ಹತ್ತೂರ ಭಕ್ತರ ಕಾಯುವವ ಪುತ್ತೂರ ಈಶ
ಬರಹ : ಸಿಶೇ ಕಜೆಮಾರ್
ಹೌದು ಪುತ್ತೂರು ಶ್ರೀ ಕ್ಷೇತ್ರದ ಇತಿಹಾಸವನ್ನು ನೋಡಿದರೆ ಬಹಳ ವಿಶೇಷವಾದ ಮಾಹಿತಿಗಳು ನಮಗೆ ಸಿಗುತ್ತವೆ.ಈ ಕ್ಷೇತ್ರದ ಮಹಿಮೆ ಅಪಾರ. ಪ್ರಾಚೀನ ಕಾಲದಲ್ಲಿ ಶಿವಾರ್ಚನೆಗೆ ಜೀವನವನ್ನು ಮುಡುಪಾಗಿಸಿಕೊಂಡಿದ್ದ ವಿಪ್ರೋತ್ತಮರೊಬ್ಬರು ಕಾಶಿ ಕ್ಷೇತ್ರದಿಂದ ಶಿವಲಿಂಗವನ್ನು ಪಡೆದು ಈಗಿನ ಉಪ್ಪಿನಂಗಡಿಗೆ ಬಂದಿದ್ದರು. ಈ ಸಂದರ್ಭದಲ್ಲಿ ಅವರಿಗೆ ಗೋವಿಂದ ಭಟ್ಟ ಎಂಬವರ ಪರಿಚಯವಾಯಿತು. ಅವರಿಬ್ಬರು ಬಹಳ ಆತ್ಮೀಯರಾದರು. ಒಂದು ದಿನ ಮಧ್ಯಾಹ್ನ ವಿಪ್ರೋತ್ತಮರು ಸ್ನಾನ ಮಾಡಲೆಂದು ಕುಮಾರಧಾರ ನದಿಗೆ ಬಂದರು, ಈ ಸಂದರ್ಭದಲ್ಲಿ ತನ್ನಲ್ಲಿದ್ದ ಶಿವಲಿಂಗವನ್ನು ಗೋವಿಂದ ಭಟ್ಟರ ಕೈಗಿತ್ತು. ಇದನ್ನು ಕೆಳಗಿಡಬಾರದು. ಕೈಯಲ್ಲೆ ಇಟ್ಟು ಪೂಜೆ ಮಾಡಬೇಕು. ನಾನು ಸ್ನಾನ ಮುಗಿಸಿಕೊಂಡು ಬರುತ್ತೇನೆ ಎಂದು ಹೇಳಿ ನದಿಗೆ ಇಳಿದರು.ಅಚಾನಕ್ ಅದೇನಾಯಿತೋ ಗೊತ್ತಿಲ್ಲ ಸ್ನಾನಕ್ಕೆ ನದಿಗೆ ಇಳಿದ ವಿಪ್ರರು ಮೇಲೆ ಬರಲೇ ಇಲ್ಲ. ಇತ್ತ ಗೋವಿಂದ ಭಟ್ಟರಿಗೆ ಶಿವಲಿಂಗವನ್ನು ಹಿಡಿದುಕೊಂಡು ನಿಂತು ಸಾಕಾಗಿ ಹೋಯಿತು.ಇನ್ನು ವಿಪ್ರೋತ್ತಮರು ಬರುವುದಿಲ್ಲ ಎಂದು ತಿಳಿದ ಗೋವಿಂದ ಭಟ್ಟರು ಶಿವಲಿಂಗವನ್ನು ಹಿಡಿದುಕೊಂಡು ಪುತ್ತೂರಿಗೆ ಬಂದರು.
ಹಾಗೆ ಬಂದವರೇ ನೇರವಾಗಿ ಬಂಗರಸರ ಅರಮನೆಗೆ ಹೋದರು. ಮುಂದಿನ ಸೋಮವಾರದ ಪೂಜೆಗೆ ಬೇಕಾದ ಸಾಮಾಗ್ರಿಗಳನ್ನು ಕೇಳಲು ಹೋದ ಗೋವಿಂದ ಭಟ್ಟರಿಗೆ ಅಲ್ಲೊಂದು ಅಚ್ಚರಿ ಕಾದಿತ್ತು. ಜೈನ ಧರ್ಮದ ನಿಷ್ಠರಾದ ಬಂಗರಾಯರು ತಮ್ಮ ಸಹೋದರಿ ಪ್ರಸವ ವೇದನೆಯಿಂದ ನರಳುತ್ತಿದ್ದುದರಿಂದ ದುಃಖಿತರಾಗಿದ್ದರು. ಗೋವಿಂದ ಭಟ್ಟರಿಗೆ ಏನು ಮಾಡಬೇಕೆಂದು ತೋಚಲಿಲ್ಲ. ಬಂಗರಾಯರ ಪ್ರಧಾನಿಯ ಅಪ್ಪಣೆಯಂತೆ, ಗೋವಿಂದ ಭಟ್ಟರು ತನ್ನ ಕೈಯಲ್ಲಿದ್ದ ಶಿವಲಿಂಗಕ್ಕೆ ನಮಸ್ಕರಿಸಿ, ನಿನ್ನಿಚ್ಚೆಯಂತೆ ಆಗಲಿ ಮಹೇಶ್ವರ ಎಂದು ಬೇಡಿಕೊಂಡರು. ಅದೇನಾಯಿತೋ ಗೊತ್ತಿಲ್ಲ ಪ್ರಸವ ವೇದನೆಯಿಂದ ಬಳಲುತ್ತಿದ್ದ ಬಂಗರಾಯರ ಸಹೋದರಿ ಗಂಡು ಮಗುವಿಗೆ ಜನ್ಮ ನೀಡಿದಳು. ಇಲ್ಲಿ ನಡೆದ ಪವಾಡವನ್ನು ನೋಡಿದ ಬಂಗರಾಯನಿಗೆ ಏನು ಮಾಡಬೇಕು ಎಂದು ತೋಚಲಿಲ್ಲ. ಗೋವಿಂದ ಭಟ್ಟರಿಗೆ ಪೂಜಾ ಸಾಮಾಗ್ರಿಗಳನ್ನು ಕೊಟ್ಟು ಪ್ರೀತಿಯಿಂದ ಕಳುಹಿಸಿದರು. ಇದೇ ಖುಷಿಯಲ್ಲಿದ್ದ ಗೋವಿಂದ ಭಟ್ಟರು ಒಂದು ಎಡವಟ್ಟು ಮಾಡಿಬಿಟ್ಟರು. ಶಿವಲಿಂಗವನ್ನು ನೆಲದಲ್ಲಿ ಇಡಬಾರದು ಎಂದು ಹೇಳಿದ್ದ ವಿಪ್ರರ ಮಾತು ಮರೆತುಹೋಗಿತ್ತು. ಶಿವಲಿಂಗವನ್ನು ನೆಲದಲ್ಲಿ ಇಟ್ಟು ಬಿಟ್ಟರು.ತಕ್ಷಣ ಗೋವಿಂದ ಭಟ್ಟರಿಗೆ ತನ್ನ ತಪ್ಪಿನ ಅರಿವಾಗಿ ಲಿಂಗವನ್ನು ಮೇಲಕ್ಕೆತ್ತಲು ಪ್ರಯತ್ನಿಸಿದರು. ಕದಲಲಿಲ್ಲ. ಎರಡು ಕೈಗಳಿಂದ ಎಳೆದರು ಬರಲಿಲ್ಲ. ಬಂಗರಾಯರ ಸಿಪಾಯಿಗಳು, ಆಳುಗಳು ಎಲ್ಲರೂ ಬಂದರು, ಎಳೆದರೂ ಊಹೂಂ ಬರಲೇ ಇಲ್ಲ. ಒಂದು ಪುಟ್ಟ ಲಿಂಗವನ್ನು ಎಳೆಯಲು ಸಾಧ್ಯವಾಗದೇ ಇದ್ದುದ್ದು ಎಲ್ಲರಿಗೂ ಅಚ್ಚರಿಯಾಯಿತು. ಕೊನೆಗೆ ಪಟ್ಟದ ಆನೆಗೆ ಸರಪಳಿ ಬಿಗಿದು ಶಿವಲಿಂಗವನ್ನು ಎಳೆಯುವ ಬಗ್ಗೆ ಮಾತುಕತೆ ನಡೆದು ಅದರಂತೆ ಮಾಡಲಾಯಿತು. ನೋಡು ನೋಡುತ್ತಿದ್ದಂತೆ ಪುಟ್ಟದಾದ ಶಿವಲಿಂಗ ತನ್ನ ಗಾತ್ರವನ್ನು ಹಿಗ್ಗಿಸಿಕೊಂಡಿತು. ಗಜರಾಜ ಎಳೆಯುತ್ತಿದ್ದ ಶಿವಲಿಂಗ ತನ್ನ ಭೂಮರೂಪವನ್ನು ತೋರಿಸಿಬಿಟ್ಟ, ಮಹಾಲಿಂಗನಾಗಿ, ಮಹೇಶ್ವರನಾಗಿ ಕಂಗೋಳಿಸಿದನು. ಶಿವಲಿಂಗವನ್ನು ಎಳೆಯುತ್ತಿದ್ದ ಆನೆಯು ನೋವಿನಿಂದ ಕೂಗಿಕೊಂಡಿತು. ಗಜರಾಜ ನೆಲಕ್ಕೆ ಉರುಳಿಬಿಟ್ಟ, ಆನೆಯ ಅಂಗ ಅಂಗಗಳು ಛಿದ್ರಗೂಂಡು ಬೇರೆ ಬೇರೆ ಭಾಗಗಳಿಗೆ ಎಸೆಯಲ್ಪಟ್ಟವು. ಆನೆಯ ಅಂಗಗಳು ಬಿದ್ದ ಜಾಗ ಈಗಲೂ ಪುತ್ತೂರು ಆಸುಪಾಸಿನಲ್ಲಿ ಇದೆ. ಸರ್ವ ಕಾರ್ಯಗಳಿಗೂ ಶ್ರೀ ಮಹಾಲಿಂಗೇಶ್ವರನನ್ನು ಭಕ್ತಿಯಿಂದ ಜನ ಪೂಜಿಸಿದರು. ಭಕ್ತಿಯಿಂದ ಬೇಡಿದ ಎಲ್ಲರಿಗೂ ಶುಭವಾಯಿತು.
ಸುಪ್ರಸನ್ನನಾದ ಶಿವನು ಮಂಗಳಕರನಾಗಿ ಮಹಾಲಿಂಗೇಶ್ವರನಾಗಿ ಪುತ್ತೂರಿನ ಪುಣ್ಯ ಮಣ್ಣಲ್ಲಿ ನೆಲೆಸಿ ಹತ್ತೂರಿನ ಜನರನ್ನೂ ಹರಸುತ್ತಾ ಬಂದಿದ್ದಾನೆ, ಬರುತ್ತಿದ್ದಾನೆ. ಇದು ಕ್ಷೇತ್ರ ಮಹಿಮೆ. ಸಂಕಷ್ಟದ ಕಾಲದಲ್ಲೂ ಹತ್ತೂರನ್ನು ಕಾಯುವ ಪುತ್ತೂರ ಈಶನ ಜಾತ್ರೆ ಆರಂಭಗೊಳ್ಳುತ್ತಿದೆ. ಇದು ಭಕ್ತವಲಯದಲ್ಲಿ ಹೊಸ ಚೈತನ್ಯವನ್ನು ಮೂಡಿಸಿದೆ. ಹತ್ತೂರ ಒಡೆಯ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ವೈಭವದ ಜಾತ್ರೋತ್ಸವ ಆರಂಭಗೊಂಡಿದೆ. ಬನ್ನಿ ನಾವು ಕೂಡ ಜಾತ್ರಾ ಸಂಭ್ರಮದಲ್ಲಿ ಪಾಲ್ಗೊಂಡು ಶ್ರೀ ದೇವರ ಕೃಪೆಗೆ ಪಾತ್ರರಾಗೋಣ.
ಕೊಡಿ ಏರ್ಂಡ್ ಕೊಡಿ
ದೇವಸ್ಥಾನದ ಕೊಡಿಮರಕ್ ಏರಾವುನೆನ್ ಗರುಡೆ ಅತ್ತ್ಂಡ ಗರಡೆ ಪನ್ಪೆರ್. ನೇಮ ಇಜ್ಜಿಂಡ ಉತ್ಸವ ಸುರು ಆಪುನೆಕ್ ದುಂಬು ಉಂದೆನ್ ಕೊಡಿಮರಕ್ ಏರಾವೆರ್. ಅವೆನ್ ಕೊಡಿ ಏರುನ್ ಪಂಡ್ದ್ ಪನ್ಪೆರ್. ಆ ಜಾಗೆಡ್ ಆಪಿನ ಎಡ್ಡೆ ಕಜ್ಜೊಲೆಗ್, ಮಿತ್ತಲೋಕ (ದೇವ ಲೋಕ ) ದಕ್ಲೆನ್ ಲೆಪ್ಪರೆ ಗರುಡನ್ ಕೊಡಿಮರ ಏರಾವುನು ಪನ್ಪಿನವು ದುಂಬುದಕ್ಲೆನ ನಂಬೊಲಿಗೆ. ಒಂಜಿ ಗ್ರಾಮೊಡ್ ಕೊಡಿ ಏರ್ಂಡ್ ಪಂಡ್ದಾಂಡ ಆನಿಡ್ದ್ ಬೊಕ್ಕ ಕೆಲವು ಕ್ರಮಕುಲು ಉಲ್ಲ. ಆ ಗ್ರಾಮೊಡು ಒವ್ವೆ ಗೌಜಿ ಗಮ್ಮತ್ತ್ದ ಕಜ್ಜೊಲು ಆವರೆ ಇಜ್ಜಿ. ಕೊಡಿ ಏರುನ ಪೊರ್ತುಗ್ ಏರ್ ಉಪ್ಪುವೆರ ಕೊಡಿ ಜಾಯಿನ ಮುಟ್ಟ ಅಕುಲು ಊರು ಬುರ್ದ್ ಪೋವರೆ ಇಜ್ಜಿ. ಕೊಡಿ ಏರಿ ಬೊಕ್ಕ ಕೊಡಿಮರತ್ತ ತಿರ್ತ್ ಊರುದ ಬುಲೆಕ್ಲೆನ್, ತರಕಾರಿಲೆನ್, ಬಾರೆ, ಬೊಂಡ, ಕೈಲ್ ಮಾಂತ ಕಟ್ಟುವೆರ್. ಉತ್ಸವ, ಜಾತ್ರೆ ಶುರು ಆಯಿನೆಡ್ತ್ ಬುಕ್ಕ ಕೊಡಿ ಮರನ್ ತುವೆರ ಬಾರೀ ಪೊರ್ಲು. ದುಂಬುದ ಕಾಲೊಡು ಕೊಡಿ ಏರ್ಂಡ ಆ ಗ್ರಾಮೊಡು, ಊರುಡು ಸಂಭ್ರಮ. ಕೊಡಿ ಏರುನ ಸಮಯೊಡು ಆಕಾಶೊಡು ಕೆಲವು ಸರ್ತಿ ಜೀವಂತ ಗರುಡೆ ರಾಪುಂಡು. ಪುತ್ತೂರು ಜಾತ್ರೆದ ಕೊಡಿ ಏರ್ನಗ ಗರುಡೆ ರಾಪುನೆನ್ ತುವೊಲಿ. ಉಂದು ಜಾಗೆದ ಕಾರಣಿಕತೆನ್ ತೋಜಾವುಂಡು. ಪತ್ತೂರು ಕಾಪುನ ಮಾಮಲ್ಲ ಕಾರಣಿಕದ ಶಕ್ತಿ ಆಯಿನ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವೆರೆನ ಜಾತ್ರೆ ಇನಿಡ್ತ್ ಬುಕ್ಕ ಶುರು ಆಪುಂಡು. ಪತ್ತೂರ್ದ ಭಕ್ತೆರ್ ಸೇರುನ ಜಾತ್ರೆ ಇತ್ತ್ಂಡ ಅವು ಪುತ್ತೂರು ಜಾತ್ರೆ.