ಪುತ್ತೂರು:ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್ ಇದರ ಅಧೀನದಲ್ಲಿ ಕೇರಳ, ಕರ್ನಾಟಕ ಹಾಗೂ ಗಲ್ಫ್ ರಾಷ್ಟ್ರಗಳಲ್ಲಿ ಕಾರ್ಯಾಚರಿಸುತ್ತಿರುವ ಅಲ್ ಬಿರ್ರ್ ಸ್ಕೂಲ್ ಇದರ 2023ನೇ ಟ್ಯಾಲೆಂಟ್ ಟೆಸ್ಟ್ ಇತ್ತೀಚೆಗೆ ದೇಶ-ವಿದೇಶಗಳಲ್ಲಿ ವಿವಿಧ ಪರೀಕ್ಷಾ ಸೆಂಟರ್ ಗಳಲ್ಲಿ ನಡೆದಿದ್ದು ಇದರಲ್ಲಿ ಐಪಿಎಸ್ 2 ವಿಭಾಗದ ವಿದ್ಯಾರ್ಥಿಗಳ ಪೈಕಿ ಪರ್ಲಡ್ಕ ಅಲ್ ಬಿರ್ರ್ ಶಾಲೆಯ ವಿದ್ಯಾರ್ಥಿ ಮುಹಮ್ಮದ್ ಶಾಝಿನ್ ಅಂತಾರಾಜ್ಯ ಮಟ್ಟದಲ್ಲಿ ನಾಲ್ಕನೇ ಹಾಗೂ ಕರ್ನಾಟಕ ರಾಜ್ಯ ಮಟ್ಟದಲ್ಲಿ ಪ್ರಥಮ ರ‍್ಯಾಂಕ್ ಪಡೆದಿರುತ್ತಾರೆ.
ಟ್ಯಾಲೆಂಟ್ ಟೆಸ್ಟ್ ಸ್ಪರ್ಧೆಯಲ್ಲಿ ಕರ್ನಾಟಕ, ಕೇರಳ ಹಾಗೂ ಗಲ್ಫ್ ರಾಷ್ಟ್ರಗಳಾದ ಒಮಾನ್, ಸೌದಿ ಅರೇಬಿಯಾದಲ್ಲಿ ಕಾರ್ಯಾಚರಿಸುತ್ತಿರುವ 250ಕ್ಕೂ ಮಿಕ್ಕ ಅಲ್ ಬಿರ್ರ್ ಶಾಲೆಗಳ 192ರಷ್ಟು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕರ್ನಾಟಕದಿಂದ ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ ಹಾಗೂ ಹಾವೇರಿ ಜಿಲ್ಲೆಗಳಲ್ಲಿ ಕಾರ್ಯಾಚರಿಸುವ ಅಲ್ ಬಿರ್ರ್ ಶಾಲೆಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಕೇರಳದ ಪ್ರತಿಷ್ಟಿತ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳ ಜೊತೆ ಪೈಪೋಟಿ ನಡೆಸಿ ನಾಲ್ಕನೇ ರ್ಯಾಂಕ್ ಪಡೆದಿರುವುದು ವಿಶೇಷ ಸಾಧನೆಯಾಗಿದೆ. ಇವರು ಪುತ್ತೂರಿನ ಸಿವಿಲ್ ಇಂಜಿನಿಯರ್ ಶಾಫಿ ಪಾಪೆತ್ತಡ್ಕ ಹಾಗೂ ಫಾತಿಮತ್ ಝಹ್ರಾ ದಂಪತಿಗಳ ಪುತ್ರ.