ಮುರ ಎಂಪಿಎಂ ವಿದ್ಯಾಲಯದಲ್ಲಿ ಅಲ್ ಬಿರ್ರ್ ಪ್ರೀಸ್ಕೂಲ್ ಉದ್ಘಾಟನೆ

0

ಅಲ್ ಬಿರ್ರ್‌ನ ವಿನೂತನ ಶೈಕ್ಷಣಿಕ ಮಾದರಿ ಶ್ಲಾಘನೀಯ – ಪುತ್ತೂರು ತಂಙಳ್

ಪುತ್ತೂರು : ಎಳೆಯ ಮಕ್ಕಳಿಗೆ ಆಟದ ಜೊತೆಗೆ ಪಾಠ ಎಂಬ ರೀತಿಯಲ್ಲಿ ಅತ್ಯಾಧುನಿಕ ಶೈಲಿಯಲ್ಲಿ ಧಾರ್ಮಿಕ ಮತ್ತು ಲೌಕಿಕ ಸಮನ್ವಯ ಶಿಕ್ಷಣವನ್ನು ನೀಡಲಾಗುತ್ತಿದ್ದು ಇದರಿಂದ ಮಕ್ಕಳಲ್ಲಿ ಸಣ್ಣದರಲ್ಲೇ ಸಂಸ್ಕಾರಯುತ ಬದುಕು ಕಟ್ಟಲು ಸಾಧ್ಯವಾಗುತ್ತದೆ, ಎಲ್ಲರೂ ಇದರ ಸದುಪಯೋಗ ಪಡೆಯಬೇಕೆಂದು ಸಯ್ಯಿದ್ ಅಹ್ಮದ್ ಪೂಕೋಯ ತಂಙಳ್ ಪುತ್ತೂರು ಹೇಳಿದರು. ಅವರು ಮುರ ಎಂ.ಪಿ.ಎಂ. ವಿದ್ಯಾಲಯದಲ್ಲಿ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆದ ಪ್ರಿಸ್ಕೂಲ್ ’ಅಲ್ ಬಿರ್ರ್’ನ ನೂತನ ವಿದ್ಯಾಸಂಸ್ಥೆಯನ್ನು ಉದ್ಘಾಟಿಸಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ’ಸಮಸ್ತ’ ಕೇಂದ್ರ ಮುಶಾವರ ಸದಸ್ಯರಾದ ಖಾಝಿ ಅಬ್ದುಲ್ ಖಾದಿರ್ ಅಲ್ ಖಾಸಿಮಿ ಬಂಬ್ರಾಣ ಮಾತನಾಡಿ, ’ಸಮಸ್ತ’ ದ ಅಧೀನದಲ್ಲಿ ಶೈಕ್ಷಣಿಕ ಕ್ಷೇತ್ರವು ಮಹತ್ತರ ಕ್ರಾಂತಿಯನ್ನು ಉಂಟು ಮಾಡಿದ್ದು, ಆ ಪೈಕಿ ಪುಟಾಣಿ ಮಕ್ಕಳಿಗಾಗಿ ಆರಂಭಿಸಲಾದ ’ಅಲ್ ಬಿರ್ರ್’ ಪ್ರಿಸ್ಕೂಲ್ ಅಲ್ಪಾವಧಿಯಲ್ಲಿ ಸರ್ವತ್ರ ಪ್ರಶಂಸೆಗೆ ಪಾತ್ರವಾಗಿದೆ ಎಂದರು. ಮುಖ್ಯ ಭಾಷಣ ಮಾಡಿದ ’ಸಮಸ್ತ’ದ ಕೇಂದ್ರ ಮುಶಾವರ ಸದಸ್ಯ ಉಸ್ಮಾನುಲ್ ಫೈಝಿ ತೊಡಾರ್ ಮಾತನಾಡಿ ಮಕ್ಕಳಿಗೆ ಎಳೆಯದರಲ್ಲೇ ಲೌಕಿಕ ಶಿಕ್ಷಣದ ಜೊತೆಗೆ ಇಸ್ಲಾಮಿಕ್ ಆದರ್ಶವನ್ನು ಕಲಿಯಲು ಅಲ್ ಬಿರ್ರ್ ಉತ್ತಮ ವೇದಿಕೆಯಾಗಿದೆ ಎಂದರು.

ಪುತ್ತೂರು ಅನ್ಸಾರುದ್ದೀನ್ ಜಮಾಅತ್ ಕಮಿಟಿಯ ಅಧ್ಯಕ್ಷ ಎಲ್.ಟಿ.ಅಬ್ದುಲ್ ರಝಾಕ್ ಹಾಜಿ ಮಾತನಾಡಿ ಶಿಶು ಸ್ನೇಹಿ ಶಿಕ್ಷಣ ಪದ್ಧತಿ ಕಾಲದ ಬೇಡಿಕೆಯಾಗಿದೆ ಅಲ್ ಬಿರ್ರ್ ಈ ನಿಟ್ಟನಲ್ಲಿ ಉತ್ತಮ ಬೆಳವಣಿಗೆಯಾಗಿದೆ ಎಂದರು.

ಎಂ.ಪಿ.ಎಂ.ವಿದ್ಯಾಸಂಸ್ಥೆಯ ಅಧ್ಯಕ್ಷ ನ್ಯಾಯವಾದಿ ನೋಟರಿ ಎಂ.ಪಿ.ಅಬೂಬಕ್ಕರ್ ಮಾತನಾಡಿ ಎಂಪಿಎಂ ವಿದ್ಯಾಲಯ ಸ್ಥಾಪನೆಯಾಗಿ 25 ವರ್ಷ ಪೂರೈಸಿದ ಹಿನ್ನಲೆಯಲ್ಲಿ ಅಲ್ ಬಿರ್ರ್ ವಿದ್ಯಾಸಂಸ್ಥಯನ್ನು ಆರಂಭಿಸಲಾಗಿದೆ ಎಂದು ಹೇಳಿ ಸಂಸ್ಥೆಯ ಮುಂದಿನ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಸಾಲ್ಮರ ಸಯ್ಯದ್‌ಮಲೆ ಮಸೀದಿಯ ಖತೀಬ್ ಉಮರ್ ದಾರಿಮಿ, ಸಾಮಾಜಿಕ ಮುಂದಾಳು ಅಶ್ರಫ್ ಕಲ್ಲೇಗ ಮತ್ತು ಅಲ್ ಬಿರ್ರ್ ದ.ಕ.ಜಿಲ್ಲಾ ಕೋಡಿನೇಟರ್ ಶುಕ್ರ್ ದಾರಿಮಿ ಕರಾಯ ಇವರು ಮಾತನಾಡಿ ಸಂಸ್ಥೆಯು ಮತ್ತಷ್ಟು ಅಭಿವೃದ್ಧಿಯನ್ನು ಪಡೆಯಲೆಂದು ಶುಭ ಹಾರೈಸಿದರು.‌

ಸಮಾರಂಭದಲ್ಲಿ ಸಯ್ಯಿದ್ ಯಹ್ಯಾ ತಂಙಳ್ ಪೋಳ್ಯ, ಸಾಲ್ಮರ ದಾರುಲ್ ಹಸನಿಯಾ ಕಾರ್ಯದರ್ಶಿ ಸಿಟಿ ಬಜಾರ್ ಹಸೈನಾರ್ ಹಾಜಿ ಪುತ್ತೂರು, ಅಡ್ವಕೇಟ್ ಸಿದ್ದೀಕ್ ಹಾಜಿ ಕಲ್ಲೇಗ, ಎಸ್ಕೆಎಸ್ಸೆಸ್ಸೆಫ್ ಪುತ್ತೂರು ವಲಯಾಧ್ಯಕ್ಷ ಬಾತಿಷಾ ಹಾಜಿ ಪಾಟ್ರಕೋಡಿ, ಅಬ್ದುಲ್ ಹಮೀದ್ ಸೋಂಪಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಬ್ದುಲ್ ಸಮದ್ ಹಾಜಿ ಕಲ್ಲೆಗ, ಅಬ್ದುಲ್ ಲತೀಫ್ ಹಾಜಿ ಕಲ್ಲೇಗ, ಸಿದ್ದೀಕ್ ಮಾಹಿ ಕಲ್ಲೇಗ, ಅಶ್ರಫ್ ಕುಕ್ಕಾಜೆ, ಅಬ್ದುಲ್ ರಶೀದ್ ಶಾಂತಿನಗರ, ಫಾರೂಕ್ ಕಲ್ಲೇಗ, ಎಂ.ಪಿ. ಉಮರ್ ಮಲ್ನಾಡ್, ಆದಮ್ ಕಲ್ಲೇಗ, ಹಸೈನಾರ್ ಬನಾರಿ, ಹಂಸ ಬನಾರಿ, ಫಾರೂಕ್ ಮುರ, ಸಿನಾನ್ ಪರ್ಲಡ್ಕ, ಅಬೂಬಕ್ಕರ್ ಮತಾವು ಮೊದಲಾದವರು ಉಪಸ್ಥಿತರಿದ್ದರು.

ಪುತ್ತೂರು ವಲಯ ಎಸ್ಕೆಎಸ್ಸೆಸ್ಸೆಫ್ ಅಧ್ಯಕ್ಷ ಬಾತಿಷಾ ಹಾಜಿ ಪಾಟ್ರಕೋಡಿರವರ ಪುತ್ರಿಗೆ ಅಲ್ ಬಿರ್ರ್‌ನ ಎಲ್.ಕೆ.ಜಿ.ಗೆ ಮೊದಲ ದಾಖಲಾತಿ ನೀಡಿ ಹೊಸ ದಾಖಲಾತಿ ಪ್ರಕ್ರಿಯೆಗೆ ಪುತ್ತೂರು ತಂಙಳ್ ಚಾಲನೆ ನೀಡಿದರು. ಮುಫಾತ್ತಿಶ್ ಉಮರ್ ದಾರಿಮಿ ಕಾರ್ಯಕ್ರಮದ ಆರಂಭದಲ್ಲಿ ಸ್ವಾಗತಿಸಿ,’ಅಲ್ ಬಿರ್ರ್ ’ ಶಿಕ್ಷಣ ವ್ಯವಸ್ಥೆಯ ಬಗ್ಗೆ ವಿವರಿಸಿದರು. ಕೆ.ಎಂ.ಎ.ಕೊಡುಂಗಾಯಿ ಕಾರ್ಯಕ್ರಮ ನಿರೂಪಿಸಿದರು. ಆಡಳಿತ ಸಮಿತಿ ಪದಾಧಿಕಾರಿಗಳಾದ ಅಬ್ದುಲ್ ರಶೀದ್ ಹಾಜಿ ಪರ್ಲ್ಲಡ್ಕ, ಸುಲೈಮಾನ್ ಮೌಲವಿ ಕಲ್ಲೇಗ, ಮೊದಲಾದವರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಇಬ್ರಾಹಿಂ ಕಡವ ವಂದಿಸಿದರು .ಎಂ.ಪಿ.ಎಂ.ಶಾಲೆ ಮತ್ತು ಅಲ್ ಬಿರ್ರ್ ಸ್ಕೂಲ್ ಶಿಕ್ಷಕಿಯರು ಮತ್ತು ಪೋಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

LEAVE A REPLY

Please enter your comment!
Please enter your name here