ಪುತ್ತೂರು: ಎ.10ರಿಂದ ಆರಂಭಗೊಳ್ಳಲಿರುವ ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವದ ಅಂಗವಾಗಿ ಪುತ್ತೂರು ಪೇಟೆಯಲ್ಲಿ ಆಮಂತ್ರಣ ಪತ್ರ ವಿತರಣೆ ಮಾ.28 ರಂದು ಸಂಜೆ ನಡೆಯಿತು.
ಚೆಂಡೆ, ಕೊಂಬು ಕಹಳೆ, ಸರ್ವವಾದ್ಯ, ಕಲ್ಲಡ್ಕದ ಗೊಂಬೆ ಕುಣಿತಗಳೊಂದಿಗೆ ದರ್ಬೆ ಮತ್ತು ಬೊಳುವಾರಿನಿಂದ ಸಂಜೆ ಏಕಕಾಲದಲ್ಲಿ ಆಮಂತ್ರಣ ಪತ್ರ ವಿತರಣೆ ಮೆರವಣಿಗೆ ನಡೆಯಿತು. ದರ್ಬೆಯಲ್ಲಿ ನಗರಸಭೆ ಅಧ್ಯಕ್ಷ ಕೆ ಜೀವಂಧರ್ ಜೈನ್ ಮತ್ತು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಅವರು ತೆಂಗಿನ ಕಾಯಿ ಒಡೆಯುವ ಮೂಲಕ ಆಮಂತ್ರಣ ಪತ್ರ ವಿತರಣೆಗೆ ಚಾಲನೆ ನೀಡಿದರು.
ಬೊಳುವಾರಿನಲ್ಲಿ ದೇವಳದ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ ಎಚ್ ಮತ್ತು ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಶೇಖರ್ ನಾರಾವಿ, ಡಾ.ಸುಧಾ ಎಸ್ ರಾವ್ ಅವರು ಓಂ ಶ್ರೀ ಶಕ್ತಿ ಆಂಜನೇಯ ಮಂತ್ರಾಲಯದ ಎದುರು ತೆಂಗಿನ ಕಾಯಿ ಒಡೆಯುವ ಮೂಲಕ ಚಾಲನೆ ನೀಡಿದರು.
ದೇವಳ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ರವೀಂದ್ರನಾಥ ರೈ ಬಳ್ಳಮಜಲು, ರಾಮಚಂದ್ರ ಕಾಮತ್, ವೀಣಾ ಬಿ ಕೆ, ರಾಮ್ದಾಸ್ ಗೌಡ, ಮಾಜಿ ಸದಸ್ಯ ಕರುಣಾಕರ ರೈ, ನಿವೃತ್ತ ಎಸ್.ಐ ಪಾಂಡುರಂಗ, ದಯಾನಂದ, ಶಿವಪ್ರಸಾದ್ ಕಲ್ಲಿಮಾರ್, ಸೀತಾರಾಮ ರೈ ಕೆದಂಬಾಡಿಗುತ್ತು ಸಹಿತ ಹಲಾವರು ಮಂದಿ ಉಪಸ್ಥಿತರಿದ್ದರು.