ನೆಲ್ಯಾಡಿ: ಬಜತ್ತೂರು ಗ್ರಾಮದ ಮಣಿಕ್ಕಳ ಬೈಲಿನ ಕಂರ್ಬಿತ್ತಿಲು ಬದಿಮಾಡ ಎಂಬಲ್ಲಿನ ಮೂವರು ದೈವಗಳ ಕ್ಷೇತ್ರದಲ್ಲಿ ನೂತನ ಮಾಡ ನಿರ್ಮಾಣದೊಂದಿಗೆ ಫೆ.28 ಮತ್ತು ಮಾ.1 ರಂದು ಮೂವರು ದೈವಗಳ ಹಾಗೂ ಇತರ 22 ದೈವಗಳಿಗೆ ವಾರ್ಷಿಕ ನೇಮೋತ್ಸವ ವಿಜೃಂಭಣೆಯಿಂದ ನಡೆಯಿತು.
ಕುದುರು ದೈವಗಳ ಸ್ಥಾನದಿಂದ ಭಂಡಾರ ತೆಗೆದು ನಂತರ ಕಂರ್ಬಿತ್ತಿಲು ಬದಿಮಾಡದಲ್ಲಿ ನೇಮನೆರಿ ಜರಗಿತು. ಫೆ.24ರಂದು ಹಳೆಯ ಮಾಡವನ್ನು ತೆಗೆದು ನೂತನ ಶಿಲಾಮಯ ಮಾಡದ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಅದ್ದೂರಿಯಾಗಿ ನಡೆದಿತ್ತು. ಕಾರಣಿಕ ಕ್ಷೇತ್ರವಾಗಿರುವ ಮೂವರು ದೈವಗಳಾದ ಪಾಂಡ್ಯತ್ತಾಯ, ಪಂಬೆತ್ತಾಯ ಹಾಗೂ ಸ್ಥಾನಬ್ರಹ್ಮೆರ್ ಸೇರಿದಂತೆ ಸುಮಾರು 22 ದೈವಗಳಿಗೆ ಮೂವರು ದೈವಗಳ ಕ್ಷೇತ್ರದ ನೇಮೋತ್ಸವ ನಡೆಯಿತು. ಈ ಸಂದರ್ಭದಲ್ಲಿ ಸುಡುಮದ್ದು ಪ್ರದರ್ಶನವೂ ನಡೆಯಿತು.
ಮಾ.1ರಂದು ರಾತ್ರಿ ಗುತ್ತು ಹೊನ್ನಪ್ಪ ಗೌಡರ ಮನೆಯಲ್ಲಿ ಗುತ್ತು ಜೂಮಾದಿ, ಕಲ್ಲುರ್ಟಿ, ಪಂಜುರ್ಲಿ ದೈವಗಳಿಗೂ ನೇಮೋತ್ಸವ ನಡೆಯಿತು. ಪ್ರಸಿದ್ಧ ದೈವ ನರ್ತಕ ಸುಬ್ಬಣ್ಣ ನಲಿಕೆ ನೇತೃತ್ವದಲ್ಲಿ ನೇಮೋತ್ಸವ ನಡೆಯಿತು. ಹಿಂದೆ ಕಾಂಚನ ಕುಟುಂಬಸ್ಥರಿಂದ ನಡೆಯುತ್ತಿದ್ದ ಈ ನೇಮೋತ್ಸವ ಈಗ ಕಾಂಚನ ತಲೆಮನೆ, ಗುತ್ತು, ಬಾರಿಕೆ ಮಾರ್ಗದರ್ಶನದಲ್ಲಿ ಮಣಿಕ್ಕಳ ಸಮಸ್ತ ದೈವಗಳ ಸೇವಾ ಸಮಿತಿ ಮೂಲಕ ನಡೆಯುತ್ತಿದೆ.
ನೇಮೋತ್ಸವದ ಸಂದರ್ಭದಲ್ಲಿ ಕಾಂಚನ ತಲೆಮನೆಯ ರೋಹಿಣಿ ಸುಬ್ಬರತ್ನಂ, ಮೂವರು ದೈವಗಳ ಕ್ಷೇತ್ರದ ಅರ್ಚಕ ನಾರಾಯಣ ಬಡೆಕಿಲ್ಲಾಯ, ಕುದುರು ಗುತ್ತುಮನೆಯ ಹೊನ್ನಪ್ಪ ಗೌಡ, ಬಾರಿಕೆ ಮಣಿಕ್ಕಳ ಮನೆಯ ಮುರಳೀಧರ ರಾವ್, ರಘುವೀರ ರಾವ್, ಸಮಸ್ತ ದೈವಗಳ ಸೇವಾಸಮಿತಿಯ ಜಗದೀಶ್ ರಾವ್, ಓಮಂದೂರು ದೇರಣ್ಣ ಗೌಡ, ಮೇಲಿನಮನೆ ರಾಮಣ್ಣ ಗೌಡ, ಲಿಂಗಪ್ಪ ಆರಕರೆ, ನಯನ್ ಗೌಡ ಕೆದು, ಧರ್ಣಪ್ಪ ಪೂಜಾರಿ, ಶೀನಪ್ಪ ಗೌಡ ಓಲೆಬಳ್ಳಿ, ಮೋನಪ್ಪ ಗೌಡ ದಡ್ಡು, ರಾಮಣ್ಣ ಗೌಡ ಆರಕರೆ, ಯಶೋಧರ ಗೌಡ ಬೈರುಮಾರು, ಕೇಶವ ಮಣಿಕ್ಕಳ, ಸದಾನಂದ ಗೌಡ ಕುದುರು, ರಾಘವ ಗೌಡ ಗುತ್ತಿಮಾರು, ಸುಂದರ ಗೌಡ ಮರೋಜಿಕಾನ, ಸುಧಾಕರ ನಾತೊಟ್ಟು, ಸುಂದರ ಗೌಡ ಗುತ್ತಿಮಾರು, ಕೇಶವ ಗೌಡ ಆರಕರೆ, ಯೋಗೀಶ್ ಗೌಡ ಹೊಸಮನೆ, ಚೇತನ್ ಕುದುರು, ಲೋಕೇಶ್ ಗೌಡ ಓಲೆಬಳ್ಳಿ, ಉಮೇಶ್ ಮಾಯಿತಾಲು, ಉಮೇಶ್ ಓಮಂದೂರು, ದಿನೇಶ್ ಓಮಂದೂರು, ರುಕ್ಮಯ್ಯ ಗೌಡ ಕುದುರು, ಧನಂಜಯ ಗೌಡ ಗುತ್ತಿಮಾರು, ಪವನ್ ಮೇಲಿನಮನೆ, ಅಕ್ಷಯ್ ಕುದುರು, ರಿತ್ವಿಕ್ ನಾಗೋಜಿ, ರಂಜಿತ್ ನಾಗೋಜಿ, ವೀರಪ್ಪ ಗೌಡ ಓಮಂದೂರು, ಬಾಬು ಗೌಡ ಓಮಂದೂರು, ಪುನೀತ್ ಮತ್ತು ದುರ್ಗೇಶ್ ಕುದುರು ಮತ್ತಿತರ ಪ್ರಮುಖರು ಭಾಗವಹಿಸಿದ್ದರು.