ಪುತ್ತೂರು: ಬಿರುಮಲೆ ಗುಡ್ಡಕ್ಕೆ ಆಕಸ್ಮಿಕವಾಗಿ ಬೆಂಕಿ ಬಿದ್ದು ಗಿಡ ಪೊದೆಗಳು ಬೆಂಕಿಗಾಹುತಿಯಾಗಿರುವ ಘಟನೆ ಮಾ.1 ರಂದು ಸಂಜೆ ನಡೆದಿದೆ.
ಬಿರುಮಲೆ ಗುಡ್ಡದ ತಪ್ಪಲಿನ ಅತ್ಯಂತ ಇಳಿಜಾರಾಗಿರುವ ಗುಡ್ಡದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಘಟನೆಯಿಂದ ಗುಡ್ಡದ ಬಹುಭಾಗದ ಪೊದೆ, ಗಿಡಗಳು ಬೆಂಕಿಯಿಂದ ಸುಟ್ಟು ಹೋಗಿದೆ.
ಬೆಂಕಿ ನಂದಿಸಲು ಹರಸಾಹಸ:
ಗುಡ್ಡಕ್ಕೆ ಬೆಂಕಿ ಬಿದ್ದಿರುವ ಬಗ್ಗೆ ಮಾಹಿತಿ ಅರಿತ ಕೂಡಲೇ ಅಗ್ನಿಶಾಮಕ ದಳದವರು ಸ್ಥಳಕ್ಕೆ ಆಗಮಿಸಿದ್ದರು. ಆದರೆ ಗುಡ್ಡದ ತಪ್ಪಲಿನ ಕೆಲ ಭಾಗದಲ್ಲಿರುವ ಕಾಂಕ್ರೀಟ್ ರಸ್ತೆ ಪ್ರವೇಶದ ಬಳಿ ಮೆಟ್ಟಿಲು ತರ ರಸ್ತೆಯಲ್ಲಿರುವುದರಿಂದ ಅಗ್ನಿಶಾಮಕದ ವಾಹನ ಮೇಲೆ ತೆರಲಾರೆದೆ ರ ಬೆಂಕಿ ನಂದಿಸಲು ಸಾಹಸಪಡಬೇಕಾಯಿತು. ಇದರಿಂದಾಗಿ ರಸ್ತೆ ಇದ್ದರೂ ವಾಹನ ತೆರಳಲಾಗದ ಸ್ಥಿತಿ ಉಂಟಾಗಿತ್ತು.
ಇದೇ ಮೊದಲಲ್ಲ:
ಬಿರುಮಲೆ ಗುಡ್ಡಕ್ಕೆ ಬೆಂಕಿ ಬಿದ್ದಿರುವುದು ಇದೇ ಮೊದಲಲ್ಲ. ಕಳೆದ ಕೆಲ ದಿನಗಳ ಹಿಂದೆ ಎರಡು ಭಾರಿ ಬೆಂಕಿ ಬಿದ್ದಿದ್ದು ಅಗ್ನಿಶಾಮಕ ದಳದವರ ಬೆಂಕಿ ನಂದಿಸಿದ್ದರು. ಕೇವಲ ಒಂದು ವಾರದ ಒಳಗಾಗಿ ಮೂರು ಬಾರಿ ಗುಡ್ಡದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಆಕಸ್ಮಿಕವೋ ಅಥವಾ ಕಿಡಿಗೇಡಿಗಳ ಕೃತ್ಯವೋ ಎಂಬ ಅನುಮಾನ ಮೂಡುತ್ತಿದ್ದು ಈ ಬಗ್ಗೆ ಸಂಬಂಧಿಸಿದ ಇಲಾಖೆಯವರು ಸೂಕ್ತ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.