ಪುತ್ತೂರು: ಪೆರ್ನೆ ಕೊರತಿಕಟ್ಟೆ ಮಾಡತ್ತಾರು ಸಪರಿವಾರ ಶ್ರೀ ವ್ಯಾಘ್ರ ಚಾಮುಂಡಿ ದೈವಸ್ಥಾನದಲ್ಲಿ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಫೆ.23ರಂದು ನೆರವೇರಿತು.
ಫೆ.22ರಂದು ಸಂಜೆ ಸ್ವಸ್ತಿ ಪುಣ್ಯಾಹ ವಾಚನ, ಸ್ಥಳ ಶುದ್ಧಿ, ಪ್ರಾಸಾದ ಶುದ್ಧಿ, ರಕ್ಷೋಘ್ನ ಹೋಮ, ವಾಸ್ತುಹೋಮ, ವಾಸ್ತುಪೂಜಾ ಬಲಿ, ಪ್ರಾಕಾರದಿಕ್ಬಲಿ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನೆರವೇರಿತು.
ಫೆ.23ರಂದು ಬೆಳಿಗ್ಗೆ ಮಹಾಗಣಪತಿ ಹೋಮ, ಬ್ರಹ್ಮಕಲಶ ಪೂಜೆ, ಶ್ರೀ ವ್ಯಾಘ್ರ ಚಾಮುಂಡಿ, ಉಳ್ಳಾಕ್ಲು, ಕೊರತಿ ಮತ್ತು ಗುಳಿಗ ದೈವದ ಮಂಚ ಪ್ರತಿಷ್ಠೆ ಬ್ರಹ್ಮಕಲಶಾಭಿಷೇಕ, ತಂಬಿಲ ಸೇವೆ, ಮಂಗಳಾರತಿ, ನೇಮಸ್ತಿಕ ನಿಯಮಗಳ ನಿರ್ಣಯ, ಪ್ರಸಾದ ವಿತರಣೆ, ಧರ್ಮಸಭೆ, ಅನ್ನಸಂತರ್ಪಣೆ ನೆರವೇರಿತು.
ಸಂಜೆ ಅತ್ತೆಜಾಲು ಭಂಡಾರದ ಮನೆಯಿಂದ ದೈವಗಳ ಭಂಡಾರ ತೆಗೆದು, ಆಗಮನ, ಮಾಡತ್ತಾರು ಕ್ಷೇತ್ರದಲ್ಲಿ ಭಂಡಾರ ಏರಿ, ತಂಬಿಲ ಸೇವೆ, ಎಣ್ಣೆ ಬೂಳ್ಯ, ಅನ್ನಸಂತರ್ಪಣೆ, ರಾತ್ರಿ ಸಪರಿವಾರ ದೈವಗಳ ನರ್ತನ ಸೇವೆ, ನೇಮೋತ್ಸವ ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಂಜೆ ರಾಮಕೃಷ್ಣ ಕಾಟುಕುಕ್ಕೆ ಬಳಗದವರಿಂದ ಭಕ್ತಿ ರಸಮಂಜರಿ ನಡೆಯಿತು.