ಪುತ್ತೂರು: ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕದ ನೇತೃತ್ವದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು, ಕಬಕ ಗ್ರಾಮ ಪಂಚಾಯತ್ ಸಹಕಾರದೊಂದಿಗೆ, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಪುತ್ತೂರು ಘಟಕದ ಸಂಯೋಜನೆಯಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಿತ್ರಂಪಾಡಿ ಜಯರಾಮ ರೈ ಅಬುದಾಬಿರವರ ಮಹಾ ಪೋಷಕತ್ವದಲ್ಲಿ ನಡೆಯುವ “ಸಾಹಿತ್ಯದ ನಡಿಗೆ ಗ್ರಾಮದ ಕಡೆಗೆ” ಅಭಿಯಾನದಂಗವಾಗಿ ಗ್ರಾಮ ಸಾಹಿತ್ಯ ಸಂಭ್ರಮ-2023-ಸರಣಿ ಕಾರ್ಯಕ್ರಮ 5ರ ಪ್ರಯುಕ್ತ ಪುತ್ತೂರು ತಾಲೂಕಿನ ವಿದ್ಯಾರ್ಥಿಗಳಿಗೆ ಮೂರು ವಿಭಾಗಗಳಲ್ಲಿ ಕವನ ಸ್ಪರ್ಧೆ ನಡೆಯಲಿದೆ.
1ರಿಂದ 4ನೇ ತರಗತಿ ವಿದ್ಯಾರ್ಥಿಗಳಿಗೆ, ವಿಷಯ :ನನ್ನ ಅಮ್ಮ, ಕವನಗಳು ಕನಿಷ್ಠ 6 ಸಾಲು ಗರಿಷ್ಠ 12 ಸಾಲುಗಳ ಮಿತಿಯಲ್ಲಿ ಇರಲಿ. 5ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ, ವಿಷಯ: ಬೇಸಿಗೆ ರಜೆ (ಸಾಲುಗಳ ಮಿತಿ 12ರಿಂದ 22)
9ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ, ವಿಷಯ ಯುಗಾದಿ(ಸಾಲುಗಳ ಮಿತಿ 12ರಿಂದ 22) ಕವನದ ಮೇಲ್ಗಡೆ ಗ್ರಾಮ ಸಾಹಿತ್ಯೋತ್ಸವದ ಸ್ಪರ್ಧೆಗೆ ಎಂದು ಬರೆದಿರಲೇಬೇಕು. ಶೀರ್ಷಿಕೆ ಕಡ್ಡಾಯ. ಕವನದ ಕೆಳಗೆ ಸರಿಯಾದ ಹೆಸರು, ವಿಳಾಸ, ಸಂಪರ್ಕಸಂಖ್ಯೆ ನಮೂದಿಸುವುದು ಕಡ್ಡಾಯ. ಕೃತಿಚೌರ್ಯಕ್ಕೆ ಅವಕಾಶ ಇಲ್ಲ. ಪುತ್ತೂರು ತಾಲೂಕಿನ ವಿದ್ಯಾರ್ಥಿಗಳಿಗೆ ಮಾತ್ರ ಕವನ ಕಳುಹಿಸಲು ಕೊನೆಯ ದಿನಾಂಕ 15-03-2023. ಕಳುಹಿಸಬೇಕಾದ ಸಂಪರ್ಕ ಸಂಖ್ಯೆ9844401295, 8277591731 ಕಾರ್ಯಕ್ರಮದ ಸಂಯೋಜಕಿ ಶಾಂತ ಪುತ್ತೂರುರವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.