದು ಪ್ರದರ್ಶನ, ಯಕ್ಷನಂದನ ಕಲಾ ಸಂಘ ಗೋಕುಲನಗರ ಇವರಿಂದ
ತ್ರಿಪುರ ಮಥನ’ ಯಕ್ಷಗಾನ ಬಯಲಾಟ ನಡೆಯಿತು. ಶನಿವಾರ ಸೂರ್ಯೋದಯದಿಂದ ಆರಂಭಗೊಂಡ ಅಖಂಡ ಭಜನಾ ಸೇವೆಯು ಭಾನುವಾರ ಸೂರ್ಯೋದಯದವರೆಗೆ ನಡೆಯಿತು.
ಕಾರ್ಯಕ್ರಮದಲ್ಲಿ ಶಾಸಕ ಸಂಜೀವ ಮಠಂದೂರು, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಉಪ್ಪಿನಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಉಷಾ ಚಂದ್ರ ಮುಳಿಯ, ಸದಸ್ಯರಾದ ಸುರೇಶ್ ಅತ್ರಮಜಲು, ಧನಂಜಯ ಕುಮಾರ್, ಲೋಕೇಶ್ ಬೆತ್ತೋಡಿ, ಮಾಜಿ ಅಧ್ಯಕ್ಷ ಚಂದ್ರಶೇಖರ ಮಡಿವಾಳ, ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಕೆ.ವಿ. ಪ್ರಸಾದ್, ಉಪಾಧ್ಯಕ್ಷ ಸುನಿಲ್ ಕುಮಾರ್, ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕರುಣಾಕರ ಸುವರ್ಣ, ಕಾರ್ಯನಿರ್ವಹಣಾಧಿಕಾರಿ ಡಾ. ನಿಂಗಯ್ಯ, ಸಮಿತಿಯ ಸದಸ್ಯರಾದ ಜಯಂತ ಪೊರೋಳಿ, ಹರೀಶ್ ಉಪಾಧ್ಯಾಯ, ಹರಿರಾಮಚಂದ್ರ, ಸುನಿಲ್ ಎ., ಮಹೇಶ್ ಜಿ., ರಾಮ ನಾಯ್ಕ್, ಶ್ರೀಮತಿ ಹರಿಣಿ ಕೆ., ಶ್ರೀಮತಿ ಪ್ರೇಮಲತಾ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯರಾದ ರಾಧಾಕೃಷ್ಣ ನಾಯಕ್, ಕೃಷ್ಣ ರಾವ್ ಅರ್ತಿಲ, ಕಂಗ್ವೆ ವಿಶ್ವನಾಥ ಶೆಟ್ಟಿ, ಉಪ್ಪಿನಂಗಡಿ ಶಾರದೋತ್ಸವ ಸಮಿತಿ ಅಧ್ಯಕ್ಷ ರಾಮಚಂದ್ರ ಮಣಿಯಾಣಿ, ಎಂಜಿನಿಯರ್ ಸುಧಾಕರ್, ರವೀಂದ್ರ ದರ್ಬೆ, ಗೋಪಾಲ ಹೆಗ್ಡೆ ಇದ್ದರು. ದೇವಾಲಯದ ವ್ಯವಸ್ಥಾಪಕ ವೆಂಕಟೇಶ್ ರಾವ್, ಪದ್ಮನಾಭ ಕುಲಾಲ್, ಕೃಷ್ಣ ಪ್ರಸಾದ್ ಬಡಿಲ, ದಿವಾಕರ ಮುಂಚೂಣಿಯಲ್ಲಿ ನಿಂತು ವಿವಿಧ ಕಾರ್ಯ ನಿರ್ವಹಿಸಿದರು.