ಪುತ್ತೂರು: ಬನ್ನೂರು ನಿವಾಸಿ ಅಲುಂಬುಡ ತರವಾಡು ಮನೆತನದ ಊರ ಗೌಡ್ರು ಶತಾಯುಷಿ ಗುಡ್ಡಪ್ಪ ಗೌಡ ಅವರ ಶ್ರದ್ದಾಂಜಲಿ ಕಾರ್ಯಕ್ರಮ ಮಾ.14ರಂದು ಬನ್ನೂರು ಮನೆಯಲ್ಲಿ ನಡೆಯಿತು.
ಉಪನ್ಯಾಸಕ ಗುಡ್ಡಪ್ಪ ಬಲ್ಯ ಅವರು ನುಡಿನಮನ ಸಲ್ಲಿಸಿದರು. ತಲೆಬಿಸಿಯಿಲ್ಲ, ಚಿಂತೆಯಿಲ್ಲದ, ದೇವರ ಸಮಾನವಾಗಿ ಸೇವೆ ಮಾಡಿದವರಿಗೆ ಕಾಯಿಲೆ ಬರುವುದಿಲ್ಲ ಎಂಬುದಕ್ಕೆ ಗುಡ್ಡಪ್ಪ ಗೌಡ್ರು ಉದಾಹರಣೆ. ಅವರು ದೈವದ ಪರಿಚಾರಕರಾಗಿ, ಜನಸಂಘದ ಕಾಲದಲ್ಲಿ ಜನಸೇವೆ ಮಾಡುವ ಮೂಲಕ ಹೆಚಿನ ಸಮಯವನ್ನು ತಮ್ಮ ಸಂತೋಷದ ಬದುಕನ್ನು ಕಂಡು ಕೊಂಡಿದ್ದಾರೆ ಎಂದರು. ಊರ ಗೌಡ್ರು ಚಂದ್ರಾಕ್ಷ ಬನ್ನೂರು ಪಟ್ಟೆಯವರು ನುಡಿನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂಬಂಧಿಕ ಕೊರಗಪ್ಪ ಗೌಡ ಪಟ್ಟೆ, ಮೃತ ಗುಡ್ಡಪ್ಪ ಗೌಡರ ಪುತ್ರರಾದ ಊರ ಗೌಡ್ರು ನಾರಾಯಣ ಗೌಡ, ವಾಸಪ್ಪ ಗೌಡ, ಪುತ್ರಿಯರು ಉಪಸ್ಥಿತರಿದ್ದರು. ಸಂಬಂಧಿಕ ಎ.ವಿ.ನಾರಾಯಣ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ನುಡಿನಮನದ ಬಳಿಕ ಮೃತರ ಬಂಧುಗಳು ಮತ್ತು ಹಿತೈಷಿಗಳು ಮೃತ ಗುಡ್ಡಪ್ಪ ಗೌಡ ಅವರ ಭಾವ ಚಿತ್ರದ ಎದುರು ಪುಷ್ಪಾರ್ಚಣೆ ಮಾಡಿದರು.