ಪುತ್ತೂರು: ಸರಕಾರಿ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಿ ಪುತ್ತೂರಿನಲ್ಲಿ ಸರಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸಲು ಪುತ್ತೂರು ಮೆಡಿಕಲ್ ಕಾಲೇಜು ಹೋರಾಟ ಸಮಿತಿಯ ಎಲ್ಲಾ ಪ್ರಯತ್ನಗಳಿಗೆ ಲಯನ್ಸ್ ಕ್ಲಬ್ಗಳ ಬೆಂಬಲವಿದೆ ಎಂದು ಲಯನ್ಸ್ ಜಿಲ್ಲೆ 317 ಪ್ರಾಂತದ ಅಧ್ಯಕ್ಷೆ ಲಯನ್ ಸಂಧ್ಯಾ ಸಚಿತ್ ರೈ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಸರಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಮೆಡಿಕಲ್ ಕಾಲೇಜು ಹೋರಾಟ ಸಮಿತಿ ಕೈಗೊಂಡಿರುವ ಮಾ.30ರ ಕಾಲ್ನಡಿಗೆ ಜಾಥಾಕ್ಕೂ ಲಯನ್ ಜಿಲ್ಲೆಯ 7 ಮತ್ತು 8ರ ಪ್ರಾಂತ್ಯಗಳ ಒಟ್ಟು 12 ಲಯನ್ಸ್ ಕ್ಲಬ್ಗಳು ಬೆಂಬಲ ನೀಡಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಲಯನ್ಸ್ ಕ್ಲಬ್ನ ಮಾಜಿ ಅಧ್ಯಕ್ಷ ಸಚಿತ್ ರೈ, ಸರಕಾರಿ ಮೆಡಿಕಲ್ ಕಾಲೇಜು ಹೋರಾಟ ಸಮಿತಿ ಅಧ್ಯಕ್ಷ ಎಂ.ಬಿ ವಿಶ್ವನಾಥ ರೈ, ಪ್ರಧಾನ ಕಾರ್ಯದರ್ಶಿ ಜೇವಿಯರ್ ಡಿಸೋಜ ಅವರು ಉಪಸ್ಥಿತರಿದ್ದರು.