ಪಾಲ್ತಾಡಿ ಕಲ್ಲಕಟ್ಟ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಿದ ಸವಣೂರು ಗ್ರಾ.ಪಂ.

0

ಸವಣೂರು : ಪಾಲ್ತಾಡಿ ಗ್ರಾಮದ ಕಲ್ಲಕಟ್ಟ ಭಾಗದಲ್ಲಿ ಕಳೆದ ಮೂರು ವಾರಗಳಿಂದ ಕುಡಿಯುವ ನೀರಿನ ಸರಬರಾಜು ಆಗದೇ ಜನತೆ ಸಮಸ್ಯೆ ಎದುರಿಸುತ್ತಿದ್ದಾರೆ ಎಂಬ ಮಾಹಿತಿಯಂತೆ ಸವಣೂರು ಗ್ರಾ.ಪಂ.ಆಡಳಿತ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಪರಿಹರಿಸಿದ್ದಾರೆ.

ಈ ಹಿಂದೆ ಇದ್ದ ಕೊಳವೆ ಬಾವಿಯಿಂದ ಪಂಪ್ ತೆಗೆದು ಹೊಸ ಕೊಳವೆ ಬಾವಿಗೆ ಅಳವಡಿಸಲಾಗಿದ್ದು, ಇದರಿಂದ ಕೆಲವು ಮನೆಗಳಿಗೆ ಮಾತ್ರ ನೀರು ಸರಬರಾಜಾಗುತ್ತಿದ್ದು, ಉಳಿದ ಮನೆಗಳಿಗೆ ನೀರು ಬಾರದೇ ಸಮಸ್ಯೆ ತಲೆದೋರಿರುವ ಬಗ್ಗೆ ದೂರು ವ್ಯಕ್ತವಾಗಿತ್ತು.

ಸ್ಥಳಕ್ಕೆ ಭೇಟಿ ನೀಡಿದ ಸವಣೂರು ಗ್ರಾ.ಪಂ.ಅಧ್ಯಕ್ಷೆ ರಾಜೀವಿ ಶೆಟ್ಟಿ, ಸದಸ್ಯರಾದ ಹರೀಶ್ ಕಾಯರಗುರಿ, ಸತೀಶ್ ಅಂಗಡಿಮೂಲೆ, ಅಭಿವೃದ್ಧಿ ಅಧಿಕಾರಿ ಎ.ಮನ್ಮಥ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ವೇಳೆ ಕೆಲವು ಮನೆಗಳಲ್ಲಿ ಅಕ್ರಮವಾಗಿ ಕೃಷಿಗೆ ಬಳಕೆ ಮಾಡುತ್ತಿರುವುದು ಹಾಗೂ ನಿಗದಿತ ಪ್ರಮಾಣಕ್ಕಿಂತ ದೊಡ್ಡ ಪೈಪುಗಳನ್ನು ಅಳವಡಿಸಿ ನೀರು ಪಡೆಯುತ್ತಿರುವುದು ಗಮನಕ್ಕೆ ಬಂದಿದೆ. ಇದರ ಪರಿಣಾಮವಾಗಿ, ಕೆಲ ಮನೆಗಳಿಗೆ ನೀರು ಪೂರೈಕೆಯಾಗುತ್ತಿರಲಿಲ್ಲ.

ಈ ಕುರಿತು ಎಲ್ಲಾ ಮನೆಗಳಿಗೂ ಒಂದೇ ರೀತಿಯ ಪೈಪು ಅಳವಡಿಕೆ ಹಾಗೂ ಕೃಷಿಗೆ ಬಳಕೆ ಮಾಡದಂತೆ ಗ್ರಾ.ಪಂ.ತಂಡ ಸೂಚನೆ ನೀಡಿದೆ.

ಈ ಸಂದರ್ಭದಲ್ಲಿ ಫಲಾನುಭವಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here