ಪುತ್ತೂರು: ಕಲ್ಲಾರೆ ಕೃಷ್ಣಾ ಆರ್ಕೆಡ್ನಲ್ಲಿ ಕಾರ್ಯಾಚರಿಸುತ್ತಿರುವ ವೈದ್ಯಕೀಯ ಹಾಗೂ ಮಧುಮೇಹ ತಜ್ಞ ಡಾ.ನಝೀರ್ ಅಹಮದ್ ಕೆ.ರವರ ಡಾ.ನಝೀರ್ಸ್ ಡಯಾಬೆಟ್ಸ್ ಸೆಂಟರ್ ಎ.10 ರಂದು 10ನೇ ವರ್ಷಕ್ಕೆ ಪಾದಾರ್ಪಣೆಗೈಯುತ್ತಿದೆ.
ಈ ಸಂದರ್ಭದಲ್ಲಿ ಡಾ.ನಝೀರ್ಸ್ ಡಯಾಬೆಟ್ಸ್ ಸೆಂಟರ್ ತನ್ನ ಪಾದಾರ್ಪಣೆ ಪ್ರಯುಕ್ತ ರೋಟರಿ ಕ್ಲಬ್ ಪುತ್ತೂರು ಮತ್ತು ರೋಟರ್ಯಾಕ್ಟ್ ಕ್ಲಬ್ ಪುತ್ತೂರು ಇವುಗಳ ಜಂಟಿ ಆಶ್ರಯದಲ್ಲಿ ಎ.10ರಂದು ಫಲಾನುಭವಿಗಳಿಗೆ ವಿವಿಧ ಉಚಿತ ಆರೋಗ್ಯ ತಪಾಸಣೆಯನ್ನು ಕೈಗೊಂಡಿದೆ. ಥೈರಾಯ್ಡ್ ಗ್ರಂಥಿಯ ತಪಾಸಣೆ, ಮಧುಮೇಹ, ಪಾದ ರೋಗದ ತಪಾಸಣೆ ಮತ್ತು ಮಾಹಿತಿ, ನ್ಯೂರೋಟಚ್ ಮತ್ತು ಬಯೋಥೀಸಿಯೋಮೆಟ್ರಿ ಪರೀಕ್ಷೆ, ಮಧುಮೇಹಿಗಳಿಗಾಗಿರುವ ವಿಶೇಷ ಪಾದರಕ್ಷೆಗಳ ಪ್ರದರ್ಶನ ಮತ್ತು ದರ ಕಡಿತದ ಮಾರಾಟ, HBA1C ಬ್ಲಡ್ ಶುಗರ್ ತಪಾಸಣೆಯನ್ನು ಉಚಿತವಾಗಿ ಮಾಡಲಾಗುತ್ತದೆ.
ಕ್ಲಿನಿಕ್ನಲ್ಲಿನ ಸೌಲಭ್ಯಗಳು:
ವಿವಿಧ ರೀತಿಯ ಮಧುಮೇಹಿಗಳಿಗೆ(ಟೈಪ್ ೧, ಟೈಪ್ ೨, GDM, Pancreatic DM) ವೈಯಕ್ತೀಕರಿಸಿದ ಚಿಕಿತ್ಸೆ, ಆಹಾರ ನಿಯಂತ್ರಣದ ಬಗ್ಗೆ ದೈನಂದಿನ ಸೂಕ್ತ ಮಾಹಿತಿ, ಫ್ರೀಸ್ಟೈಲ್Libre ಉಪಕರಣದಿಂದ ನಿರಂತರವಾಗಿ ರಕ್ತದಲ್ಲಿ ಸಕ್ಕರೆಯನ್ನು ನಿಗಾ ಇಡುವ ವ್ಯವಸ್ಥೆ, ಎಲೆಕ್ಟ್ರಾನಿಕ್ ಮೆಡಿಕಲ್ ರೆಕಾರ್ಡ್ ಮತ್ತು ಪ್ರತಿಯೊಬ್ಬರಿಗೂ ವೈಯಕ್ತಿಕ ಮೊಬೈಲ್ ಆಪ್, ಆನ್ಲೈನ್ ಸಂದರ್ಶನದ ವ್ಯವಸ್ಥೆ ಮುಂತಾದ ಸೌಲಭ್ಯಗಳನ್ನು ಕ್ಲಿನಿಕ್ ಒದಗಿಸುತ್ತಿದೆ.
ಹೆಚ್ಚಿನ ಮಾಹಿತಿಗಾಗಿ ಮೊಬೈಲ್ 9481451929 ನಂಬರಿಗೆ ಹಾಗೂ ಆನ್ಲೈನ್ ಸಂದರ್ಶನಕ್ಕಾಗಿ Health Pix Appಡಾಕ್ಟರ್ಸ್ ಕೋಡ್HPLX60932ಸಂಪರ್ಕಿಸಬಹುದಾಗಿದೆ ಎಂದು ಡಾ.ನಝೀರ್ಸ್ ಡಯಾಬೆಟ್ಸ್ ಸೆಂಟರ್ ಪ್ರಕಟಣೆಯಲ್ಲಿ ತಿಳಿಸಿದೆ.