ಹಳೆನೇರೆಂಕಿ ಹಾ.ಉ.ಮಹಿಳಾ ನವಸಾಕ್ಷರರ ಸಹಕಾರ ಸಂಘ ; ಅಧ್ಯಕ್ಷೆ: ಯಶೋಧ, ಉಪಾಧ್ಯಕ್ಷೆ: ಪುಷ್ಪಾವತಿ

0

ರಾಮಕುಂಜ: ಕಡಬ ತಾಲೂಕಿನ ಹಳೆನೇರೆಂಕಿ ಹಾಲು ಉತ್ಪಾದಕರ ಮಹಿಳಾ ನವಸಾಕ್ಷರರ ಸಹಕಾರ ಸಂಘದ ಅಧ್ಯಕ್ಷರಾಗಿ ಯಶೋಧ ಪರಕ್ಕಾಲು ಹಾಗೂ ಉಪಾಧ್ಯಕ್ಷೆಯಾಗಿ ಪುಷ್ಪಾವತಿ ಕದ್ರ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.

ಸಂಘದ ನೂತನ ಆಡಳಿತ ಮಂಡಳಿಯ ಸಭೆಯಲ್ಲಿ ಅಧ್ಯಕ್ಷೆ, ಉಪಾಧ್ಯಕ್ಷರ ಆಯ್ಕೆ ಮಾಡಲಾಯಿತು. ಸಭೆಯಲ್ಲಿ ನಿರ್ದೇಶಕರಾದ ಹರಿಣಾಕ್ಷಿ, ಭಾಗೀರಥಿ, ಭವ್ಯಲತಾ ಕೆ., ಕುಸುಮಾವತಿ, ಮೀನಾಕ್ಷಿ, ಮೋಹಿನಿ ಎಚ್., ನೀಲಾವತಿ, ವನಿತಾ, ಸೀತಾ, ಭಾನುಮತಿ ಎಸ್.ಕೆ. ಉಪಸ್ಥಿತರಿದ್ದರು.

ಬೆಳ್ತಂಗಡಿ ತಾಲೂಕು ಸಹಕಾರ ಅಭಿವೃದ್ಧಿ ಅಧಿಕಾರಿ ಪ್ರತಿಮಾ ಬಿ.ವಿ.ಚುನಾವಣಾಧಿಕಾರಿಯಾಗಿದ್ದರು. ಸಂಘದ ಕಾರ್ಯನಿರ್ವಹಣಾಧಿಕಾರಿ ಶೀಲಾ ಎಸ್.ಎನ್.,ಹಾಗೂ ಸಿಬ್ಬಂದಿಗಳು ಸಹಕರಿಸಿದರು.

LEAVE A REPLY

Please enter your comment!
Please enter your name here