ಪುತ್ತೂರು: ವಿನೂತನವಾದ ಎಲ್ಲಾ ಬ್ರ್ಯಾಂಡೆಡ್ ಸಹಿತ ಎಲ್ಲಾ ಮಾದರಿಯ ಪಾದರಕ್ಷೆಗಳ ಮಳಿಗೆ ’ವಿ ವಾಕ್’ ಮಾ.4ರಂದು ಮೊಳಹಳ್ಳಿ ಶಿವರಾಯ ರಸ್ತೆಯ ಭೂ ಅಭಿವೃದ್ಧಿ ಬ್ಯಾಂಕ್ ಕಟ್ಟಡದ ರೈತ ಸೌಧದಲ್ಲಿ ಉದ್ಘಾಟನೆಗೊಂಡಿತು.
ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ನೂತನ ಸಂಸ್ಥೆಯನ್ನು ಉದ್ಘಾಟಿಸಿ ಮಾತನಾಡಿ ಜನರಿಗೆ ಅತೀ ಅಗತ್ಯವಿರುವ ಅವರ ಆಯ್ಕೆಗೆ ತಕ್ಕಂತಹ ಪಾದರಕ್ಷೆ ಮಳಿಗೆಯು ಅಗತ್ಯತೆ ಪೂರೈಸಿದ ಸಂಸ್ಥೆ ಮುಂದೆ ಎಲ್ಲರಿಗೂ ಬೇಕಾಗುವ ಸಂಸ್ಥೆಯಾಗಿ ಮೂಡಿ ಬರಲಿ ಎಂದು ಹಾರೈಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶಾಸಕ ಸಂಜೀವ ಮಠಂದೂರು, ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್, ನಗರಸಭೆ ಉಪಾಧ್ಯಕ್ಷೆ ವಿದ್ಯಾ ಆರ್ ಗೌರಿ ಶುಭ ಹಾರೈಸಿದರು. ಶಿವಶಂಕರ್ ಬೋನಂತಾಯ, ವಿಶ್ವಪ್ರಸಾದ್ ಸೇಡಿಯಾಪು, ಕೃಷ್ಣನಾರಾಯಣ ಮುಳಿಯ, ಸಂಸ್ಥೆಯ ಮಾರ್ಗದರ್ಶಕ ಸಂಸ್ಥೆಯಾದ ಸುಳ್ಯದ ಪಾದಂನ ಪಾಲುದಾರ ರಾಜೇಶ್, ಕೇಶವ ನಾಯಕ್ ಸಹಿತ ಇತರ ಪಾಲುದಾರರು ಮತ್ತು ಪುತ್ತೂರಿನ ಹಲವಾರು ಮಂದಿ ಗಣ್ಯರು ಉಪಸ್ಥಿತರಿದ್ದರು.
ಶರವಾತಿ ರವಿನಾರಾಯಣ ಪ್ರಾರ್ಥಿಸಿದರು. ಕೃಷ್ಣಮೋಹನ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಉಮೇಶ್, ವಾಗೇಶ್, ಇಂದುಶೇಖರ್, ವಸಂತ್, ಶರಾವತಿ ರವಿನಾರಾಯಣ, ಕೃಷ್ಣಮೋಹನ್, ಶಿವರಂಜನ್, ಶಿವಕುಮಾರ್ ಕಲ್ಲಿಮಾರ್, ವಿರೂಪಾಕ್ಷ, ಮುರಳಿದರ ಬಂಗಾರಡ್ಕ, ಮೈತ್ರಿ ಸಂಸ್ಥೆಯ ರವಿನಾರಾಯಣ, ಸಂತೋಷ್ ಬೋನಂತಾಯ, ಅಶೋಕ್ ಕುಂಬ್ಳೆ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.