ಉಪ್ಪಿನಂಗಡಿ: ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಸ್ಥಾನದಲ್ಲಿ ಹುಣ್ಣಿಮೆ 2ನೇ ಮಖೆಕೂಟ ಮಾ.6ರಂದು ನಡೆಯಿತು.
ರಾತ್ರಿ ಬಲಿ ಹೊರಟು ರಥೋತ್ಸವ, ಬಲಿ, ಮಹಾಪೂಜೆ ನಡೆಯಿತು. ಮಾ.೭ರಂದು ಪ್ರಾತಃಕಾಲ ತೀರ್ಥಸ್ನಾನ, ಬೆಳಗ್ಗೆ ಬಲಿ ಹೊರಟು ಉತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ, ಮಹಾಕಾಳಿ ಅಮ್ಮನವರ ನೇಮಕ್ಕೆ ಪಡಿಯಕ್ಕಿ ಕೊಡುವುದು, ಮಹಾಪೂಜೆಯಾಗಿ ಅನ್ನಸಂತರ್ಪಣೆ ನಡೆಯಿತು. ರಾತ್ರಿ ಉತ್ಸವ ನಡೆಯಿತು.
ಕಾರ್ಯಕ್ರಮದಲ್ಲಿ ಶಾಸಕರಾದ ಸಂಜೀವ ಮಠಂದೂರು, ಹರೀಶ್ ಪೂಂಜಾ, ಹಿಂದೂ ಪರ ಸಂಘಟನೆಗಳ ಮುಖಂಡ ಅರುಣ್ ಕುಮಾರ್ ಪುತ್ತಿಲ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಮುರಳಿಕೃಷ್ಣ ಹಸಂತಡ್ಕ, ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕರುಣಾಕರ ಸುವರ್ಣ, ಸದಸ್ಯರಾದ ಹರೀಶ್ ಉಪಾಧ್ಯಾಯ, ಹರಿಣಿ ಕೆ., ಹರಿರಾಮಚಂದ್ರ, ಜಯಂತ ಪೊರೋಳಿ, ಸುನೀಲ್ ಎ., ಪ್ರೇಮಲತಾ, ರಾಮ ನಾಯ್ಕ, ಮಹೇಶ್ ಜಿ., ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಡಾ. ನಿಂಗಯ್ಯ, ವ್ಯವಸ್ಥಾಪಕ ವೆಂಕಟೇಶ್ ರಾವ್, ಪ್ರಮುಖರಾದ ಉಷಾ ಚಂದ್ರ ಮುಳಿಯ, ರಾಮಚಂದ್ರ ಮಣಿಯಾಣಿ, ವಿದ್ಯಾಧರ ಜೈನ್, ಸುರೇಶ್ ಅತ್ರೆಮಜಲು, ಪ್ರಶಾಂತ್ ನೆಕ್ಕಿಲಾಡಿ, ವಿನಾಯಕ ಪೈ, ಚಂದಪ್ಪ ಮೂಲ್ಯ, ಹರಿಪ್ರಸಾದ್ ಶೆಟ್ಟಿ ಬೊಳ್ಳಾವು, ಪ್ರಸನ್ನ ಕುಮಾರ್, ನವೀನ್ ಕಲ್ಯಾಟೆ, ಸಂತೋಷ್ ಕುಮಾರ್ ಪಂರ್ದಾಜೆ, ಧನಂಜಯ ನಟ್ಟಿಬೈಲು, ವಿನೀತ್ ಶಗ್ರಿತ್ತಾಯ, ಚಿದಾನಂದ ಪಂಚೇರು, ಮುಕುಂದ ಗೌಡ ಬಜತ್ತೂರು, ಸಂದೀಪ್ ಕುಪ್ಪೆಟ್ಟಿ, ಗುಣಕರ ಅಗ್ನಾಡಿ, ಹರೀಶ್ ನಾಯಕ್ ನಟ್ಟಿಬೈಲು, ಸುರೇಶ್ ಗೌಂಡತ್ತಿಗೆ, ಕೈಲಾರು ರಾಜಗೋಪಾಲ ಭಟ್, ವಸಂತ ಗುಂಡಿಜೆ, ಸುಂದರ ಗೌಡ, ದೇವಾಲಯದ ಸಿಬ್ಬಂದಿಗಳಾದ ಕೃಷ್ಣಪ್ರಸಾದ್, ದಿವಾಕರ, ಪದ್ಮನಾಭ, ಸುಧಾಕರ ಶೆಟ್ಟಿ ಗಾಂಧಿಪಾರ್ಕ್ ಮತ್ತಿತರರು ಉಪಸ್ಥಿತರಿದ್ದರು.
ಜನಮನ ರಂಜಿಸಿದ ಉಬಾರ್ ಉತ್ಸವ
ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ನೇತ್ರಾವತಿ ನದಿ ಕಿನಾರೆಯಲ್ಲಿ ಟೀಂ ದಕ್ಷಿಣ ಕಾಶಿಯ ವತಿಯಿಂದ ಉಬಾರ್ ಉತ್ಸವ ನಡೆಯಿತು. ಖ್ಯಾತ ಸಂಗೀತ ನಿರ್ದೇಶಕ ಹಾಗೂ ಗಾಯಕ ಗುರುಕಿರಣ್, ಬಿಗ್ಬಾಸ್ ವಿಜೇತ ರಾಕ್ ಸ್ಟಾರ್ ರೂಪೇಶ್ ಶೆಟ್ಟಿ ಸೇರಿದಂತೆ ಖ್ಯಾತ ಗಾಯಕ, ಗಾಯಕಿಯರು, ಕಾಮಿಡಿ ಕಿಲಾಡಿಯ ಕಲಾವಿದರು ಭಾಗವಹಿಸಿ, ಜನರ ಮನರಂಜಿಸಿದರು. ಬಳಿಕ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ `ಅತಿಕಾಯ- ಇಂದ್ರಜಿತು’ ಯಕ್ಷಗಾನ ಬಯಲಾಟ ನಡೆಯಿತು.