ಕೇಸರಿ ಶಲ್ಯ, ಪೇಟಾ ಧರಿಸಿದ ಮಹಿಳೆಯರು, ಕಾರ್ಯಕರ್ತರು, ಚೆಂಡೆ, ಗೊಂಬೆನೃತ್ಯ ವಿಶೇಷ ಆಕರ್ಷಣೆ
ಪುತ್ತೂರು: ಪುತ್ತೂರು ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಅವರು ಬೃಹತ್ ಸಂಖೆಯ ಕಾರ್ಯಕರ್ತರೊಂದಿಗೆ ಎ.20 ರಂದು ಪಾದಯಾತ್ರೆ ಮೂಲಕ ತಾಲೂಕು ಆಡಳಿತ ಸೌಧಕ್ಕೆ ತೆರಳಿ ನಾಮಪತ್ರ ಸಲ್ಲಿಸಲು ಕಾರ್ಯಕ್ರಮ ಆರಂಭಗೊಂಡಿದೆ.
ಬೆಳಿಗ್ಗೆ ಕಲ್ಲಾರೆ ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠ, ಮಹಾಮಾಯಿ ದೇವಸ್ಥಾನ, ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನ, ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿ ಪಾದಾಯಾತ್ರೆಗೆ ದೇವಳದ ಬಳಿಯಿಂದ ಚಾಲನೆ ನೀಡಲಾಯಿತು.ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಚಲನಚಿತ್ರ ನಟಿ ಬಿಜೆಪಿ ನಾಯಕ ಶೃತಿ, ಸಂಸದ ತೇಜಸ್ವಿ ಸೂರ್ಯ, ಶಾಸಕ ಸಂಜೀವ ಮಠಂದೂರು, ಬಿಜೆಪಿ ಜಿಲ್ಲಾಧ್ಯಕ್ಷ ಸಹಿತ ಹಲವಾರು ಮಂದಿ ಕೇಂದ್ರ ಮತ್ತು ರಾಜ್ಯದ ನಾಯಕರು, ಸಾವಿರಾರು ಮಂದಿ ಕಾರ್ಯಕರ್ತರು ಪಾದಯಾತ್ರೆಯಲ್ಲಿ ಭಾಗವಹಿಸಿದರು. ಪಾದಯಾತ್ರೆಯಲ್ಲಿ ಆರಂಭದಲ್ಲಿ ಅರೆ ಮಿಲಿಟರಿ ಪಡೆ ಬಂದೋಬಸ್ತ್ ನೊಂದಿಗೆ ಹಿಂದಿನಿಂದ ಮೈಕ್ ಅನೌನ್ಸ್ ಮೆಂಟ್ ವಾಹನ ಪೇಟ ಧರಿಸಿದ ಮಹಿಳೆಯರು, ಗೊಂಬೆ ಕುಣಿತ, ಚೆಂಡೆ ಸದ್ದು, ಶಲ್ಯ ಧರಿಸಿದ ಕಾರ್ಯಕರ್ತರು, ನಾಸಿಕ್ ಬ್ಯಾಂಡ್ ವಿಶೇಷ ಆಕರ್ಷಣೆಯಾಗಿತ್ತು.