ಬಂಗಾರಡ್ಕ ಶ್ರೀರಾಮ ಭಜನಾ ಮಂದಿರದ ವಾರ್ಷಿಕೋತ್ಸವದಲ್ಲಿ ಮೊಳಗಿದ ಭಜನೆಯ ಝೇಂಕಾರ

0

ಪುತ್ತೂರು:ಆರ್ಯಾಪು ಗ್ರಾಮದ ಬಂಗಾರಡ್ಕ ಶ್ರೀರಾಮ ಭಜನಾ ಮಂದಿರದಲ್ಲಿ ಮಾ.30ರಂದು ನಡೆದ 14ನೇ ವರ್ಷದ ಪ್ರತಿಷ್ಠಾ ವಾರ್ಷಿಕೋತ್ಸವದಲ್ಲಿ ಸೂರ್ಯೋದಯದಿಂದ ಸೂರ್ಯಾಸ್ತದ ತನಕ ನಡೆದ ಅರ್ಧ ಏಕಾಹ ಭಜನೆ ಹಾಗೂ ಸಂಜೆ ವಿಶೇಷವಾಗಿ ಹಣತೆಯ ಬೆಳಕಿನಲ್ಲಿ ಹಲವು ಭಜನಾ ತಂಡಗಳಿಂದ ನಡೆದ ಕುಣಿತ ಭಜನೆಯ ಝೇಂಕಾರ ಮಾರ್ಧನಿಸಿದ್ದು ಮಂದಿರದ 14ನೇ ವಾರ್ಷಿಕೋತ್ಸವವು ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾಯಿತು.


ಪ್ರತಿವರ್ಷ ರಾಮನವಮಿಯಂದು ವಿಶೇಷವಾಗಿ ನಡೆಯುವ ಭಜನಾ ಮಂದಿರದ ವಾರ್ಷಿಕೊತ್ಸವದಲ್ಲಿ ಅರ್ಧ ಏಕಾಹ ಭಜನೆ ನಡೆಯುತ್ತಿದೆ. ಈ ವರ್ಷ ವಿಶೇಷವಾಗಿ ಸಂಜೆ ವೇಳೆಗೆ ಕುಣಿತ ಭಜನೆಯನ್ನು ಆಯೋಜಿಸಲಾಗಿತ್ತು. ಮಂದಿರದ ಎದುರಿನ ವಿಶಾಲವಾದ ಮೈದಾನದಲ್ಲಿ ದೀಪದ ಬೆಳಕಿನ ವಿಭಿನ್ನ ಶೈಲಿಯಲ್ಲಿ ಅಲಂಕೃತಗೊಂಡಿರುವ ಮಂಟಪದಲ್ಲಿ ಕುಣಿತ ಭಜನೆಯು ಸಂಯೋಜನೆಗೊಂಡಿತು. ಈ ಕುಣಿತ ಭಜನೆಯಲ್ಲಿ 12 ತಂಡಗಳು ಪ್ರತ್ಯೇಕ ಪ್ರತ್ಯೇಕ ವಿಭಾಗಗಳ ನೂರಾರು ಮಂದಿ ಭಜನಕರಿಂದ ಭಜನೆ ನಡೆಸಿಕೊಟ್ಟಿದ್ದು ಭಜನಾ ಕಮ್ಮಟ ಮಾದರಿಯಲ್ಲಿ ಕುಣಿತ ಭಜನೆ ಸಂಯೋಜನೆಗೊಂಡಿತು. ಪ್ರತಿ ತಂಡಗಳಲ್ಲಿ ಸುಮಾರು 15 ಮಂದಿ ಭಜಕರಿಂದ ಕುಣಿತ ಭಜನೆ ನಡೆಯಿತು. ವಿಭಿನ್ನ ಶೈಲಿಯ ಸಮವಸ್ತ್ರಗಳೊಂದಿಗೆ ಭಾಗವಹಿಸಿದ್ದ ಪುಟಾಣಿ ಮಕ್ಕಳು, ಮಕ್ಕಳು, ಯುವತಿಯರು, ಮಹಿಳೆಯರು ಹಾಗೂ ಪುರುಷರ ಪ್ರತ್ಯೇಕ ತಂಡಗಳು ಭಜನೆಗೆ ತಾಳ ಹಾಕಿದರು.

ಶ್ರೀರಾಮ ಭಜನಾ ಮಂಡಳಿ ಬಂಗಾರಡ್ಕ, ಶ್ರೀಮಹಾಲಕ್ಷ್ಮೀ ಭಜನಾ ಮಂಡಳಿ ದೊಡ್ಡಡ್ಕ, ದುರ್ಗಾಶ್ರೀ ಭಜನಾ ಮಂಡಳಿ ಬಲ್ನಾಡು, ಶ್ರೀದುರ್ಗಾಪರಮೇಶ್ವರಿ ಭಜನಾ ಮಂಡಳಿ ದುರ್ಗಾನಗರ ಅಜ್ಜಿನಡ್ಕ, ಆರ್.ಕೆ ಭಜನಾ ತಂಡ ಪರಿಯಾಲ್ತಡ್ಕ, ಶ್ರೀದೇವಿ ಭಜನಾ ಮಂಡಳಿ ಆರ್ಲಪದವು, ಶ್ರೀ ವಿಷ್ಣ ಭಜನಾ ಮಂಡಳಿ ದೂಮಡ್ಕ ಹಾಗೂ ಶ್ರೀದುರ್ಗಾವಾಹಿನಿ ಮಹಿಳಾ ಭಜನಾ ಮಂಡಳಿ ಮಾನ್ಯಡ್ಕ ಕಾವು ಕುಣಿತ ಭಜನೆಯಲ್ಲಿ ಸಹಕರಿಸಿದರು.

ಸೂರ್ಯೋದಯದಿಂದ ಸೂರ್ಯಾಸ್ತದ ತನಕ ನಡೆದ ಅರ್ಧ ಏಕಾಹ ಭಜನೆಯಲ್ಲಿ ಶ್ರೀ ಮಹಾಲಕ್ಷ್ಮೀ ಭಜನಾ ಮಂಡಳಿ ದೊಡ್ಡಡ್ಕ, ಶ್ರೀ ದುರ್ಗಾ ಭಜನಾ ಮಂಡಳಿ ಕುಂಜೂರುಪಂಜ, ಶ್ರೀ ಭಟ್ಟಿ ವಿನಾಯಕ ಭಜನಾ ಮಂಡಳಿ ಬಲ್ನಾಡು, ಶ್ರೀ ಮಹಾಲಿಂಗೇಶ್ವರ ಮಹಿಳಾ ಭಜನಾ ಮಂಡಳಿ ಬೆಟ್ಟಂಪಾಡಿ, ಶ್ರೀಕಾಳಿಕಾಂಬ ಭಜನಾ ಮಂಡಳಿ ವಳತ್ತಡ್ಕ, ದುರ್ಗಾಶ್ರೀ ಮಹಿಳಾ ಭಜನಾ ಮಂಡಳಿ ಬಲ್ನಾಡು, ಸುಭದ್ರಾ ಮಹಿಳಾ ಭಜನಾ ಮಂಡಳಿ ಮುಕ್ರಂಪಾಡಿ, ಶ್ರೀಕೃಷ್ಣ ಮಹಿಳಾ ಭಜನಾ ಮಂಡಳಿ ಗುಮ್ಮಟೆಗದ್ದೆ, ವೈದೇಹಿ ವೈಷ್ಣವೀ ಮಹಿಳಾ ಭಜನಾ ಮಂಡಳಿ ಬೊಳುವಾರು, ಶ್ರೀ ಮಹಿಷಮರ್ದಿನಿ ಭಜನಾ ಮಂಡಳಿ ಆಜೇರು, ಶ್ರೀರಾಮ ಭಜನಾ ಮಂಡಳಿ ಬಂಗಾರಡ್ಕ ಸಹಕರಿಸಿದರು. ಭಜನೆಯಲ್ಲಿ ಭಾಗವಹಿಸಿ ಎಲ್ಲಾ ತಂಡಗಳನ್ನು ಗೌರವಿಸಲಾಯಿತು.


ಉದಯ ನಾರಾಯಣ ಕಲ್ಲೂರಾಯರವರ ನೇತೃತ್ವದಲ್ಲಿ ನಡೆದ 14ನೇ ವಾರ್ಷಿಕೋತ್ಸವದಲ್ಲಿ ಬೆಳಿಗ್ಗೆ ಗಣಪತಿ ಹವನ, ಪೂರ್ವಾಹ್ನ ಅರ್ಧ ಏಕಾಹ ಭಜನೆ ಆರಂಭಗೊಂಡು ಬಳಿಕ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ, ಸಾಮೂಹಿಕ ಶ್ರೀರಾಮ ಕಲ್ಪೋಕ್ತಪೂಜೆ ಪ್ರಾರಂಭಗೊಂಡು ಮಧ್ಯಾಹ್ನ ಮಹಾಪೂಜೆ, ಮಂಗಳಾರತಿ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ, ಸಂಜೆ ವಿವಿಧ ನುರಿತ ಭಜನಾ ಮಂಡಲಿಗಳಿಂದ ಏಕಕಾಲದಲ್ಲಿ ಹಣತೆಯ ದೀಪದಲ್ಲಿ ಕುಣಿತ ಭಜನೆ ರಂಗಪೂಜೆ, ಮಹಾಮಂಗಳಾರತಿ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆಯೊಂದಿಗೆ ವಾರ್ಷಿಕೋತ್ಸವವು ಸಂಪನ್ನಗೊಂಡಿತು. ವಿವಿಧ ಸಾಮಾಜಿಕ, ರಾಜಕೀಯ, ಶೈಕ್ಷಣಿಕ, ಧಾರ್ಮಿಕ ಮುಖಂಡರುಗಳು, ಜನಪ್ರತಿನಿಧಿಗಳು ಸೇರಿದಂತೆ ಸಾವಿರಾರು ಮಂದಿ ಭಕ್ತಾದಿಗಳು ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ಕುಣಿತ ಭಜನೆಯ ವೈಭವವನ್ನು ಕಣ್ತುಂಬಿಕೊಂಡರು.


ಶ್ರೀರಾಮ ಸೇವಾ ಸಮಿತಿ, ಶ್ರೀರಾಮ ಭಜನಾ ಮಂಡಳಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸದಸ್ಯರುಗಳು ಸೇರಿದಂತೆ ಹಲವು ಮಂದಿ ವಾರ್ಷಿಕೋತ್ಸವ ಯಶಸ್ವಿಯಾಗಿ ನೆರವೇರುವಲ್ಲಿ ಸಹಕರಿಸಿದ್ದು, ಸಹಕರಿಸಿದ ಪ್ರತಿಯೊಬ್ಬರಿಗೂ ಕೃತಜ್ಷತೆ ಸಲ್ಲಿಸುವುದಾಗಿ ಭಜನಾ ಮಂದಿರದ ಅಧ್ಯಕ್ಷ ಪ್ರದೀಪಕೃಷ್ಣ ಬಂಗಾರಡ್ಕ ತಿಳಿಸಿದ್ದಾರೆ.


LEAVE A REPLY

Please enter your comment!
Please enter your name here