ಪುತ್ತೂರು: ಕರ್ನಾಟಕ ರಾಜ್ಯ ವಿಧಾನ ಸಭೆಗೆ ಸಾರ್ವತ್ರಿಕ ಚುನಾವಣೆ ಘೋಷಣೆಯಾಗಿದ್ದು, ಮಾದರಿ ನೀತಿ ಸಂಹಿತೆ ಜಾರಿಗೆ ಬಂದಿರುವ ಹಿನ್ನೆಲೆಯಲ್ಲಿ ಇನ್ನೂ ತೆರವಿಗೆ ಬಾಕಿ ಇರುವ ಬ್ಯಾನರ್ ಬಂಟಿಂಗ್ಸ್, ಫಲಕ, ಗೋಡೆ ಬರಹಗಳನ್ನು ತೆರವು ಮಾಡಿ ವರದಿ ನೀಡುವಂತೆ ಜಿಲ್ಲಾಧಿಕಾರಿಯಿಂದ ನಗರಸಭೆಗೆ ನೋಟೀಸ್ ಬಂದಿದೆ.
ಈ ಹಿನ್ನೆಲೆಯಲ್ಲಿ ನಗರಸಭೆ ಜಾಹಿರಾತು ಫಲಕಗಳನ್ನು ತೆರವು ಕಾರ್ಯಾಚರಣೆ ಮಾಡಿದ್ದು, ಇದರ ಜೊತೆಗೆ 2022-2023ನೇ ಸಾಲಿಗೆ ಜಾಹಿರಾತು ಫಲಕಗಳಿಗೆ ಶುಲ್ಕ ಪಾವತಿಸದೇ ಇರುವ ಎಲ್ಲ ಅನಧಿಕೃತ ಫಲಕಗಳನ್ನು ಸೋಮವಾರದಿಂದ ಕೀಳಿಸಿ ಯಾ ಪೈಂಟ್ ಎರಚಿ ವಿರೂಪಗೊಳಿಸಲಾಗುವುದು ಹಾಗೂ ದಂಡ ಸಹಿತ ಶುಲ್ಕ ವಸೂಲಿ ಮಾಡಿ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ನಗರಸಭೆ ಪ್ರಕಟಣೆ ನೀಡಿದೆ.