ಜನಪ್ರತಿನಿಧಿ ಜೊತೆಗಿರುವ ಫೋಟೋ ಎಡಿಟ್ ಮಾಡಿದ್ದು ! ಫೋಟೋ ವೈರಲ್ ಮಾಡುವವರಿಗೆ ಸೂಕ್ತ ಶಿಕ್ಷೆ ಆಗಬೇಕು – ಮಹಿಳೆ ಆಗ್ರಹ

0

ಪುತ್ತೂರು: ಜನಪ್ರತಿನಿಧಿ ಜೊತೆಗಿರುವ ಪೊಟೋ ಎಡಿಟ್ ಮಾಡಿದ್ದು, ಅದನ್ನು ವೈರಲ್ ಮಾಡುವವರ ವಿರುದ್ಧ ಸೂಕ್ತ ಶಿಕ್ಷೆ ಆಗಬೇಕೆಂದು ನೆಕ್ಕಿಲಾಡಿಯ ಮಹಿಳೆಯೊಬ್ಬರು ಮಾಧ್ಯಮದ ಮುಂದೆ ಹೇಳಿಕೆ ನೀಡಿದ್ದಾರೆ.

ನನ್ನ ವೈಯುಕ್ತಿಕ ಫೋಟೋಗಳನ್ನು ಪುತ್ತೂರಿನ ಶಾಸಕರ ಜೊತೆ ಹೊಂದಾಣಿಕೆ ಮಾಡಿಕೊಂಡು ವೈರಲ್ ಮಾಡುತ್ತಿದ್ದಾರೆ. ಇದರಿಂದಾಗಿ ನನಗೆ ಮತ್ತು ಮನೆ ಮಂದಿಗೆ ತುಂಬಾ ನೋವಾಗಿದೆ. ಓರ್ವ ಮಹಿಳೆಯಾಗಿ ನನ್ನ ಮೇಲೆ ದೌರ್ಜನ್ಯ ಮಾಡುವುದು ತಪ್ಪು.

ನನಗೂ ಶಾಸಕರಿಗೆ ಯಾವುದೇ ರೀತಿಯ ಸಂಬಂಧವಿಲ್ಲ. ಅದೂ ಅಲ್ಲದೆ ಓರ್ವ ಮಹಿಳೆಯ ಮೇಲೆ ಇಷ್ಟು ದೊಡ್ಡ ಆರೋಪ ಸರಿಯಲ್ಲ. ಯಾರು ವೈರಲ್ ಮಾಡಿದ್ದಾರೋ ಅವರಿಗೆ ಸೂಕ್ತ ಶಿಕ್ಷೆ ಆಗಬೇಕು ಎಂದು ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here