ಕಾಣಿಯೂರು: ಕಾಣಿಯೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಆಟದ ಮೈದಾನಕ್ಕೆ ಬಳಸುತ್ತಿದ್ದ ಸರಕಾರಿ ಜಾಗವನ್ನು ಶಾಲಾ ಮೈದಾನದ ಉದ್ದೇಶಕ್ಕಾಗಿ ಕಾಯ್ದಿರಿಸಿ ಜಿಲ್ಲಾಧಿಕಾರಿ ಆದೇಶ ಮಾಡಿದ್ದಾರೆ. ಶಾಲಾ ಆಟದ ಮೈದಾನಕ್ಕೆ ಬಳಸುತ್ತಿದ್ದ ಬೆಳಂದೂರು ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳಪಟ್ಟ ಸರ್ವೆ ನಂ.124/1(ಪಿ1) ಮತ್ತು 99(ಪಿ1) ರಲ್ಲಿರುವ ಸರಕಾರಿ ಭೂಮಿಯನ್ನು ಶಾಲಾ ಆಟದ ಮೈದಾನಕ್ಕೆ ಮಣ್ಣು ಹಾಕಿಸಿ ಸಮತಟ್ಟು ಮಾಡಿಸಿ ಸುಮಾರು ವರ್ಷಗಳಿಂದ ಬಳಸಿಕೊಳುತ್ತಿದ್ದೇವೆ. ವಿದ್ಯಾರ್ಥಿಗಳ ಆಟದ ಮೈದಾನಕ್ಕೆ ಅನುಕೂಲವಾಗುವಂತೆ ಮಾಡಬೇಕೆಂದು ಶಾಲಾ ಎಸ್‌ಡಿಎಂಸಿಯವರು ಸಂಬಂಧಪಟ್ಟ ಇಲಾಖೆಗಳಿಗೆ ಮನವಿ ಮಾಡಿದ್ದರು. ಈ ಬಗ್ಗೆ ದೋಳ್ಪಾಡಿಯಲ್ಲಿ ನಡೆದ ಗ್ರಾಮ ವಾಸ್ತವ್ಯದಲ್ಲಿಯೂ ಜಿಲ್ಲಾಧಿಕಾರಿಯವರಿಗೆ ಮಾಡಲಾಗಿತ್ತು. ಇದೀಗ 55ಸೆಂಟ್ಸ್ ಸರಕಾರಿ ಜಮೀನನ್ನು ಕಾಣಿಯೂರು ಶಾಲಾ ಆಟದ ಮೈದಾನದ ಉದ್ದೇಶಕ್ಕಾಗಿ ಕಾಯ್ದಿರಿಸುವ ಕುರಿತು ಆದೇಶ ಮಾಡಲಾಗಿದೆ.
ತಡೆಬೇಲಿ ರಚನೆ: ಕಾಣಿಯೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಆಟದ ಮೈದಾನಕ್ಕೆ ಬಳಸುತ್ತಿದ್ದ ಸರಕಾರಿ ಜಾಗವನ್ನು ಶಾಲಾ ಮೈದಾನದ ಉದ್ದೇಶಕ್ಕಾಗಿ ಕಾಯ್ದಿರಿಸಿ ಆದೇಶ ನೀಡಿದ ಹಿನ್ನೆಲೆಯಲ್ಲಿ ಶಾಲಾ ಎಸ್‌ಡಿಎಂಸಿಯವರು, ಹಿರಿಯ ವಿದ್ಯಾರ್ಥಿಗಳು ಹಾಗೂ ಪೋಷಕರು ತಡೆಬೇಲಿ ರಚಿಸಿ ಸ್ವಾಧೀನ ಪಡೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಪರಮೇಶ್ವರ ಗೌಡ ಅನಿಲ, ಉಪಾಧ್ಯಕ್ಷೆ ಯಶೋದ ನೇರೊಳ್ತಡ್ಕ, ಕಾಣಿಯೂರು ಗ್ರಾ.ಪಂ.ಸದಸ್ಯ ರಾಮಣ್ಣ ಗೌಡ ಮುಗರಂಜ, ಬೆಳಂದೂರು ಗ್ರಾ.ಪಂ.ಸದಸ್ಯ ವಿಠಲ ಗೌಡ ಅಗಳಿ, ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪದ್ಮಯ್ಯ ಗೌಡ ಅನಿಲ, ಕಾರ್ಯದರ್ಶಿ ರವೀಂದ್ರ ಅನಿಲ, ಕೋಶಾಧಿಕಾರಿ ರಾಜೇಶ್ ಮೀಜೆ ಹಾಗೂ ಸದಸ್ಯರಾದ ಪುಟ್ಟಣ್ಣ ಗೌಡ ಮುಗರಂಜ, ಮಾಧವ ಕಟ್ಟತ್ತಾರು, ಸುಬ್ರಹ್ಮಣ್ಯ ಕಲ್ಪಡ, ಸುರೇಶ್ ಓಡಬಾಯಿ, ಲಕ್ಷ್ಮಣ ಗೌಡ ಮುಗರಂಜ, ಸಂತೋಷ್ ಮುಗರಂಜ, ಚೆನ್ನಪ್ಪ ಗೌಡ ಕಲ್ಪಡ, ಕುಶಾಲಪ್ಪ ಗೌಡ ಗುಂಡಿಗದ್ದೆ, ಶಿವಾನಂದ ಪುಣ್ಚತ್ತಾರು, ತಾರಾನಾಥ ಕಟ್ಟತ್ತಾರು. ಪ್ರಶಾಂತ್ ಕೋಳಿಗದ್ದೆ, ರಮೇಶ್ ಕಟ್ಟತ್ತಾರು, ವಿನಯ್ ಎಳುವೆ, ಹನೀಫ್ ಕೂಡುರಸ್ತೆ, ಚಂದ್ರಶೇಖರ ಮೀಜೆ, ಯಶಕಲಾ ಮುಗರಂಜ, ಪಾರ್ವತಿ ಕಾಣಿಯೂರು, ಸೀತಾರಾಮ ಮಿತ್ತಮೂಲೆ, ಗಿರಿಯಪ್ಪ ಮಾದೋಡಿ, ಕುಸುಮಾಧರ ಅನಿಲ, ರಮೇಶ್ ಮಾದೋಡಿ, ಬಾಲಕೃಷ್ಣ ಕರಂದ್ಲಾಜೆ, ಚಂದ್ರಶೇಖರ ಮಲೆಕೆರ್ಚಿ, ಚಂದ್ರಶೇಖರ ಕಟ್ಟತ್ತಾರು, ಜಿತೇಶ್ ಚಾರ್ವಾಕ, ಕೃಷ್ಣ ಚೆಟ್ಟಿಯಾರ್ ಮುಗರಂಜ, ವಸಂತ ಗೌಡ ಅನಿಲ, ಅಶ್ವಿನ್ ಕುಮಾರ್ ಕಾಣಿಯೂರು, ಆಶಾ ಕಟ್ಟತ್ತಾರು, ಶಕುಂತಳಾ ಬೆದ್ರಾಜೆ ಮತ್ತಿತರರು ಉಪಸ್ಥಿತರಿದ್ದರು.
ಕಾಣಿಯೂರು ಶಾಲೆಯ ಆಟದ ಮೈದಾನಕ್ಕಾಗಿ ಬಳಸುತ್ತಿದ್ದ ಸರಕಾರಿ ಜಾಗವನ್ನು ಶಾಲಾ ಸ್ವಾಧೀನ ಪಡೆದುಕೊಳ್ಳುವ ನಿಟ್ಟಿನಲ್ಲಿ ಸುಮಾರು 20 ವರ್ಷದಿಂದ ಶಾಲಾ ಎಸ್‌ಡಿಎಂಸಿ ಅಧ್ಯಕ್ಷರುಗಳು, ಮುಖ್ಯಗುರುಗಳು ಹಾಗೂ ವಿದ್ಯಾಭಿಮಾನಿಗಳು ಹೋರಾಟ ನಡೆಸಿಕೊಂಡು ಬರುತ್ತಿದ್ದೆವು. ಇದೀಗ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು 55ಸೆಂಟ್ಸ್ ಜಾಗವನ್ನು ಶಾಲಾ ಆಟದ ಮೈದಾನಕ್ಕಾಗಿ ಕಾಯ್ದಿರಿಸಿ ಮಂಜೂರು ಮಾಡಿದ್ದು, ಬಹುದಿನದ ಬೇಡಿಕೆ ಈಡೇರಿದೆ.
ಪರಮೇಶ್ವರ ಗೌಡ ಅನಿಲ
ಅಧ್ಯಕ್ಷರು, ಎಸ್‌ಡಿಎಂಸಿ ಸ.ಹಿ.ಪ್ರಾ.ಶಾಲೆ ಕಾಣಿಯೂರು