ಬಡಗನ್ನೂರುಃ ಶ್ರೀಮೂಕಾಂಬಿ ಗುಳಿಗ ದೈವದ ದೈವಸ್ಥಾನ ನೂಚಿಲೋಡು ಪೆರೀಗೇರಿ ಬಡಗನ್ನೂರು ಇದರ ಪುನರ್ ಪ್ರತಿಷ್ಥಾ ಮಹೋತ್ಸವ ಮತ್ತು ದೈವದ ಕೋಲವು ಮಾ.16 ಮತ್ತು 17 ರಂದು ಶ್ರೀಶೃಂಗೇರಿ ಶಾರದಾ ಪೀಠಾಧೀಶ್ವರ ಜಗದ್ಗುರು ಶ್ರೀಭಾರತೀತೀರ್ಥ ಹಾಗೂ ಜಗದ್ಗುರು ಶ್ರೀವಿಧುಶೇಖರ ಭಾರತೀ ಸನ್ನಿಧಾನಂಗಳವರ ಕೃಪಾಶೀರ್ವಾದಗಳೊಂದಿಗೆ ಬ್ರಹ್ಮಶ್ರೀ ವೇದಮೂರ್ತಿ ಕುಂಟಾರು ವಾಸುದೇವ ತಂತ್ರಿಗಳ ಮಾರ್ಗದರ್ಶನದಲ್ಲಿ ಬ್ರಹ್ಮಶ್ರೀ ವೇದಮೂರ್ತಿ ಕುಂಟಾರು ರವೀಶ ತಂತ್ರಿಗಳ ನೇತೃತ್ವದಲ್ಲಿ ಜರಗಲಿರುವುದು.
ಮಾ.16 ರಂದು ಸಂಜೆ ಗಂ.3.45ರಿಂದ ಕೋಡಿಯಡ್ಕ ಅಂಗನವಾಡಿ ಪುಟಾಣಿಗಳಿಂದ ಚಿನ್ನರ ಚಿಲಿಪಿಲಿ, ಸಂಜೆ ಗಂ.5 ರಿಂದ ತಂತ್ರಿಗಳ ಅಗಮನ, 7ರಿಂದ ದೇವತಾ ಪ್ರಾರ್ಥನೆ, ಆಚಾರ್ಯ ವರ್ಣ, ಪುಣ್ಯಾಹವಾಚನ, ಸ್ಥಳಶುದ್ಧಿ, ಪ್ರಾಸಾದಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತುಹೋಮ ಮತ್ತು ಅಘೋರ ಹವನ ನಡೆಯಲಿದೆ. ಮಾ.17 ರಂದು ಬೆಳಗ್ಗೆ ಗಂ.7ಕ್ಕೆ ಗಣಪತಿ ಹೋಮ, ಬಳಿಕ ಪೆರೀಗೇರಿ ಶ್ರೀ ಅಯ್ಯಪ್ಪ ಮಹಿಳಾ ಭಜನಾ ಮಂಡಳಿ ಸದಸ್ಯರಿಂದ ಭಜನಾ ಕಾರ್ಯಕ್ರಮ, 10.54 ರಿಂದ 11.40ರ ಒಳಗಿನ ವೃಷಭ ಲಗ್ನ ಶುಭ ಮುಹೂರ್ತದಲ್ಲಿ ಶ್ರೀಮೂಕಾಂಬಿ ಗುಳಿಗ ದೈವದ ಪುನರ್ ಪ್ರತಿಷ್ಥೆ ನಡೆಯಲಿರುವುದು.
ಮಧ್ಯಾಹ್ನ 12ರಿಂದ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಬ್ರಹ್ಮಶ್ರೀ ವೇದಮೂರ್ತಿ ಕುಂಟಾರು ರವೀಶ ತಂತ್ರಗಳು ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಪುತ್ತೂರು ವಿಧಾನ ಸಭಾ ಕ್ಷೇತ್ರದ ಶಾಸಕ ಸಂಜೀವ ಮಠಂದೂರು ಸಭಾಧ್ಯಕ್ಷತೆ ವಹಿಸಲಿದ್ದಾರೆ. ಶ್ರೀಕ್ಷೇತ್ರ ಪಡುಮಲೆ ಜೀರ್ಣೋದ್ಧಾರ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಶೀನಿವಾಸ ಭಟ್ ಚಂದುಕೂಡ್ಲು ಹಾಗೂ ಸುಧಾಕರ ಶೆಟ್ಟಿ ಮಂಗಳಾದೇವಿ ಇವರುಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಯಜಮಾನರು ಶ್ರೀಮತಿ ವಿಶಾಲಾಕ್ಷಿ ಅಮ್ಮ ನೂಚಿಲೋಡು ಹಾಗೂ ವಾಸುದೇವ ಭಟ್ ಕೊಲ್ಯ ಗೌರವ ಉಪಸ್ಥಿತರಾಗಿ ನವನೀತಪ್ರಿಯ ಕೈಪಂಗಳ ಜ್ಯೋತಿಷ್ಯರು, ರಮೇಶ್ ಕಾರಂತ ಬೆದ್ರಡ್ಕ ವಾಸ್ತುಶಿಲ್ಪಿ ಭಾಗವಹಿಸಲಿದ್ದಾರೆ. ಮಧ್ಯಾಹ್ನ 1.30ಕ್ಕೆ ಪ್ರಸಾದ ಭೋಜನ ನಡೆಯಲಿದೆ. ಸಂಜೆ ಗಂ.6ರಿಂದ ಶ್ರೀಸತ್ಯನಾರಾಯಣ ಪೂಜೆ, ಮಂಗಳಾರತಿ, 7ರಿಂದ ಶೇಷನ್ ನೇತೃತ್ವದಲ್ಲಿ ಅಲಂತಡ್ಕ ವನಶಾಸ್ತಾರ ಭಜನಾ ತಂಡದ ಸದಸ್ಯರಿಂದ ಕುಣಿತ ಭಜನೆ, ರಾತ್ರಿ 8ಕ್ಕೆ ಭಂಡಾರ ತೆಗೆಯುವುದು, ಬಳಿಕ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ಗಂ.11 ಕ್ಕೆ ಶ್ರೀಮೂಕಾಂಬಿ ಗುಳಿಗ ದೈವದ ಕೋಲ, ಪಾತಃ ಕಾಲ 4.30ಕ್ಕೆ ದೈವದ ಅರಸಿನ ಹುಡಿ ಪ್ರಸಾದ ವಿತರಣೆ ನಡೆಯಲಿದೆ. ರಾತ್ರಿ 8.30ರಿಂದ ಯಕ್ಷಸಾರಥಿ ಯಕ್ಷಬಳಗ ಪುತ್ತೂರು ಇವರಿಂದ “ಧಕ್ಷಾಧ್ವರ” ಯಕ್ಷಗಾನ ನಡೆಯಲಿದೆ.