ಅಕ್ಷಯ ಕಾಲೇಜಿನ ರಾಷ್ಟ್ರೀಯ ಸೇವಾ ಯೊಜನೆಯ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭ

0

ಪುತ್ತೂರು : ಅಕ್ಷಯ ಕಾಲೇಜಿನ ರಾಷ್ಟ್ರೀಯ ಸೇವಾ ಯೊಜನೆಯ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭ ಎಣ್ಮೂರು ಪ್ರೌಢಶಾಲೆಯಲ್ಲಿ ನಡೆಯಿತು.


ನಾವು ಮಾನವೀಯ ಮೌಲ್ಯಗಳನ್ನು ರೂಪಿಸಿಕೊಂಡು, ಉತ್ತಮ ಜೀವನವನ್ನು ನಡೆಸಬೇಕಾದರೆ ರಾಷ್ಟ್ರೀಯ ಸೇವಾ ಯೊಜನೆಯ ಎಲ್ಲಾ ಚಟುವಟಿಕೆಗಳು ಮಹತ್ವದ ಪಾತ್ರವನ್ನು ವಹಿಸುತ್ತದೆ ಎಂದು ಸಮಾರೋಪ ಸಮಾರಂಭದ ಮುಖ್ಯ ಅತಿಥಿ ಹಾಗು ಮುಖ್ಯ ಭಾಷಣಕಾರರಾಗಿ ಆಗಮಿಸಿದ ಮಾಧವ ಗೌಡ, ಉದ್ಯಮಿಗಳು ಕಾಮದೇನು ಗ್ರೂಪ್ಸ್ ಬೆಳ್ಳಾರೆ ಅವರು ಸರಕಾರಿ ಪ್ರೌಢಶಾಲೆ ಎಣ್ಮೂರು ಇಲ್ಲಿ ನಡೆದ ಅಕ್ಷಯ ಕಾಲೇಜು ಪುತ್ತೂರಿನ ರಾಷ್ಟ್ರೀಯ ಸೇವಾ ಯೊಜನೆಯ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.


ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಅಧ್ಯಕ್ಷ ಜಯಂತ ನಡುಬೈಲು ಮಾತನಾಡಿ ವಿದ್ಯಾರ್ಥಿ ಜೇವನದಲ್ಲಿನ ಶಿಬಿರದ ಅನುಭವವನ್ನು ತಿಳಿಸಿ, ತಮ್ಮ ಕಾಲೇಜಿನ ಶಿಬಿರಾರ್ಥಿಗಳು ಮಾಡಿದ ಉತ್ತಮ ಕಾರ್ಯಗಳನ್ನು ಪ್ರಶಂಸಿಸಿದರು.


ಸಮಾರಂಭದಲ್ಲಿ ಶಿಬಿರದ ಸಮಗ್ರ ವರದಿಯನ್ನು ರಾಷ್ಟ್ರೀಯ ಸೇವಾ ಯೊಜನಾಧಿಕಾರಿಗಳಾದ ಕಿಶೋರ್ ಕುಮಾರ್ ರೈ ಅವರು ಮಂಡಿಸಿದರು.
ಡಾ.ರವಿ ಕಕ್ಕೆಪದವು ಸಮಾಜ ಸೇವಕರು, ಉದ್ಯಮಿಗಳು, ಸುಬ್ರಮಣ್ಯ, ಗೋಪಾಲ ಎಣ್ಣೆಮಜಲು ಅಧ್ಯಕರು ರೋಟರಿ ಕ್ಲಬ್ ಸುಬ್ರಮಣ್ಯ, ಸದಾನಂದ ರೈ ಕೂವೆಂಜ ಪ್ರಾಂಶುಪಾಲರು, ಕೆ.ಎಸ್. ಗೌಡ ಪದವಿ ಪೂರರ್ವ ಕಾಲೇಜು ನಿಂತಿಕಲ್ಲು ಹಾಗು ಅಕ್ಷಯ ಕಾಲೇಜಿನ ಆಡಳಿತಾಧಿಕಾರಿ ಅರ್ಪಿತ್ ಟಿ.ಎ., ಕುಮಾರಿ ಮೇಘಶ್ರೀ ಸಹ ಶಿಬಿರಾಧಿಕಾರಿ ರಾಷ್ಟ್ರೀಯ ಸೇವಾ ಯೊಜನಾ ಘಟಕ ಅಕ್ಷಯ ಕಾಲೇಜು ಪುತ್ತೂರು ಇವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.


ಸಮಾರಂಭದಲ್ಲಿ ಸ್ವಯಂಸೇವಕಿಯರು ಪ್ರಾರ್ಥಿಸಿದರು, ಘಟಕ ನಾಯಕರಾದ ಹಸ್ತಿಕ್ ಸ್ವಾಗತಿಸಿ, ನಾಯಕಿ ವಿದ್ಯಾಶ್ರೀ ವಂದಿಸಿದರು. ಶಿಬಿರಾರ್ಥಿಗಳು ಶಿಬಿರದ ಅನುಭವಗಳನ್ನು ಹಂಚಿ ಕೊಂಡರು. ಶಿಬಿರಾರ್ಥಿ ರೋಹಿತ್ ಕುಮಾರ್ ಕಾರ್‍ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here