![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಪುತ್ತೂರು: ಹಿರಿಯ ನಾಗರಿಕರಿಗೆ ಮೂಳೆ ಸಾಂದ್ರತೆ ಮತ್ತು ಇತರ ವೈದ್ಯಕೀಯ ತಪಾಸಣೆಯು ಮಾ.31ರಂದು ಪುತ್ತೂರು ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಲಿದೆ.
ರಾಷ್ಟ್ರೀಯ ಹಿರಿಯ ನಾಗರಿಕರ ಸಹಾಯವಾಣಿ, ವಿಕಲಚೇತನರ, ಹಿರಿಯನಾಗರಿಕರ ಕಲ್ಯಾಣ ಇಲಾಖೆ, ದ.ಕ.ಜಿ.ಪಂ ಇದರ ವತಿಯಿಂದ ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘ, ಹಿರಿಯ ನಾಗರಿಕರ ಹಿತರಕ್ಷಣಾ ಸಮಿತಿ ಮತ್ತು ಲಯನ್ಸ್ ಕ್ಲಬ್ನ ಸಹಯೋಗದಲ್ಲಿ ಯೆನೆಪೋಯ ಮೆಡಿಕಲ್ ಹಾಸ್ಪಿಟಲ್ ಆಯುರ್ವೇದ ವಿಭಾಗದ ವತಿಯಿಂದ ಶಿಬಿರ ನಡೆಯಲಿದ್ದು, ಶಿಬಿರದಲ್ಲಿ ನುರಿತ ವೈದ್ಯರಿಂದ ಅರೋಗ್ಯ ತಪಾಸಣೆ, ಮೂಳೆ ಸಾಂದ್ರತೆಯ ತಪಾಸಣೆ ಹಾಗೂ ಇನ್ನಿತರ ತಪಾಸಣೆ ನಡೆಯಲಿದೆ.
ಪುತ್ತೂರು ಲಯನ್ಸ್ ಸಭಾಂಗಣದಲ್ಲಿ ಬೆಳಗ್ಗಿನಿಂದ ಮಧ್ಯಾಹ್ನ ತನಕ ಜರುಗಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.